viral video| ಯುವಕರು ಈ ಹುಟ್ಟುಹಬ್ಬ ಆಚರಣೆಯ ಸಂದರ್ಭದಲ್ಲಿ ಒಂದಲ್ಲಾ ಒಂದು ಅವಾಂತರವನ್ನ ಸೃಷ್ಠಿಮಾಡುವುದು ಇತ್ತೀಚೆಗೆ ಸಾಮಾನ್ಯ ಆಗ್ಬಿಟ್ಟಿದೆ. ಅಂದಹಾಗೆ ಮಧ್ಯಪ್ರದೇಶದ ಜಬಲ್ಪುರದ ಯುವ ಕಾಂಗ್ರೆಸ್ ಮುಖಂಡರೊಬ್ಬರು ಹುಟ್ಟು ಹಬ್ಬದ ಸಮಯದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗ್ತಿದೆ. ಮಾಜಿ ಸಂಸದ ಸಹೋದರನ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಸ್ಸು ಖಾನ್ ಎಂಬುವವರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ .
ಮಾಜಿ ಸಂಸದ ಮತ್ತು ಕಾಂಗ್ರೆಸ್ ಶಾಸಕ ಲಖನ್ ಘಂಘೋರಿಯಾ ಅವರ ಸಹೋದರ ಜೈ ಘಂಘೋರಿಯಾ ಅವರ ಹುಟ್ಟುಹಬ್ಬದ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಕಾಂಗ್ರೆಸ್ ಯುವ ಮುಖಂಡರು ಮತ್ತು ಕಾರ್ಯಕರ್ತರನ್ನು ಸಹ ಇಲ್ಲಿಗೆ ಆಹ್ವಾನಿಸಲಾಗಿತ್ತು. ಅವರಲ್ಲಿ ಅಸು ಖಾನ್ ಎಂಬುವವರು ಬಂದೂಕನ್ನು ಎತ್ತಿಕೊಂಡು ಗಾಳಿಯಲ್ಲಿ ಒಂದರ ನಂತರ ಒಂದರಂತೆ ಗುಂಡು ಹಾರಿಸಿ ಅಜಾಗರೂಕತೆಯಿಂದ ಸಂಭ್ರಮಾಚರಣೆ ನಡೆಸಿದ್ದಾರೆ.
ಇದನ್ನೂ ಓದಿ: ನಿಮ್ಮ ಮಗುವಿನ ಉತ್ತಮ ಕಲಿಕೆಗಾಗಿ ಯಾವ ಬಣ್ಣದ ಬ್ಯಾಗ್ ಖರೀದಿಸಬೇಕು; ವಾಸ್ತು ಶಾಸ್ತ್ರ ಹೇಳೋದೇನು?Vastu Tips
ಇನ್ನೂ ಖಾನ್ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಂತೆ, ಅಲ್ಲಿನ ಜನರು ಗಾಬರಿಗೊಂಡಿದ್ದಾರೆ. ಗುಂಡಿನ ಶಬ್ಧದಿಂದ ಜನರು ಆತಂಕಗೊಂಡಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇನ್ನೂ ವಿಡಿಯೋ ವೈರಲ್ ಆದ ನಂತರ, ಅಲ್ಲಿನ ಸ್ಥಳೀಯ ನಿವಾಸಿಗಳು ಸಹ ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಪೊಲೀಸ್ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
(ಏಜೆನ್ಸೀಸ್)
ಇನ್ನೂ ಇದೇ ರೀತಿಯ ಘಟನೆ ಏಪ್ರಿಲ್ 10, 2025 ರಂದು ಭೋಪಾಲ್‌ನಲ್ಲಿ ನಡೆದಿತ್ತು. ತಮ್ಮ ಸ್ನೇಹಿತನ ಹುಟ್ಟುಹಬ್ಬವನ್ನು ಆಚರಿಸಲು ನಾಲ್ವರು ಯುವಕರು ತಡರಾತ್ರಿ ಗುಂಡು ಹಾರಿಸಿದ್ದರು, ಇದರಿಂದಾಗಿ ಆ ನಾಲ್ವರು ಯುವಕರು ಜೈಲು ಪಾಲಾದರು. ಪೊಲೀಸರು ಅವರನ್ನು ಬಂಧಿಸಿ, ಬಂದೂಕು ಮತ್ತು ಐಷಾರಾಮಿ ಎಸ್‌ಯುವಿಯನ್ನು ಸಹ ವಶಪಡಿಸಿಕೊಂಡಿದ್ದರು.