More

    ‘ದೆಹಲಿಗೆ ಹೊಸಬನಾಗಿದ್ದ ನನಗೆ ಮಾರ್ಗದರ್ಶನ ನೀಡಿ, ಆಶೀರ್ವದಿಸಿದವರು ಪ್ರಣಬ್​ ಮುಖರ್ಜಿ’ -ಪ್ರಧಾನಿ ಟ್ವೀಟ್​

    ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸರಣಿ ಟ್ವೀಟ್​ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ತಾವು ಅವರೊಂದಿಗೆ ಇದ್ದ ಫೋಟೋಗಳನ್ನೂ ಶೇರ್ ಮಾಡಿಕೊಂಡು, ಹಳೇ ನೆನಪುಗಳನ್ನು ಹಂಚಿಕೊಂಡಿದ್ದಾರೆ.

    2014ರಲ್ಲಿ ನಾನು ದೆಹಲಿಗೆ ಹೊಸಬನಾಗಿದ್ದೆ. ಆ ಸಮಯದಲ್ಲಿ ಪ್ರಣಬ್​ ಮುಖರ್ಜಿಯವರು ನನಗೆ ಆಶೀರ್ವದಿಸಿ, ಮಾರ್ಗದರ್ಶನ, ಬೆಂಬಲ ನೀಡಿದರು. ಅವರೊಂದಿಗೆ ನಾನು ನಡೆಸಿದ ಮಾತುಕತೆ, ಸಂವಹನ ಯಾವತ್ತೂ ನನಗೆ ಖುಷಿಕೊಡುವಂಥದ್ದಾಗಿದೆ. ಪ್ರಣಬ್​ ಮುಖರ್ಜಿಯವರ ಕುಟುಂಬ, ಸ್ನೇಹಬಳಗ, ದೇಶಾದ್ಯಂತ ಇರುವ ಬೆಂಬಲಿಗರಿಗೆ ನನ್ನ ಸಾಂತ್ವನಗಳು ಎಂದು ಮೋದಿಯವರು ಮೊದಲ ಟ್ವೀಟ್​ನಲ್ಲಿ ತಿಳಿಸಿದ್ದಾರೆ.  

    ಪ್ರಣಬ್​ ಮುಖರ್ಜಿಯವರು ರಾಷ್ಟ್ರಪತಿಯಾದ ನಂತರ ರಾಷ್ಟ್ರಪತಿ ಭವನಕ್ಕೆ ಸಾಮಾನ್ಯ ಜನರ ಪ್ರವೇಶವನ್ನು ಇನ್ನಷ್ಟು ಸುಗಮಗೊಳಿಸಿದರು. ಅಷ್ಟೇ ಅಲ್ಲ, ಕಲಿಕೆ, ನಾವೀನ್ಯತೆ, ಸಂಸ್ಕೃತಿ, ವಿಜ್ಞಾನ, ಸಾಹಿತ್ಯದ ಕೇಂದ್ರವನ್ನಾಗಿ ಪರಿವರ್ತಿಸಿದರು. ಪ್ರಮುಖ ವಿಚಾರಗಳಲ್ಲಿ ಅವರು ನೀಡಿದ ಸಲಹೆಗಳನ್ನು ನಾನೆಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್​ ​ಮುಖರ್ಜಿ ನಿಧನ

    ತಮ್ಮ ರಾಜಕೀಯ ಜೀವನದಲ್ಲಿ ಆರ್ಥಿಕ ಮತ್ತು ಕಾರ್ಯತಂತ್ರದ ಸಚಿವಾಲಯಗಳಲ್ಲಿ ಕಾರ್ಯ ನಿರ್ವಹಿಸಿ, ಮರೆಯಲಾಗದ ಕೊಡುಗೆಗಳನ್ನು ನೀಡಿದ್ದಾರೆ. ಪ್ರಣಬ್​ಮುಖರ್ಜಿ ಅತ್ಯುತ್ತಮ ಸಮಸದೀಯ ಪಟುವಾಗಿದ್ದರು. ಮಾತು, ನಿರ್ಧಾರಗಳೆಲ್ಲ ಸ್ಪಷ್ಟವಾಗಿರುತ್ತಿತ್ತು..ಹಾಗೇ ಹಾಸ್ಯ ಮಾಡುತ್ತಿದ್ದರು ಎಂದೂ ನೆನಪಿಸಿಕೊಂಡಿದ್ದಾರೆ.

    ಭಾರತರತ್ನ ಪ್ರಣಬ್​ ಮುಖರ್ಜಿ ಅವರ ನಿಧನಕ್ಕೆ ಇಡೀ ದೇಶವೇ ದುಃಖ ವ್ಯಕ್ತಪಡಿಸುತ್ತಿದೆ. ಈ ರಾಷ್ಟ್ರದ ಅಭಿವೃದ್ಧಿ ಪಥದಲ್ಲಿ ಅಳಿಸಲಾಗದ ಗುರುತು ಸೃಷ್ಟಿಸಿ ಹೋಗಿದ್ದಾರೆ. ಅವರೊಬ್ಬ ಮೇಧಾವಿ, ಉನ್ನತ ರಾಜನೀತಿಜ್ಞ, ಸಮಾಜದ ಎಲ್ಲವರ್ಗದವರೂ ಇಷ್ಟಪಡುತ್ತಿದ್ದ ರಾಜಕಾರಣಿ ಎಂದು ಮೋದಿಯವರು ಟ್ವೀಟ್​ನಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್)

    ದೇಶೀಯ ಕರೊನಾ ಲಸಿಕೆ ಕೊವಾಕ್ಸಿನ್​ ಇನ್ನಷ್ಟು ಹತ್ತಿರ; ಎರಡನೆಯ ಹಂತದ ಪರೀಕ್ಷೆಗೆ ಸಿದ್ಧತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts