More

    ಮದ್ಯವರ್ಜನ ಶಿಬಿರ ಸಮಾಲೋಚನಾ ಸಭೆ

    ಕಾಸರಗೋಡು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜನ ಜಾಗೃತಿ ವೇದಿಕೆ ಹಾಗೂ ಯೋಜನೆ ವಲಯ ಒಕ್ಕೂಟ, ವಿವಿಧ ಸಮಿತಿ ಸಹಕಾರದೊಂದಿಗೆ ಸಾಮಾಜಿಕ ಸ್ವಾಸ್ಥೃ ಸಂಕಲ್ಪದೊಂದಿಗೆ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಮದ್ಯವರ್ಜನ ಶಿಬಿರ ಪೆರ್ಲದಲ್ಲಿ ನಡೆಸಲು ತೀರ್ಮಾನಿಸಲಾಯಿತು.

    ಈ ಬಗ್ಗೆ ಪೆರ್ಲ ಸನಿಹದ ಇಡಿಯಡ್ಕದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಸಾಮಾಜಿಕ, ಧಾರ್ಮಿಕ ಮುಂದಾಳು ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಯೋಜನೆ ನಿರ್ದೇಶಕ ಪ್ರವೀಣ್ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು.

    ಜನ ಜಾಗೃತಿ ವೇದಿಕೆ ಉಡುಪಿ ವಲಯಾಧಿಕಾರಿ ಗಣೇಶ್ ಆಚಾರ್ಯ ಶಿಬಿರದ ಮಾಹಿತಿ ನೀಡಿದರು. ಜಿಪಂ ಸದಸ್ಯ ನಾರಾಯಣ ನಾಯ್ಕ, ಬ್ಲೋಕ್ ಪಂ.ಸದಸ್ಯ ಕೆ.ಪಿ.ಅನಿಲ್ ಕುಮಾರ್, ಪೆರ್ಲ ವಲಯ ಮೇಲ್ವಿಚಾರಕಿ ಜಯಶ್ರೀ, ಜನ ಜಾಗೃತಿ ವೇದಿಕೆ ಅಶ್ವಥ್ ಪೂಜಾರಿ ಲಾಲ್‌ಬಾಗ್, ಹರೀಶ್ ಶೆಟ್ಟಿ ಕಡಂಬಾರು, ವಲಯ ಅಧ್ಯಕ್ಷ ಬಿ.ಪಿ.ಶೇಣಿ, ಇಡಿಯಡ್ಕ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಸದಾನಂದ ಮಾಸ್ತರ್, ಡಾ.ಸ್ವಪ್ನಾ ಜಯಗೋವಿಂದ, ಒಕ್ಕೂಟದ ವಲಯಾಧ್ಯಕ್ಷ ಶ್ರೀಧರ ಮಣಿಯಾಣಿ, ಭಜನಾ ಪರಿಷತ್ ವಲಯಾಧ್ಯಕ್ಷ ಶ್ರೀಧರ್ ನಾಯಕ್, ಟಿ.ಪ್ರಸಾದ್, ನವಜೀವನ ಸಮಿತಿ ಅಧ್ಯಕ್ಷ ಸುರೇಂದ್ರ ಬಿ., ಜಿಪಂ ಮಾಜಿ ಸದಸ್ಯೆ ಪುಷ್ಪಾ ಅಮೆಕ್ಕಳ, ಉದಯ ಚೆಟ್ಟಿಯಾರ್, ಮಹೇಶ್ ಪುಣಿಯೂರು, ಜಯ ಮಣಿಯಂಪಾರೆ, ಸೇವಾ ಪ್ರತಿನಿಧಿಗಳು, ನವಜೀವನ, ಶೌರ್ಯ ಸಮಿತಿ ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

    ಶಿಬಿರದ ಯಶಸ್ವಿಗಾಗಿ ಸ್ವಾಗತ ಸಮಿತಿ ರಚಿಸಲಾಯಿತು. ಮಂಜೇಶ್ವರ ತಾಲೂಕು ಯೋಜನಾಧಿಕಾರಿ ಶಶಿಕಲ ಸುವರ್ಣ ಸ್ವಾಗತಿಸಿ, ತಲಪಾಡಿ ವಲಯ ಮೇಲ್ವಿಚಾರಕ ಭಾಸ್ಕರ ನಿರೂಪಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts