ನ್ಯೂಸ್

ರಾಷ್ಟ್ರ ಮಟ್ಟದಲ್ಲಿ ವೈರಲ್ ಆಯ್ತು ವಿಡಿಯೋ; ನರ್ತಕಿ ಮೇಲೆ ಹಣ ತೂರಿದ ಕಾಂಗ್ರೆಸ್ ಮುಖಂಡ!

ಧಾರವಾಡ: ನಿನ್ನೆ ನರ್ತಕಿಯೊಬ್ಬರ ಮೇಲೆ ಹಣ ತೂರಿದ್ದ ಕಾಂಗ್ರೆಸ್​ ಮುಖಂಡನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದು ದಿನ ಬೆಳಗಾಗುವಷ್ಟರಲ್ಲಿ ಈ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ದೇಶದೆಲ್ಲೆಡೆ ವೈರಲ್ ಆಗಿದೆ. ಶಿವಶಂಕರ ಎಂಬ ಈ ಕಾಂಗ್ರೆಸ್ ಮುಖಂಡ ಧಾರವಾಡದವನು. ಅಷ್ಟೇ ಅಲ್ಲದೇ ಈತ ಮಾಜಿ ಸಚಿವ ವಿನಯ ಕುಲಕರ್ಣಿ ಪರಮಾಪ್ತ ಕೂಡ.

ಘಟನೆ ಹೇಗಾಯಿತು:

ಶಿವಶಂಕರ ಹಂಪಣ್ಣವರ, ಮದುವೆಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ. ಅಲ್ಲೇ ನೃತ್ಯ ಕಾರ್ಯಕ್ರಮವೂ ನಡೆಯುತ್ತಿತ್ತು. ಈ ವೇಳೆ ಶಿವಶಂಕರ ಹಂಪಣ್ಣವರ ನೃತ್ಯಗಾರ್ತಿ ಮೇಲೆ ಹಣ ತೂರಿ ಕುಣಿದಿದ್ದಾನೆ.

ಇಷ್ಟೆಲ್ಲಾ ಆಗಿದ್ದು ಆತನ ಸ್ನೇಹಿತನ ಮಗಳ ಮದುವೆಯ ಅರಿಶಿನ ಕಾರ್ಯಕ್ರಮದಲ್ಲಿ! ಕೌಟುಂಬಿಕ ಕಾರ್ಯಕ್ರಮದಲ್ಲಿ ಹಣ ತೂರಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದ್ದು ವಿಡಿಯೋ ಮಾತ್ರ ರಾಷ್ಟ್ರಮಟ್ಟದಲ್ಲಿ ವೈರಲ್ ಆಗಿದೆ.