More

    ತನಿಖೆಯ ಅಂತಿಮ ಫಲಿತಾಂಶ ಎಲ್ಲಿದೆ? ನಿಜ್ಜರ್ ಹತ್ಯೆಗೆ ಪುರಾವೆ ನೀಡುವಂತೆ ಕೆನಡಾವನ್ನುಮತ್ತೆ ಕೇಳಿದ ಭಾರತ

    ನವದೆಹಲಿ: ಖಲಿಸ್ತಾನ್ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ನನ್ನು ಭಾರತೀಯ ಏಜೆಂಟರು ಕೊಂದಿದ್ದಾರೆ ಎನ್ನಲಾದ ಸಾಕ್ಷ್ಯವನ್ನು ನೀಡುವಂತೆ ಕೆನಡಾ ಸರ್ಕಾರವನ್ನು ಭಾರತ ಒತ್ತಾಯಿಸಿದೆ.

    ಇದನ್ನೂ ಓದಿ: ಸ್ಮಾರ್ಟ್‌ಫೋನ್ ತಯಾರಿಕೆ: ‘ಮೇಕ್ ಇನ್ ಇಂಡಿಯಾ’ ಉತ್ಪಾದನೆ ವಿಭಿನ್ನ ಹೇಗೆ?

    ಕೆನಡಾದಲ್ಲಿರುವ ಭಾರತದ ಹೈ ಕಮಿಷನರ್ ಸಂಜಯ್ ಕುಮಾರ್ ವರ್ಮಾ, ನಿಜ್ಜರ್ ಹತ್ಯೆಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಬಿಡುಗಡೆ ಮಾಡುವಂತೆ ದಿ ಗ್ಲೋಬ್ ಅಂಡ್ ಮೇಲ್‌ಗೆ ನೀಡಿದ ಸಂದರ್ಶನದಲ್ಲಿ ಒತ್ತಾಯಿಸಿದರು.

    ಎಲ್ಲಿ ಸಾಕ್ಷಿ? ತನಿಖೆಯ ಅಂತಿಮ ಫಲಿತಾಂಶ ಎಲ್ಲಿದೆ? ತನಿಖೆಯಲ್ಲಿ ಅವರಿಗೆ ಸಹಾಯ ಮಾಡಲು ಈ ಪ್ರಕರಣದಲ್ಲಿ ನಮಗೆ ಯಾವುದೇ ನಿರ್ದಿಷ್ಟ ಅಥವಾ ಸಂಬಂಧಿತ ಮಾಹಿತಿಯನ್ನು ನೀಡಲಾಗಿಲ್ಲ ಎಂದು ಸಂಜಯ್ ಕುಮಾರ್ ಹೇಳಿದರು.

    ನಿಜ್ಜರ್​ ಹತ್ಯೆ ಹಿಂದೆ ಭಾರತೀಯ ಏಜೆಂಟರು ಇದ್ದಾರೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದಾರೆ. ಆದರೆ ಇಲ್ಲಿ ತನಕ ಸಾಕ್ಷಾದಾರ ಕೊಟ್ಟಿಲ್ಲ ಎಂದು ಅವರು ತಿಳಿಸಿದರು.

    ಬೆದರಿಕೆ ಹಾಕಿದ್ದರಿಂದ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (ಆರ್‌ಸಿಎಂಪಿ) ಭದ್ರತೆ ನೀಡಿದೆ ಎಂದು ಹೇಳಿದರು.

    ಸೆಪ್ಟೆಂಬರ್​ನಲ್ಲಿ ನಿಜ್ಜರ್ ಹತ್ಯೆ ನಂತರ ಕೆನಡಾ ಮತ್ತು ಭಾರತದ ನಡುವಿನ ಸಂಬಂಧಗಳು ಹದಗೆಟ್ಟವು. ಕೆನಡಾ ಮತ್ತು ಭಾರತ ರಾಜತಾಂತ್ರಿಕರನ್ನು ಹೊರಹಾಕಿವೆ.

    ಭಾರತವು ಭಯೋತ್ಪಾದಕ ಎಂದು ಪರಿಗಣಿಸುವ ನಿಜ್ಜರ್ ಅವರನ್ನು ಕೆನಡಾದ ಗುರುದ್ವಾರದ ಮುಂದೆ ಸೆ.18 ರಂದು ಗುಂಡಿಕ್ಕಿ ಕೊಲ್ಲಲಾಗಿತ್ತು.

    ಪುಟಿನ್​ ಹತ್ಯೆ ಯತ್ನದಿಂದ ಭೀಕರ ನೈಸರ್ಗಿಕ ವಿಕೋಪಗಳವರೆಗೆ! 2024ಕ್ಕೆ ಬಾಬಾ ವಂಗಾರ 7 ಭವಿಷ್ಯವಾಣಿಗಳಿವು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts