ಬೆಂಗಳೂರು: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಭಾರತರತ್ನ ಪ್ರಣಬ್ ದಾ ಅವರ ಸಾವಿನ ಸುದ್ಧಿ ದುಃಖ ತಂದಿದೆ. ಪ್ರಣಬ್ ಮುಖರ್ಜಿಯವರು ರಾಜಕೀಯ ಕುಶಲತೆ, ಅಪಾರ ಜ್ಞಾನ, ನೀತಿ ರಚನೆಗಳಿಂದ ಸದಾ ಜನಮಾನಸದಲ್ಲಿ ಉಳಿಯುತ್ತಾರೆ. ಅಗಲಿದ ಅವರ ಆತ್ಮಕ್ಕೆ ನನ್ನ ಗೌರವಪೂರ್ವಕ ನಮನಗಳು..ಓಂ ಶಾಂತಿ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ‘ದೆಹಲಿಗೆ ಹೊಸಬನಾಗಿದ್ದ ನನಗೆ ಮಾರ್ಗದರ್ಶನ ನೀಡಿ, ಆಶೀರ್ವದಿಸಿದವರು ಪ್ರಣಬ್ ಮುಖರ್ಜಿ’ -ಪ್ರಧಾನಿ ಟ್ವೀಟ್
ಹಾಗೇ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಟ್ವೀಟ್ ಮಾಡಿ, ಭಾರತ ರತ್ನ, ಪದ್ಮವಿಭೂಷಣ, ಗೌರವಾನ್ವಿತ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ವಿಧಿವಶರಾಗಿದ್ದು, ತೀವ್ರ ಆಘಾತವನ್ನುಂಟುಮಾಡಿದೆ. ಅವರ ಆತ್ಮಕ್ಕೆ ದೇವರು ಸದ್ಗತಿ ನೀಡಲಿ. ಅಭಿಮಾನಿಗಳಿಗೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಸಂಸದರಾದ ಸುಮಲತಾ ಅಂಬರೀಷ್, ಪ್ರತಾಪ್ ಸಿಂಹ, ಸಚಿವರಾದ ಜೆ.ಸಿ.ಮಾಧುಸ್ವಾಮಿ, ಡಾ. ಕೆ.ಸುಧಾಕರ್, ಸುರೇಶ್ ಕುಮಾರ್ ಮತ್ತಿತರರು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಣಬ್ ಮುಖರ್ಜಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.