ಚಾಮರಾಜನಗರ: ಹಾಸನದಲ್ಲಿ ನಡೆಯುತ್ತಿರುವ ಜನಕಲ್ಯಾಣ ಸಮಾವೇಶಕ್ಕೆ ಒಪ್ಪಂದದ ಮೇರೆಗೆ ರಾಜ್ಯ ಸಾರಿಗೆ ಬಸ್ಗಳನ್ನು ನೀಡಿರುವುದರಿಂದ ಚಾಮರಾಜನಗರದಲ್ಲಿ ಬಸ್ಗಳ ಕೊರತೆ ಉಂಟಾಗಿ ಪ್ರಯಾಣಿಕರು ಪರದಾಡುವಂತ (Stranded) ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ಪುಷ್ಪ-2 ನೋಡಿದವರಿಗೆ ಕಾಡುತ್ತಿದೆ ಈ ಪ್ರಶ್ನೆಗಳು: ವರ್ಷದ ಹಿಂದೆ ತೋರಿಸಿದ್ದು ಸುಳ್ಳಾ? ಉತ್ತರ ಯಾರು ಕೊಡ್ತಾರೆ? Pushpa 2
ನಗರದ ಡಿವಿಯೇಷನ್ ರಸ್ತೆಯಲ್ಲಿರುವ ಕೆಎಸ್ಆರ್ಟಿಸಿ ಉಪ ವಿಭಾಗದಿಂದ ಹಾಸನದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಜನಕಲ್ಯಾಣ ಸಮಾವೇಶಕ್ಕೆ 200ಕ್ಕಿಂತಲೂ ಅಧಿಕ ಬಸ್ಗಳು ತೆರಳಿವೆ. ಪರಿಣಾಮವಾಗಿ ನಗರದ ಬಸ್ ನಿಲ್ದಾಣದಲ್ಲಿ ಮೈಸೂರು, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಇನ್ನಿತರೆ ಕಡೆಗಳಿಗೆ ತೆರಳುವ ಪ್ರಯಾಣಿಕರು ಸೂಕ್ತ ಸಮಯಕ್ಕೆ ಬಸ್ ಇಲ್ಲದೆ ಪರದಾಡುವಂತಾಗಿದೆ.
ಬಸ್ಗಳಿಲ್ಲದೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣವು ಬಿಕೋ ಎನ್ನುತ್ತಿದ್ದು, ಬೆಳಗ್ಗಿನ ಸಮಯದಲ್ಲಿ ಸರ್ಕಾರಿ ಕೆಲಸ, ಶಾಲಾ-ಕಾಲೇಜು ಮತ್ತು ಇನ್ನಿತರೆ ಕಡೆಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಸಮಸ್ಯೆ ಅನುಭವಿಸುವಂತಾಗಿದೆ. ಬೆರಳೆಣಿಕೆಯ ಬಸ್ಗಳು ಬಂದಿದ್ದೇ ತಡ ಸೀಟ್ ಹಿಡಿಯಲು ಪ್ರಯಾಣಿಕರಲ್ಲಿ ನೂಕುನುಗ್ಗಲು ಉಂಟಾಗಿದೆ.