ಮೈಸೂರು: ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್.ಡಿ. ಕುಮಾರಸ್ವಾಮಿ ಶನಿವಾರ ಡಿಸಿಎಂ ಡಿ.ಕೆ. ಶಿವಕುಮಾರ್ಗೆ ಕೊಟ್ಟ ಮುಖ್ಯಮಂತ್ರಿ ಆಫರ್ ಬಗ್ಗೆ ಇದೀಗ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ತನಿಖೆಯ ಅಂತಿಮ ಫಲಿತಾಂಶ ಎಲ್ಲಿದೆ? ನಿಜ್ಜರ್ ಹತ್ಯೆಗೆ ಪುರಾವೆ ನೀಡುವಂತೆ ಕೆನಡಾವನ್ನುಮತ್ತೆ ಕೇಳಿದ ಭಾರತ
ಇಂದು ತಮ್ಮ ಮೈಸೂರಿನ ನಿವಾಸದಲ್ಲಿ ಮಾತನಾಡಿದ ಸಿಎಂ, "ಮುಖ್ಯಮಂತ್ರಿ ವಿಚಾರದಲ್ಲಿ ಇನ್ಮುಂದೆ ಯಾರು ಹೇಳಿಕೆ ನೀಡಬೇಡಿ ಎಂದು ನಮ್ಮ ಶಾಸಕರು ಮತ್ತು ಸಚಿವರಿಗೆ ತಿಳಿಸಿದ್ದೇನೆ. ನಿನ್ನೆ ಉಪಹಾರ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ಮುಂದಿನ ಚುನಾವಣೆ ಬಗ್ಗೆಯೂ ಕೆಲವು ನಿರ್ದೇಶನ ನೀಡಿದ್ದೇನೆ" ಎಂದು ಹೇಳಿದರು.
ಶನಿವಾರ ಡಿಕೆಶಿ ಸಿಎಂ ಆಗುವುದಾದರೇ ಜೆಡಿಎಸ್ನ 19 ಶಾಸಕರ ಬೆಂಬಲವಿದೆ ಎಂದು ಕುಮಾರಸ್ವಾಮಿ ಸ್ಪೋಟಕ ಹೇಳಿಕೆ ನೀಡಿದ್ದರು. ಈ ವಿಚಾರಕ್ಕೆ ಸ್ಪಂದಿಸಿದ ಸಿಎಂ, "ಅವರದು ವ್ಯಂಗ್ಯದ ಹೇಳಿಕೆ. ಅದರಲ್ಲಿ ವ್ಯಂಗ್ಯ ಬಿಟ್ಟರೇ ಬೇರೆ ಏನೂ ಇಲ್ಲ. ಖುದ್ದು ಡಿ.ಕೆ. ಶಿವಕುಮಾರ್ ಅವರೇ ಅದನ್ನು ವ್ಯಂಗ್ಯ ಎಂದು ಹೇಳಿದ್ದಾರೆ" ಎಂದು ಹೇಳುವ ಮುಖೇನ ಎಚ್ಡಿಕೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.