More

    ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್​ ​ಮುಖರ್ಜಿ ನಿಧನ

    ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿಯವರು ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ನಿನ್ನೆ ರಾತ್ರಿಯಿಂದಲೇ ಅವರ ಆರೋಗ್ಯ ಹದಗೆಟ್ಟಿತ್ತು. ಶ್ವಾಸಕೋಶದ ಸೋಂಕು ಉಲ್ಬಣಗೊಂಡು ಸೆಪ್ಟಿಕ್​ ಆಗಿತ್ತು ಎಂದು ಇಂದು ಬೆಳಗ್ಗೆಯಷ್ಟೇ ಆರ್ಮಿ ಆಸ್ಪತ್ರೆ ಮಾಹಿತಿ ನೀಡಿತ್ತು.

    ಪ್ರಣಬ್​ ಮುಖರ್ಜಿ ಮೃತಪಟ್ಟಿದ್ದನ್ನು ಅವರ ಪುತ್ರ ಅಭಿಜಿತ್​ ಮುಖರ್ಜಿ ಅವರು ಟ್ವೀಟ್​ ಮಾಡಿ ತಿಳಿಸಿದ್ದಾರೆ. ನನ್ನ ತಂದೆ ಪ್ರಣಬ್​ ಮುಖರ್ಜಿ ಅವರು ನಿಧನರಾಗಿದ್ದಾರೆ ಎಂಬುದನ್ನು ಭಾರವಾದ ಹೃದಯದಿಂದ ನಿಮಗೆಲ್ಲರಿಗೂ ತಿಳಿಸುತ್ತಿದ್ದೇನೆ. ದೆಹಲಿಯ ಆರ್​ಆರ್​ ಆಸ್ಪತ್ರೆಯ ವೈದ್ಯರು ಅತ್ಯುತ್ತಮವಾಗಿ ಚಿಕಿತ್ಸೆ ನೀಡಿದ್ದರು. ಅವರ ಆರೋಗ್ಯಕ್ಕಾಗಿ ಈ ದೇಶದ ಜನರು ಪ್ರಾರ್ಥಿಸಿದ್ದರು. ಅವರೆಲ್ಲರಿಗೂ ನಾನು ಕೈಮುಗಿದು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

    ಮಿದುಳು ಸರ್ಜರಿಗಾಗಿ ದೆಹಲಿ ಆರ್ಮಿ ಆಸ್ಪತ್ರೆಗೆ ದಾಖಲಾಗಿದ್ದ ಪ್ರಣಬ್​ ಮುಖರ್ಜಿ ನಂತರ ಸಂಪೂರ್ಣ ಕೋಮಾಕ್ಕೆ ಜಾರಿದ್ದರು. ಅವರಲ್ಲಿ ಕೊವಿಡ್​-19 ಸೋಂಕು ಕೂಡ ಕಾಣಿಸಿಕೊಂಡಿತ್ತು. ಅವರನ್ನು ವೆಂಟಿಲೇಟರ್​ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು.

    ಹಿರಿಯ ಕಾಂಗ್ರೆಸ್​ ನಾಯಕ ಪ್ರಣಬ್​ ಮುಖರ್ಜಿ ಮೂಲತಃ ಪಶ್ಚಿಮಬಂಗಾಳದ ಬಿರ್ಬಮ್​ ಜಿಲ್ಲೆಯ ಮಿರಾಟಿ ಪಟ್ಟಣದವರು. ಯುಪಿಎ ಸರ್ಕಾರದ ಅವಧಿಯಲ್ಲಿ ಹಣಕಾಸು, ಗೃಹ ಹಾಗೂ ರಕ್ಷಣಾ ಮಂತ್ರಿಯಾಗಿ ಕಾರ್ಯನಿರ್ವಹಿಸಿದವರು. ನಂತರ 2012 ರಿಂದ 2017ರವರೆಗೆ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದಾರೆ. 2017ರಲ್ಲಿ ತಮ್ಮ ಅವಧಿ ಮುಗಿದ ನಂತರ ಮತ್ತೆ ರಾಜಕೀಯದಲ್ಲಿ ಮುಂದುವರಿಯಲು ನಿರಾಕರಿಸಿದರು. ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ದೂರ ಉಳಿದರು.
    2008ರಲ್ಲಿ ಪದ್ಮವಿಭೂಷಣ ಮತ್ತು 2019ರಲ್ಲಿ ಭಾರತ ರತ್ನ ಗೌರವದಿಂದ ಪುರಸ್ಕೃತರಾಗಿದ್ದಾರೆ. (ಏಜೆನ್ಸೀಸ್​)

    ರೈನಾ ಸಿಎಸ್​ಕೆ ತಂಡದಲ್ಲಿ ಮುಂದುವರಿಯುವುದು ಅನುಮಾನ; ‘ಅವರ ದಾರಿ ನೋಡಿಕೊಳ್ಳಲಿ’ ಎಂದ ಮಾಲೀಕ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts