ಬೊಗೊಟಾ: ಕೊಲಂಬಿಯಾದ ತೃತೀಯ ಲಿಂಗಿ ಮಾಡೆಲ್ ಒಬ್ಬರು ತಮ್ಮ ಪತಿಯ 8 ತಿಂಗಳು ಬೇಬಿ ಬಂಪ್ಗೆ ಕಿಸ್ ಮಾಡುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿವೆ.
ಪುರುಷನಾಗಿ ಹುಟ್ಟಿದ ಡನ್ನಾ ಸುಲ್ತಾನಾ ಇದೀಗ ಮಹಿಳೆಯಾಗಿ ಗುರುತಿಸಿಕೊಂಡಿದ್ದು, ಮಹಿಳೆಯಾಗಿ ಹುಟ್ಟಿ ಪುರುಷನಾಗಿ ಗುರತಿಸಿಕೊಂಡಿರುವ ಎಸ್ತಾಬೆನ್ ಲ್ಯಾಂಡ್ರೌ ಇದೀಗ 8 ತಿಂಗಳ ಬೇಬಿ ಬಂಪ್ ಹೊಂದಿದ್ದು, ಇಬ್ಬರು ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ 219,000 ಫಾಲೋವರ್ಸ್ ಹೊಂದಿರುವ ಡನ್ನಾ ಸುಲ್ತಾನಾ, ಪ್ರೀತಿ ತುಂಬಿದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಲವ್ ಇಸ್ ಲವ್ ಎಂದು ಹ್ಯಾಷ್ಟ್ಯಾಗ್ ನೀಡಿದ್ದಾರೆ. ಸ್ವಾಭಾವಿಕವಾಗಿ ಗರ್ಭದಾರಣೆಯಾಗಿದ್ದು, ಮೇಲ್ನೋಟಕ್ಕೆ ಉಲ್ಟಾಪಲ್ಟಾ ರೀತಿ ಕಾಣುವ ದಂಪತಿ ತಮ್ಮ ಸ್ವಾಭಾವಿಕ ಅಂಗಾಂಗಗಳನ್ನು ಹಾಗೇ ಉಳಿಸಿಕೊಂಡಿದ್ದಾರೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮೊದಲ ಪ್ರಸವದ ನಿರೀಕ್ಷೆಯಲ್ಲಿರುವ ದಂಪತಿ ತುಂಬಾ ಒತ್ತಡದಲ್ಲಿಯೂ ಇದ್ದಾರೆ. ಆಗಾಗಾ ವೈದ್ಯರ ಬಳಿ ತೆರಳಿ ಪರಿಶೀಲನೆ ನಡೆಸಿದ್ದು, ಎಂಟು ತಿಂಗಳ ಗರ್ಭಧಾರಣೆಯ ಸಹಜ ಲಕ್ಷಣಗಳು ಇವೆ. ವಿಶೇಷವಾಗಿ ಮಗು ಸ್ವಲ್ಪ ದಪ್ಪವಾಗಿದ್ದು, ಯಾವುದೇ ತೊಂದರೆಯಿಲ್ಲದೆ ಹೆರಿಗೆ ಆಗುತ್ತದೆ ಎಂಬ ಭರವಸೆಯನ್ನು ವೈದ್ಯರು ನೀಡಿದ್ದಾರಂತೆ. ಹೀಗಾಗಿ ಖುಷಿಯಾಗಿರುವ ದಂಪತಿ ಆ ಕ್ಷಣಕ್ಕಾಗಿ ಎದುರು ನೋಡುತ್ತಿದ್ದಾರೆ.
ಈ ಮಧ್ಯೆ ಡನ್ನಾ ಸುಲ್ತಾನಾ ವಿಡಿಯೋ ಸಹ ಶೇರ್ ಮಾಡಿದ್ದು, ಎಸ್ತಾಬೆನ್ ಬೇಬಿ ಬಂಪ್ಗೆ ಚುಂಬಿಸಿ, ಕ್ಯಾಮೆರಾಗೆ ಪೋಸ್ ನೀಡಿ ಮಂದಹಾಸ ಬೀರಿದ್ದಾರೆ. ವಿಶೇಷವೆಂದರೆ ಡನ್ನಾ ಹಾಗೂ ಎಸ್ತಾಬೆನ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಬೆಂಬಲಗಳು ವ್ಯಕ್ತವಾಗುತ್ತಿವೆ. ಹೆರಿಗೆ ಯಾವುದೇ ತೊಂದರೆಯಿಲ್ಲದೇ ಸುಸೂತ್ರವಾಗಿ ನಡೆಯಲಿ ಎಂದು ಹಾರೈಸಿದ್ದಾರೆ. (ಏಜೆನ್ಸೀಸ್)