More

    ಬಾಲ್ಕನಿ ಕೊಠಡಿ ಕೊಟ್ಟಿಲ್ಲವೆಂದು ಸಿಎಸ್​​ಕೆಯನ್ನೇ ತೊರೆದ ಸುರೇಶ್​ ರೈನಾ…?!

    ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಉಪನಾಯಕ ಸುರೇಶ್​ ರೈನಾ ದುಬೈನಿಂದ ವಾಪಸ್​ ಆಗಿದ್ದಾರೆ. ಸುರೇಶ್​ ರೈನಾ ಅವರ ಹತ್ತಿರದ ಸಂಬಂಧಿಗಳಿಗೆ ತೊಂದರೆ ಆಗಿದ್ದರಿಂದ ಅವರು ಏಕಾಏಕಿ ವಾಪಸ್​ ಬಂದಿದ್ದಾರೆ ಹಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು.

    ಹಾಗೇ, ಚೆನ್ನೈ ಸೂಪರ್​ ಕಿಂಗ್ಸ್ ತಂಡದಲ್ಲಿ ಹಲವರಿಗೆ ಕರೊನಾ ದೃಢಪಟ್ಟಿದ್ದರಿಂದ ಸುರೇಶ್​ ರೈನಾ ಆತಂಕಗೊಂಡಿದ್ದರು. ಅವರನ್ನು ತಂಡದ ಮ್ಯಾನೇಜ್​​ಮೆಂಟ್​ ಎಷ್ಟೇ ಸಮಾಧಾನ ಮಾಡಿದರೂ ಅವರು ಭಾರತಕ್ಕೆ ವಾಪಸ್​ ಹೋಗಿದ್ದಾರೆ ಎಂದೂ ಮೂಲಗಳು ತಿಳಿಸಿದ್ದವು. ಒಟ್ಟಿನಲ್ಲಿ ಸುರೇಶ್​ ರೈನಾ ಏಕಾಏಕಿ ವಾಪಸ್​ ಆಗಲು ನಿಖರ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ.

    ರೈನಾ ಅಭಿಮಾನಿಗಳು..ಸಿಎಸ್​ಕೆ ಅಭಿಮಾನಿಗಳಂತೂ ಸದ್ಯ ಫುಲ್​ ಶಾಕ್​​ನಲ್ಲಿದ್ದಾರೆ. ಹೀಗಿರುವಾಗ ಸಿಎಸ್​ಕೆ ಮಾಲೀಕ ಎನ್​. ಶ್ರೀನಿವಾಸನ್​ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ರೈನಾ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವರಿಗೆ ಯಶಸ್ಸೆಂಬುದು ತಲೆಗೆ ಹತ್ತುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಟಿ20 ಪಂದ್ಯದ ವೇಳೆಯೂ ಆಕಳಿಸಿ ಟ್ರೋಲ್​ಗೆ ಒಳಗಾದ ಪಾಕ್​ ಕ್ರಿಕೆಟಿಗ ಸರ್ಫ್ರಾಜ್​ ಅಹ್ಮದ್​!

    ಕೆಲವು ಕ್ರಿಕೆಟರ್​​ಗಳು ಹಳೇ ಕಾಲದ ನಟ-ನಟಿಯರಂತೆ ಸಿಡುಕು ಮನೋಧರ್ಮದವಾಗಿದ್ದಾರೆ. ಚೆನ್ನೈ ಸೂಪರ್​ ಕಿಂಗ್ಸ್​ ಒಂದು ಕುಟುಂಬದಂತೆ ಇದೆ. ತಂಡದ ಹಿರಿಯ ಆಟಗಾರರೆಲ್ಲ ಪರಸ್ಪರ ಹೊಂದಿಕೊಂಡಿದ್ದಾರೆ. ನಾನೂ ಅಷ್ಟೇ, ಯಾರಿಗಾದರೂ ಇಲ್ಲಿ ಸಂತೋಷವಾಗಿರಲು ಸಾಧ್ಯವಾಗುತ್ತಿಲ್ಲ ಎಂದರೆ ಹೊರಡಬಹುದು ಎಂದು ಹೇಳಿಬಿಟ್ಟಿದ್ದೇನೆ. ಯಶಸ್ಸು ತಲೆಗೆ ಏರಿದಾಗ ನಾವೇನೂ ಹೇಳಲು ಸಾಧ್ಯವಿಲ್ಲ ಎಂದು ಶ್ರೀನಿವಾಸನ್​ ಬೇಸರ ಹೊರಹಾಕಿದ್ದಾರೆ.

    ಇನ್ನು ಪಿಟಿಐ ವರದಿ ಪ್ರಕಾರ ಸುರೇಶ್​ ರೈನಾ ತಂಡವನ್ನು ಬಿಟ್ಟು ವಾಪಸ್​ ಬರಲು ಕಾರಣ ಕೊಠಡಿ ವಿಚಾರದಲ್ಲಿ ಉಂಟಾದ ಅಸಮಾಧಾನ. ಕೊವಿಡ್-19 ಇರುವುದರಿಂದ ನನಗೂ ಪ್ರತ್ಯೇಕ ಕೊಠಡಿ ಬೇಕು. ನಾಯಕ ಎಂ.ಎಸ್.ಧೋನಿಗೆ ನೀಡಿರುವಂಥ, ಬಾಲ್ಕನಿ ಇರುವ ರೂಂನ್ನು ನನಗೂ ಕೊಡಿ ಎಂದು ಸುರೇಶ್​ ರೈನಾ ಕೇಳಿದ್ದಾರೆ. ಆದರೆ ಸಿಎಸ್​ಕೆ ನಿಯಮದ ಪ್ರಕಾರ, ಕೋಚ್​, ಕ್ಯಾಪ್ಟನ್​ ಮತ್ತು ಟೀಂ ಮ್ಯಾನೇಜರ್​​ಗೆ ಮಾತ್ರ ವಿಶೇಷ ಕೊಠಡಿ ಸೌಲಭ್ಯ ಇರುತ್ತದೆ. ಆದರೆ ರೈನಾ ಈ ಬಾರಿ ತಮಗೂ ಬೇಕೆಂದು ಬೇಡಿಕೆ ಇಟ್ಟು, ಅದನ್ನು ಟೀಂ ಮ್ಯಾನೇಜ್​​ಮೆಂಟ್ ನಿರಾಕರಿಸಿದ್ದಕ್ಕೆ ಕುಪಿತಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೇ ವಿಚಾರವಾಗಿ ಕ್ಯಾಪ್ಟನ್ ಧೋನಿಯವರೂ ಸುರೇಶ್​ ರೈನಾರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ಪ್ರಯೋಜನವಾಗಲಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಠಾಣೆಯ ಬಳಿಯೇ ಪೊಲೀಸ್ ಅಧಿಕಾರಿಯ ಮೇಲೆ ದಾಳಿ ಮಾಡಿದ ರೊಚ್ಚಿಗೆದ್ದ ಎಮ್ಮೆ; ಭಯಾನಕ ವಿಡಿಯೋ ವೈರಲ್​

    ಸುರೇಶ್​ ರೈನಾ ಸಿಎಸ್​ಕೆ ತಂಡದಿಂದ ಹೋಗಲು ಕಾರಣ ಯಾವುದೇ ಇರಬಹುದು. ಆದರೆ ಅವರಿನ್ನು ಈ ಬಾರಿಯ ಐಪಿಎಲ್​ಗೆ ಮರಳುವ ಸಾಧ್ಯತೆ ತೀರ ಕಡಿಮೆ ಎಂದು ಹೇಳಲಾಗಿದೆ. ಅಷ್ಟೇ ಏಕೆ, ಮುಂದಿನ ವರ್ಷದ ಐಪಿಎಲ್​​ನಲ್ಲೂ ಸಿಎಸ್​ಕೆಯಲ್ಲಿ ರೈನಾ ಆಡಲಾರರು ಎಂದು ಟೀಂ ಮೂಲಗಳೇ ಮಾಹಿತಿ ನೀಡಿವೆ.

    ಈ ಸೀಸನ್​​​ನಲ್ಲಂತೂ ಸುರೇಶ್​ ರೈನಾ ಲಭ್ಯ ಇರುವುದಿಲ್ಲ ಎಂದು ಸಿಎಸ್​ಕೆ ಅಧಿಕೃತ ಹೇಳಿಕೆಯನ್ನೇ ಬಿಡುಗಡೆ ಮಾಡಿದೆ. ನಿವೃತ್ತರಾಗಿರುವ ಅಥವಾ ಈ ಬಾರಿ ಇಲ್ಲಿ ಆಡದಿರುವ ಯಾವುದೇ ಕ್ರಿಕೆಟರ್​ ಮರಳಿ ತಂಡಕ್ಕೆ ಬರುವುದು ಅಸಂಭವ. ಬಹುಶಃ ಅವರು ಮುಂದಿನ ಐಪಿಎಲ್​ ಹರಾಜಿಗೆ ಮರಳಬಹುದು ಮತ್ತು ಬೇರೆ ಯಾರಾದರೂ ಅವರನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಸಿಎಸ್​ಕೆ ಮ್ಯಾನೇಜ್​ಮೆಂಟ್​ ತನ್ನ ಅಧಿಕೃತ ಹೇಳಿಕೆಯಲ್ಲಿ ಉಲ್ಲೇಖಿಸಿದೆ ಎನ್ನಲಾಗಿದೆ. (ಏಜೆನ್ಸೀಸ್​)

    ಸುರೇಶ್​ ರೈನಾ ಬಳಿಕ ಸಿಎಸ್​ಕೆ ಸ್ಪಿನ್ನರ್​ ಹರ್ಭಜನ್​ ಸಿಂಗ್​ ಕೂಡ ಐಪಿಎಲ್​ನಿಂದ ಹಿಂದೆ ಸರಿಯುವ ಸಾಧ್ಯತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts