ಬೆಂಗಳೂರು: ಚಿತ್ರರಂಗ ಹಾಗೂ ರಾಜಕೀಯ ರಂಗದ ವಿಚಾರಗಳಿಗೆ ಸಂಬಂಧಿಸಿದಂತೆ ಆಗಾಗ ಮಧ್ಯಪ್ರವೇಶಿಸಿ ವಿವಾದಕ್ಕೀಡಾಗುತ್ತಿರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಇದೀಗ ಮೈಮೇಲೆ 'ಬಂಡೆ' ಎಳೆದುಕೊಂಡಿದ್ದಾರೆ.
ಅರ್ಥಾತ್ ಕನಕಪುರದ ಬಂಡೆ ಎಂದೇ ಕರೆಯಲ್ಪಡುವ ಡಿ.ಕೆ.ಶಿವಕುಮಾರ್ ಸಹೋದರರನ್ನು ಕೆಣಕಲು ಹೋಗಿ ಮತ್ತೆ ವಿವಾದಕ್ಕೀಡಾಗಿದ್ದಾರೆ. ಮಾತ್ರವಲ್ಲ, ಇದೀಗ ಆ ಸಂಬಂಧ ಸಂಬರಗಿ ಮೇಲೆ ದೂರು ಕೂಡ ದಾಖಲಾಗಿದೆ.
ಇದನ್ನೂ ಓದಿ: ಗಂಡ-ಹೆಂಡತಿ ಜಗಳದ ದುರ್ಲಾಭ ಪಡೆಯಲು ಯತ್ನಿಸಿದ ಪೊಲೀಸ್; ಇನ್ಸ್ಪೆಕ್ಟರ್-ಎಎಸ್ಐ ವಿರುದ್ಧ ದಾಖಲಾಯಿತು ಎಫ್ಐಆರ್
ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದ ಸಂದರ್ಭದಲ್ಲಿ ಕ್ರೈಸ್ತ ಸಮುದಾಯದ ಕುರಿತು ಅವಹೇಳನ ಮಾಡಿದ್ದಲ್ಲದೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ.ಸುರೇಶ್ ಅವರ ಬಗ್ಗೆಯೂ ಫೇಸ್ಬುಕ್ನಲ್ಲಿ ಅಪಮಾನಕಾರಿ ಪೋಸ್ಟ್ ಹಾಕಿದ್ದಾರೆ.
ಧಾರ್ಮಿಕ ಭಾವನೆ ಕೆಡಿಸುವ ಜತೆಗೆ ವೈಯಕ್ತಿಕ ನಿಂದನೆಯ ಪೋಸ್ಟ್ ಹಾಕಿರುವ ಸಂಬರಗಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂಬುದಾಗಿ ಸಿ.ಲಕ್ಷ್ಮೀನಾರಾಯಣ ಎಂಬವರು ದಕ್ಷಿಣ ವಿಭಾಗದ ಸಿಇಎನ್ ಪೊಲೀಸರಿಗೆ ದೂರು ನೀಡಿದ್ದಾರೆ.