Tribute: ''ಉದ್ಯೋಗಂ ಪುರುಷ ಲಕ್ಷಣಃ'' ಎಂದು ಈ ಹಿಂದೆಯೇ ನಮ್ಮ ಪುರ್ವಜರು ಹೇಳಿದ್ದಾರೆ. ಸಾಮಾನ್ಯವಾಗಿ ಉದ್ಯೋಗ ಎಲ್ಲರಿಗೂ ಅತ್ಯವ್ಯಶಕ. ಕೈಯಲ್ಲಿ ಒಂದು ಕೆಲಸವಿದ್ದರೇ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಯುವಕರಿಗೆ ಉದ್ಯೋಗ ಸಿಗುವುದೇ ಕಷ್ಟಕರವಾಗಿದೆ. ಇಂತಹ ಉದಾಹರಣೆಗಳು ಇದೀಗ ಸಾಮಾನ್ಯವಾಗಿಬಿಟ್ಟಿವೆ. ಇದೀಗ ಯುವಕನೊಬ್ಬ 3 ವರ್ಷಗಳು ಕಾಲ ಕೆಲಸ ಹುಡುಕಿದರೂ ಜಾಬ್ ಸಿಕ್ಕಿಲ್ಲ. ಹೀಗಾಗಿ, ಕೆಲಸದ ಹುಡುಕಾಟದ ಬಗ್ಗೆ ತನ್ನ ಕಷ್ಟದವನ್ನು ನೆನಪಿಸಿಕೊಳ್ಳುವ ಮೂಲಕ ತನ್ನದೇ ಶ್ರದ್ಧಾಂಜಲಿ(RIP) ಫೋಟೋವೊಂದನ್ನು ಹಂಚಿಕೊಂಡಿದ್ದಾನೆ.
ಹೌದು, ಪ್ರಶಾಂತ್ ಹರಿದಾಸ್ ಎನ್ನುವ ಯುವಕ ಮೂರು ವರ್ಷಗಳಿಂದ ಎಷ್ಟೇ ಪ್ರಯತ್ನಪಟ್ಟರೂ ಕೆಲಸ ಸಿಕ್ಕಿಲ್ಲ. ಇದರಿಂದಾಗಿ ನಿರಾಸೆಗೊಂಡಿರುವ ಇತ ಲಿಂಕ್ಡಿನ್ ಫ್ಲಾಟ್ಫಾರ್ಮ್ನಲ್ಲಿ ಶ್ರದ್ಧಾಂಜಲಿ ಫೋಟೋ ಹಂಚಿಕೊಂಡಿದ್ದಾನೆ. ಈ ಮೂಲಕ ಕೆಲಸ ಸಿಗದಿರುವುದರ ಬಗ್ಗೆ ಹತಾಶೆಯ ಕೆಲ ನುಡಿಗಳನ್ನು ಬರೆದಿದ್ದಾರೆ.
''ಧನ್ಯವಾದಗಳು ಲಿಂಕ್ಡ್ಇನ್, ಉದ್ಯೋಗದಾತರಿಗೆ ಧನ್ಯವಾದಗಳು, ನನ್ನ ಅರ್ಜಿಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ಧನ್ಯವಾದಗಳು. ಉದ್ಯೋಗ ಹುಡುಕಲು ಪ್ರಯತ್ನಿಸುತ್ತಾ ನನ್ನ ಸಮಯ ಹಾಗೂ ಹಣವನ್ನು ವ್ಯರ್ಥ ಮಾಡಿದ್ದಕ್ಕಾಗಿ ಧನ್ಯವಾದಗಳು. ಈ ಪೋಸ್ಟ್ ನಂತರ ಯಾರೂ ನನ್ನನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವುದಿಲ್ಲ ಎಂದು ನನಗೆ ಚೆನ್ನಾಗಿಯೇ ತಿಳಿದಿದೆ, RIP ಎಂದು ಬರೆದುಕೊಂಡಿದ್ದಾನೆ''.
ಅಲ್ಲದೆ ನನಗೆ ಕೆಲಸ ಸಿಕ್ಕಿಲ್ಲ ಎಂದು ನಾನು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ನಾನು ಜೀವನದಲ್ಲಿ ಅನೇಕ ವಿಷಯಗಳನ್ನು ಅನುಭವಿಸಿದ್ದೇನೆ. ವಿಭಿನ್ನ ರುಚಿಯ ಆಹಾರ ತಿನ್ನುವುದರಲ್ಲಿ ಹೊಸ ಹೊಸ ಸ್ಥಳಗಳಿಗೆ ಭೇಟಿ ನೀಡುವುದರಲ್ಲಿ ಆಸಕ್ತಿ ಇದೆ. ನಾನು ಉದ್ಯೋಗ ಪಡೆಯುವುದರಲ್ಲಿ ಸೋತಿದ್ದರೂ ನಾನು ಒಂಟಿಯಾಗಿ ಬದುಕಲು ಸಾಧ್ಯವಿಲ್ಲ, ಹೀಗಾಗಿ ನಾನು ಬದುಕಬೇಕು!” ಎಂದು ಸ್ಪಷ್ಟವಾಗಿ ಹೇಳಿದ್ದಾನೆ.ಇದೀಗ ಈ ಪೋಸ್ಟ್ ಭಾರೀ ವೈರಲ್ ಆಗಿದ್ದು, ನೆಟಿಜನ್ ತರೇಹವಾರಿ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.(ಏಜೆನ್ಸೀಸ್)