More

    ಸ್ಮಾರ್ಟ್‌ಫೋನ್ ತಯಾರಿಕೆ: ‘ಮೇಕ್ ಇನ್ ಇಂಡಿಯಾ’ ಉತ್ಪಾದನೆ ವಿಭಿನ್ನ ಹೇಗೆ?

    ನವದೆಹಲಿ: ಮುಂಬರುವ ವರ್ಷಗಳಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ 5ಜಿ/6ಜಿ, ಉಪಗ್ರಹ ಸಂವಹನ (ಸ್ಯಾಟ್​ ಕಾಂ) ಮತ್ತು ಸೆಮಿಕಂಡಕ್ಟರ್‌ಗಳಂತಹ ಅತ್ಯಾಧುನಿಕ ತಂತ್ರಜ್ಞಾನ ಬೆಳವಣಿಗೆಗೆ ಕೊಡುಗೆ ನೀಡುತ್ತವೆ. ಈ ಮೂರು ತಂತ್ರಜ್ಞಾನ ಮುಂದಿನ ಐದು ವರ್ಷಗಳಲ್ಲಿ ರಾಷ್ಟ್ರದ ಆರ್ಥಿಕತೆಗೆ ಸರಿಸುಮಾರು $240 ಶತಕೋಟಿ ಹರಿದು ಬರುವ ನಿರೀಕ್ಷೆಯಿದೆ. ಇದು 2028 ರ ವೇಳೆಗೆ ನಮ್ಮ ಜಿಡಿಪಿಗೆ ಸುಮಾರು 1.6 ರಷ್ಟು ಹೆಚ್ಚುವರಿ ಕೊಡುಗೆ ನೀಡಲಿದೆ ಎಂದು ಅಂದಾಜಿಸಲಾಗಿದೆ. ಇಂಡಿಯಾ ಮೊಬೈಲ್ ಕಾಂಗ್ರೆಸ್ ವರದಿಯಲ್ಲಿ ಇದನ್ನು ಬಹಿರಂಗಗೊಳಿಸಿದೆ.

    ಇದನ್ನೂ ಓದಿ: ರಾಜ್ಯಕ್ಕೆ ಕೊನೆಗೂ ದಕ್ಕಿದೆ ಜಿಎಸ್‌ಟಿ ಪರಿಹಾರ !
    ಎಲೆಕ್ಟ್ರಾನಿಕ್ಸ್‌ನಲ್ಲಿ ಭಾರತವು ತನ್ನ ಪರಾಕ್ರಮವನ್ನು ಪ್ರದರ್ಶಿಸುತ್ತಿದೆ. ಭಾರತೀಯ ಕಂಪನಿಗಳು ಇದಕ್ಕೆ ಸಹಕರಿಸುತ್ತಿವೆ. ಇನ್ನು ಡಿಜಿಟಲ್ ಆರ್ಥಿಕತೆಯು ಬೆಳವಣಿಗೆ ಸಹ ಉತ್ತಮವಾಗಿದ್ದು. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ(ಐಸಿಟಿ) ಕ್ಷೇತ್ರದ ನಿರಂತರ ವಿಕಸನ ಅಗತ್ಯವಿದೆ. ದೇಶವು ಮುಂದೆ 6ಜಿ ಪರಾಕ್ರಮ ಮೆರೆಯಲು ಅಡಿ ಇರಿಸಿದೆ. ಇದಲ್ಲದೆ ಡಿಜಿಟಲ್ ಸಾಕ್ಷರತೆ, ಸೈಬರ್ ಸುರಕ್ಷತೆ, ಹೊಸ ತಂತ್ರಜ್ಞಾನಗಳು ಮತ್ತು ರಫ್ತು ಉತ್ತೇಜನದ ಮೇಲೆ ಸಹಕಾರ ಕ್ರಮದೊಂದಿಗೆ ವಿಶ್ವಾಸಾರ್ಹ ಜಾಗತಿಕ ಡಿಜಿಟಲ್ ನಾಯಕನಾಗುವ ಗುರಿಯನ್ನು ಸಾಧಿಸಲು ದೇಶಕ್ಕೆ ಸಹಾಯ ಮಾಡುತ್ತದೆ.

    ವಿಶ್ವಕ್ಕೆ ಸೆಮಿಕಂಡಕ್ಟರ್ ಪೂರೈಕೆ ಮಾಡಲು ಮೋದಿ ಸರ್ಕಾರವು ಆಕ್ರಮಣಕಾರಿಯಾಗಿ ಕೆಲಸ ಮಾಡುತ್ತಿದೆ. ಅರೆವಾಹಕಗಳು ಮತ್ತು ಸಂಬಂಧಿತ ಉದ್ಯಮಗಳಿಗೆ $ 30 ಶತಕೋಟಿ ನೆರವಿನ ಕಾರ್ಯಕ್ರಮಗಳನ್ನು ನೀಡುತ್ತಿದೆ.

    ಇನ್ನು ಎಲೆಕ್ಟ್ರಾನಿಕ್ಸ್‌ನಲ್ಲಿ ದೈತ್ಯ ಕಂಪನಿಯಾಗಿರುವ ಆಪೆಲ್​ 1998ರಲ್ಲಿ ಭಾರತದಲ್ಲಿ ಮ್ಯಾಕಿಂತೋಷ್ ಕಂಪ್ಯೂಟರ್ ಮಾರಾಟಕ್ಕೆ ದೊರಕಿತ್ತು. ಬಳಿಕ ಬರೋಬ್ಬರಿ 25 ವರ್ಷದ ಬಳಿಕ ಅಂದರೆ 2023 ರಲ್ಲಿ ತನ್ನ ಐಫೋನ್​ಗಳ ಮೊದಲ ಮಾರಾಟ ಮಳಿಗೆಯನ್ನು ಮುಂಬೈನಲ್ಲಿ ತೆರೆಯಿತು. ಆಪಲ್‌ನ ಶೇಕಡಾ 90 ಕ್ಕಿಂತ ಹೆಚ್ಚು ಐಫೋನ್‌ಗಳನ್ನು ಎರಡು ವರ್ಷದ ಹಿಂದೆ ಚೀನಾದಲ್ಲಿ ಉತ್ಪಾದಿಸಲಾಗುತ್ತಿತ್ತು. ಆದರೆ ಈಗ ಆಪಲ್ ‘ಮೇಕ್ ಇನ್ ಇಂಡಿಯಾ’ ಭಾಗವಾಗಿ ತನ್ನ ಉತ್ಪನ್ನವನ್ನು ಭಾರತದಲ್ಲಿ ತಯಾರಿಸಬೇಕಿದೆ.

    ಮೋದಿ ಅವರ ಸರ್ಕಾರ ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಇಷ್ಟರ ಹೊತ್ತಿಗೆ ನಿರೀಕ್ಷೆಯಂತೆ ವಿದೇಶಿ ಕಂಪನಿಗಳು 250 ಕೋಟಿ ರೂಪಾಯಿ ಹೂಡಿಕೆ ಮಾಡಬೇಕಾಗಿತ್ತು. ಮೊದಲ ವರ್ಷದಲ್ಲಿಯೇ 4000 ಕೋಟಿ ರೂ. ಮೌಲ್ಯದ ವಹಿವಾಟು ನಡೆಸಬೇಕಿತ್ತು.

    ತಮಿಳುನಾಡಿನ ಫಾಕ್ಸ್‌ಕಾನ್ ಮತ್ತು ಪೆಗಾಟ್ರಾನ್, ಕರ್ನಾಟಕದ ವಿಸ್ಟ್ರಾನ್ ಸ್ಮಾರ್ಟ್‌ಫೋನ್ ಉತ್ಪಾದನೆ ಪ್ರಾರಂಭಿಸಬೇಕಿದ್ದು, ಮುಂದಿನ 5 ವರ್ಷದ ಅವಧಿಯಲ್ಲಿ 3.6 ಲಕ್ಷ ಕೋಟಿ ರೂ.ಮೌಲ್ಯದ ಐಫೋನ್‌ಗಳು ತಯಾರಾಗಬೇಕಿದೆ. ಅದರಲ್ಲಿ ಶೇ.80 ರಫ್ತು ಮಾಡಲಾಗುವುದು.

    ಐಫೋನ್‌ಗಳ ಉತ್ಪಾದನೆಯಲ್ಲಿ 2027 ರ ವೇಳೆಗೆ ಚೀನಾ ಸಾಮರ್ಥ್ಯ ಶೇ.45 ರಿಂದ 50ಕ್ಕೆ ಕುಸಿಯಲಿದೆ. 2022 ರ ಅಂತ್ಯದ ವೇಳೆಗೆ ಭಾರತದ ಉತ್ಪಾದನಾ ಸಾಮರ್ಥ್ಯವು ಒಟ್ಟಾರೆಯಾಗಿ ಶೇ.10-15 ಐಫೋನ್‌ಗಳನ್ನು ಹೊಂದಿದ್ದು, 2021 ರಲ್ಲಿ ಕೇವಲ ಶೇ.1 ಮಾತ್ರವಿತ್ತು. ವಾಷಿಂಗ್ಟನ್ ಮತ್ತು ಬೀಜಿಂಗ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವಂತೆ ಅಮೆರಿಕಾ ಚೀನಾದ ಮೇಲಿನ ತನ್ನ ಅವಲಂಬನೆಯನ್ನು ಕಡಿಮೆ ಮಾಡಲು ಮಾರ್ಗಗಳನ್ನು ಅನ್ವೇಷಿಸುತ್ತಿದೆ. ಚೀನಾದ ಐಫೋನ್‌ ಕಾರ್ಖಾನೆಗಳು ಭಾರತದತ್ತ ಮುಖ ಮಾಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಆಪಲ್​ $7 ಶತಕೋಟಿಗಿಂತಲೂ ಹೆಚ್ಚು ಐಫೋನ್‌ಗಳನ್ನು ಮಾರಾಟ ಮಾಡಿದೆ. ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಚೀನಾ ನಂತರ ಭಾರತವು ಉತ್ಪಾದನೆಯನ್ನು ಮೂರು ಪಟ್ಟು ಹೆಚ್ಚಿಸಿಕೊಂಡಿದೆ.

    ಭುಗಿಲೆದ್ದ ವಿವಾದ ಆತ್ಮಚರಿತ್ರೆ ಪ್ರಕಟಣೆಗೆ ಬ್ರೇಕ್​: ISRO ಅಧ್ಯಕ್ಷರು ಕೊಟ್ಟ ಸ್ಪಷ್ಟನೆ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts