More

    ಭಾರತ ಸ್ಮಾರ್ಟ್ ದಾಖಲೆ; ಫೋನ್ ರಫ್ತು ದುಪ್ಪಟ್ಟು

    ನವದೆಹಲಿ: ಭಾರತ 90,000 ಕೋಟಿ ರೂಪಾಯಿ (11 ಶತಕೋಟಿ ಡಾಲರ್) ಮೌಲ್ಯ ಸ್ಮಾರ್ಟ್​ಫೋನ್​ಗಳನ್ನು ರಫ್ತು ಮಾಡಿದ್ದು ಮೊಬೈಲ್ ಸಾಧನ ವಿಭಾಗದಲ್ಲಿ ಜಾಗತಿಕ ಮಾರುಕಟ್ಟೆಯ ಮುಂಚೂಣಿಯತ್ತ ದಾಪುಗಾಲು ಇಟ್ಟಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಇದರಲ್ಲಿ ಆಪಲ್​ನ ‘ಮೇಡ್ ಇನ್ ಇಂಡಿಯಾ’ ಐಫೋನ್​ಗಳ ಪಾಲು ಶೇಕಡ 50ರಷ್ಟಿದೆ. ಅಂದರೆ ಸುಮಾರು 45,000 ಕೋಟಿ ರೂಪಾಯಿ ಆಗಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ದೊಡ್ಡ ಗೆಲುವಾಗಿದೆ ಎಂದು ವೈಷ್ಣವ್ ಹೇಳಿದ್ದಾರೆ.

    300 ಶತಕೋಟಿ ಡಾಲರ್

    2025-26ರೊಳಗೆ 300 ಶತಕೋಟಿ ಡಾಲರ್ ಮೌಲ್ಯದ ಎಲೆಕ್ಟ್ರಾನಿಕ್ಸ್ ವಸ್ತುಗಳ ತಯಾರಿಕೆ ಸರ್ಕಾರದ ಗುರಿಯಾಗಿದೆ. ಇದರಲ್ಲಿ, 120 ಶತಕೋಟಿ ಡಾಲರ್ ರಫ್ತಿನಿಂದಲೇ ಬರುವುದೆಂದು ನಿರೀಕ್ಷಿಸಲಾಗಿದೆ. ಪ್ರಸ್ತುತ ಎಲೆಕ್ರಾನಿಕ್ಸ್ ವಸ್ತುಗಳ ಒಟ್ಟು ರಫ್ತಿನಲ್ಲಿ ಮೊಬೈಲ್ ಫೋನ್​ಗಳ ಪಾಲು ಶೇಕಡ 46ರಷ್ಟಿದೆ ಎನ್ನುವುದು ಐಸಿಇಎ ಅಂದಾಜಾಗಿದೆ.

    ಇದನ್ನೂ ಓದಿ: ಸಿದ್ದರಾಮಯ್ಯ ಸೋಲಿಸಲು ರಣತಂತ್ರ! ಶ್ರೀನಿವಾಸ್ ಪ್ರಸಾದ್-ವಿ.ಸೋಮಣ್ಣ ಮಹತ್ವದ ಚರ್ಚೆ; ಪ್ರತಾಪ್ ಸಿಂಹ ಸಾಥ್

    ಫೋನ್ ರಫ್ತು ದುಪ್ಪಟ್ಟು

    ಇಂಡಿಯಾ ಸೆಲ್ಯುಲರ್ ಆಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್ (ಐಸಿಇಎ) ಪ್ರಕಾರ 2022-23ನೇ ಹಣಕಾಸು ವರ್ಷದಲ್ಲಿ ಮೊಬೈಲ್ ಫೋನ್ ರಫ್ತು ದುಪ್ಪಟ್ಟುಗೊಂಡು 90,000 ಕೋಟಿ ರೂ. ಮೌಲ್ಯ ದಾಟಿದೆ. 2021-22ರಲ್ಲಿ ಅದು ಸುಮಾರು 45,000 ಕೋಟಿ ರೂ. ಆಗಿತ್ತು. ಯಾವುದೇ ಆರ್ಥಿಕತೆ ಅಥವಾ ಆರ್ಥಿಕತೆಯ ವಿಭಾಗ ದೊಡ್ಡ ಪ್ರಮಾಣದ ರಫ್ತು ಇಲ್ಲದೆಯೇ ಮಹಾನ್ ಜಾಗತಿಕ ಆರ್ಥಿಕತೆಯಾಗಲು ಸಾಧ್ಯವಿಲ್ಲ ಎನ್ನುತ್ತಾರೆ ಐಸಿಇಎ ಅಧ್ಯಕ್ಷ ಪಂಕಜ್ ಮಹೀಂದ್ರೂ.

    10 ಶತಕೋಟಿ ಟಾರ್ಗೆಟ್

    ದೇಶದಿಂದ 10 ಶತಕೋಟಿ ಡಾಲರ್ ಮೌಲ್ಯದ ಮೊಬೈಲ್ ಫೋನ್​ಗಳನ್ನು ರಫ್ತು ಮಾಡುವುದು ಸರ್ಕಾರದ ಗುರಿಯಾಗಿದೆ. ಸ್ಯಾಮ್ಂಗ್ ಪಾಲು ಶೇ. 40ರಷ್ಟು, ಅಂದರೆ 36,000 ಕೋಟಿ ರೂ. ಇರಲಿದೆ. ಒಟ್ಟು ರಫ್ತಿನಲ್ಲಿ ಥರ್ಡ್​ಪಾರ್ಟಿ ಪಾಲು 1.1 ಶತಕೋಟಿ ಡಾಲರ್ ಆಗಿದೆ. ಈ ಎಲ್ಲ ಕಂಪನಿಗಳ ರಫ್ತು ಫೋನ್​ಗಳು ಭಾರತದಲ್ಲಿ ತಯಾರಿಸಿದ್ದಾಗಿವೆ ಎಂದು ಮೂಲಗಳು ಹೇಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts