ಬೆಂಗಳೂರು: ಕರ್ನಾಟಕದ ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟವು ಇಂದು 2023ರ ಕಾಮೆಡ್ ಕೆ ಪರೀಕ್ಷೆಯ ಫಲಿತಾಂಶವನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಬೆಂಗಳೂರಿನ ಎನ್. ನಂದ ಗೋಪಿ ಕೃಷ್ಣ ಈ ಪರೀಕ್ಷೆಯಲ್ಲಿ ಮೊದಲನೇ ರ‍್ಯಾಂಕ್ ಪಡೆದಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಿಂದ ತೊಂದರೆ ಸಾಧ್ಯತೆ: ಕಾರ್ಯಕರ್ತರಿಗೆ ಸಹಾಯವಾಣಿ ನಂಬರ್ ಬಿಡುಗಡೆ ಮಾಡಿದ ಬಿಜೆಪಿ
COMEDK UGET ಪ್ರವೇಶ ಪರೀಕ್ಷೆಯನ್ನು 2023ರ ಮೇ 28ರಂದು ನಡೆಸಲಾಗಿತ್ತು. ಈ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಫಲಿತಾಂಶವನ್ನು ಪರೀಕ್ಷಿಸಬಹುದಾಗಿದೆ.
ಕಾಮೆಡ್ ಕೆ ಫಲಿತಾಂಶ ನೋಡುವುದು ಹೇಗೆ?
ಅಭ್ಯರ್ಥಿಗಳು ಮುಂದಿನ ಹಂತಗಳನ್ನು ಅನುಸರಿಸುವ ಮೂಲಕ ಕಾಮೆಡ್ ಕೆ ಫಲಿತಾಂಶಗಳನ್ನು ಪರಿಶೀಲಿಸಬಹುದಾಗಿದೆ. ಕಾಮೆಡ್ ಕೆನ ಅಧಿಕೃತ ಸೈಟ್ Comedk.orgಗೆ ಭೇಟಿ ನೀಡಿ. ಮುಖಪುಟದಲ್ಲಿ ಲಭ್ಯವಿರುವ COMEDK ಫಲಿತಾಂಶ 2023 ಲಿಂಕ್ ಮೇಲೆ ಕ್ಲಿಕ್ ಮಾಡಿ. ಲಾಗಿನ್ ವಿವರಗಳನ್ನು ನಮೂದಿಸಿದರೆ, ನಿಮ್ಮ ಫಲಿತಾಂಶ ಪರದೆಯ ಪ್ರಕಟವಾಗುತ್ತದೆ.(ಏಜೆನ್ಸೀಸ್)