ಬೆಂಗಳೂರು: ಲಾಕ್ಡೌನ್ ನಡುವೆಯೇ ಮುಖ್ಯಮಂತ್ರಿ ಬಿ.ಎಸ್.ಅವರ ನಿವಾಸಕ್ಕೆ ಅಪರೂಪದ ಅತಿಥಿಗಳು ಆಗಮಿಸಿವೆ.
ಗಿರ್ ತಳಿಯ ಎರಡು ಹಸುಗಳನ್ನು ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅವರು ಸಿಎಂಗೆ ಉಡುಗೊರೆ ನೀಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರಿ ನಿವಾಸ ಕಾವೇರಿಯಲ್ಲಿ ಹಸುಗಳಿಗೆ ಪ್ರತ್ಯೇಕ ಶೆಡ್ ನಿರ್ಮಾಣ ಮಾಡಲಾಗಿದೆ.
ಸಿಎಂ ಯಡಿಯೂರಪ್ಪ ಕುಟುಂಬದವರು ಹಸುಗಳಿಗೆ ಪೂಜೆ ನೆರವೇರಿಸಿದರು. ಎರಡು ಹಸುಗಳಲ್ಲಿ ಒಂದು ಹಸು ಕರುವಿಗೆ ಜನ್ಮ ನೀಡಿದೆ. ಶಾಸಕ ಎಸ್.ಆರ್.ವಿಶ್ವನಾಥ್ ಹಾಗೂ ಇತರರು ಈ ವೇಳೆ ಇದ್ದರು.