ಆರೋಪಿ ಸತ್ಯಪ್ಪ 
ನ್ಯೂಸ್

ಗರ್ಭಿಣಿ ಮೇಲೆ ಹಲ್ಲೆ ಮಾಡಿದ ಕಾಂಗ್ರೆಸ್​ ಮುಖಂಡ; ಆಸ್ಪತ್ರೆಗೆ ದಾಖಲಾದ ಮಹಿಳೆ

ಕೋಲಾರ: ಕಾಂಗ್ರೆಸ್​ ಮುಖಂಡ ತನ್ನ ಮೇಲೆ ಹಲ್ಲೆ ಮಾಡಿದ್ದಾನೆಂದು ಮಹಿಳೆಯೊಬ್ಬಳು ಆರೋಪಿಸಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗರ್ಭಿಣಿಯಾಗಿರುವ ಈ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ತಬ್ರೇಜ್​ ಎಂಬಾತನ ಪತ್ನಿ ಪವಿತ್ರಾ ಎಂಬಾಕೆಯೇ ದೂರು ನೀಡಿರುವ ಮಹಿಳೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಎಂ.ಜಿ.ರಸ್ತೆಯಲ್ಲಿ ಈ ಪ್ರಕರಣ ನಡೆದಿದೆ. ಮನೆ ಮುಂದಿನ ರಸ್ತೆ ವಿಚಾರವಾಗಿ ನಡೆದ ಮಾತಿನ ಚಕಮಕಿ ಹಲ್ಲೆಯವರೆಗೂ ಹೋಗಿದೆ ಎನ್ನಲಾಗಿದೆ.

ಪುರಸಭೆಯ ಮಾಜಿ ಸದಸ್ಯನೂ ಆಗಿರುವ ಸತ್ಯಪ್ಪ ಕಾಂಗ್ರೆಸ್​ ಮುಖಂಡನಾಗಿದ್ದು, ಗುಂಪು ಕಟ್ಟಿಕೊಂಡು ಹಲ್ಲೆ ನಡೆಸಿದ್ದಾನೆಂದು ಮಹಿಳೆ ಆರೋಪಿಸಿದ್ದಾಳೆ. ಈ ಕುರಿತು ಶ್ರೀನಿವಾಸಪುರ ಠಾಣೆಯಲ್ಲಿ ದೂರು ದಾಖಲಿಸಿರುವ ಮಹಿಳೆ, ಹಲ್ಲೆಯಿಂದ ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.