ನ್ಯೂಸ್

Rahul Gandhi | ಭಾರತದ ವಿರುದ್ಧ ಹೋರಾಡುತ್ತೇನೆ ಎಂದಿದ್ದ ರಾಹುಲ್​; ದೇಶ ವಿರೋಧಿ ಹೇಳಿಕೆ ಹಿನ್ನಲೆ ಐವರ ವಿರುದ್ಧ ದೂರು ದಾಖಲು!

Rahul Gandhi: ದೇಶ ವಿರೋಧಿ ಹೇಳಿಕೆ ನೀಡಿದ್ದಕ್ಕಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಇತರ ಐದು ಹಿರಿಯ ಕಾಂಗ್ರೆಸ್ ನಾಯಕರ ವಿರುದ್ಧ ಶನಿವಾರ (ಸೆ 20) ಲಕ್ನೋದ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.

ಜನವರಿ 15 ರಂದು ದೆಹಲಿಯ ಕೋಟ್ಲಾ ರಸ್ತೆಯಲ್ಲಿರುವ ಹೊಸ ಕಾಂಗ್ರೆಸ್ ಪ್ರಧಾನ ಕಚೇರಿ ಇಂದಿರಾ ಭವನದ ಉದ್ಘಾಟನೆಯ ಸಂದರ್ಭದಲ್ಲಿ, ರಾಹುಲ್ ಗಾಂಧಿ ಈಗ ಬಿಜೆಪಿ, ಆರ್‌ಎಸ್‌ಎಸ್ ಮತ್ತು ಭಾರತ ರಾಷ್ಟ್ರದ ವಿರುದ್ಧ ಹೋರಾಡುತ್ತಿದ್ದೇನೆ ಎಂದಿದ್ದರು ಎಂದು ವರದಿಯಾಗಿದೆ. ಕೇಂದ್ರ ವಕೀಲರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಪಾಂಡೆ ಪ್ರಕರಣ ದಾಖಲಿಸಿದ್ದು, ಜನಪ್ರತಿನಿಧಿಗಳ ನ್ಯಾಯಾಲಯದ ವಿಶೇಷ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ACJM) ಅಲೋಕ್ ವರ್ಮಾ ಅವರು ದೂರನ್ನು ಸ್ವೀಕರಿಸಿದ್ದಾರೆ. ದೂರುದಾರರ ಹೇಳಿಕೆಯನ್ನು ದಾಖಲಿಸಲು ಅಕ್ಟೋಬರ್ 1 ರಂದು ವಿಚಾರಣೆಯನ್ನು ನಿಗದಿಪಡಿಸಿದ್ದಾರೆ.

ದೂರಿನಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರಲ್ಲದೆ , ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜ್ಯಸಭಾ ಸದಸ್ಯರಾದ ಕೆಸಿ ವೇಣುಗೋಪಾಲ್ ಮತ್ತು ಜೈರಾಮ್ ರಮೇಶ್ ಅವರನ್ನು ಹೆಸರಿಸಲಾಗಿದೆ. ವೇದಿಕೆ ಮೇಲಿದ್ದ ಉಳಿದ ನಾಯಕರು ರಾಹುಲ್ ಹೇಳಿಕೆಯನ್ನು ವಿರೋಧಿಸದೆ ಮೌನವಾಗಿದ್ದರಿಂದ ಇದರಲ್ಲಿ ಅವರು ಭಾಗಿದಾರರು ಎನ್ನುವಂತಾಗಿದೆ.

ದೇಶವನ್ನು ಅಸ್ಥಿರಗೊಳಿಸುವ ಉದ್ದೇಶಪೂರ್ವಕವಾಗಿಯೇ ಈ ಹೇಳಿಕೆ ನೀಡಲಾಗಿದೆ ಮತ್ತು ಇದು ವಿಭಜಕ ಮನಸ್ಥಿತಿ. ರಾಹುಲ್​ ಗಾಂಧಿ, ಕೆಲವು ನಿರ್ದಿಷ್ಟ ಅಪಾಯಕಾರಿ ಉದ್ದೇಶಕ್ಕಾಗಿ ದೇಶದ ಎಲ್ಲಾ ಪ್ರತಿಷ್ಠಿತ ಸಂಸ್ಥೆಗಳ ಕಾರ್ಯನಿರ್ವಹಣೆಯ ಬಗ್ಗೆ ಅನಗತ್ಯವಾಗಿ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಇದು ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುವ ಪಿತೂರಿಯ ಭಾಗ ಎಂದು ಆರೋಪಿಸಲಾಗಿದೆ.(ಏಜೆನ್ಸೀಸ್​​)