ಬಿಹಾರ: ಬಿಹಾರದ ದರ್ಭಾಂಗ್ನಲ್ಲಿ ಬುಧವಾರ (ನ.13) ನಡೆದ ಕಾರ್ಯಕ್ರಮದಲ್ಲಿ ಸಿಎಂ ನಿತೀಶ್ ಕುಮಾರ್ ಪಿಎಂ ನರೇಂದ್ರ ಮೋದಿ(Prime Minister Narendra Modi) ಕಾಲಿಗೆ ಬೀಳಲು ಪ್ರಯತ್ನಿಸಿದರು. ಈ ವೇಳೆ ನೆರದಿದ್ದ ಎಲ್ಲರೂ ಈ ಘಟನೆ ನೋಡಿ ಆಶ್ಚರ್ಯಚಕಿತರಾದರು.
ಇನ್ನು ಕಾರ್ಯಕ್ರಮದ ವೇದಿಕೆ ಹತ್ತಿದ ಸಿಎಂ ನಿತೀಶ್ ಕುಮಾರ್ ಜನರತ್ತ ಕೈ ಬಿಸುತ್ತ ಮೋದಿ ಕೂತ ಚೇರ್ ಕಡೆಗೆ ಬಂದು ಪ್ರಧಾನಿ ಮೋದಿ ಕಾಲಿಗೆ ಬೀಳಲು ಯತ್ನಿಸಿದರು. ಕೂಡಲೇ ಎಚ್ಚತ್ತ ಮೋದಿ ಎರಡು ಕೈಗಳನ್ನು ತಡೆದರು. ಬಳಿಕ ಕೈ ಕುಲುಕಿ ಅಪ್ಪಿಕೊಂಡರು. ಮತ್ತೊಂದು ವಿಡಿಯೊದಲ್ಲಿ, ಜೆಡಿಯು ನಾಯಕರಿಗೆ ಮೋದಿಗೆ ಹಾರ ಹಾಕುತ್ತಿರುವಾಗ ನಿತೀಶ್ಗೆ ಕೂಡ ಹಾರ ಹಾಕುಂತೆ ಪಕ್ಕದಲ್ಲಿ ಎಳೆದುಕೊಂಡರು.
74 ವರ್ಷದ ನಿತೀಶ್ ಕುಮಾರ್ ತಮ್ಮ ಎರಡು ಕೈಗಳಿಂದ 74 ವರ್ಷದ ಮೋದಿಯ ಪಾದ ಮುಟ್ಟಲು ಮುಂದಾದ ಪ್ರಧಾನಿ ತಡೆದಿರುವ ದೃಶ್ಯ ಸಾಮಾಜಿಕ ಜಾಲಾತಣಾದಲ್ಲಿ ವೈರಲ್ ಆಗಿದೆ. ಈ ರೀತಿ ಮಾಡುತ್ತಿರುವುದು ನಿತೀಶ್ ಇದೇ ಮೊದಲಲ್ಲ. ಜೂನ್ನಲ್ಲಿ ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಮೋದಿ ಪಾದ ಸ್ಪರ್ಶಿಸಲು ಪ್ರಯತ್ನಿಸಿ ಎಲ್ಲರನ್ನು ಆಶ್ಚರ್ಯಗೊಳಿದರು. ಬಳಿಕ ಲೋಕಾಸಭಾ ಚುನಾವಣೆಯಲ್ಲಿ ಇದೇ ರೀತಿ ಮಾಡಿದ್ದರು. ಒಟ್ಟಿನಲ್ಲಿ ನಿತೀಶ್ ಒಂದೇ ವರ್ಷದಲ್ಲಿ ಮೂರು ಬಾರಿ ಮೋದಿ ಕಾಲಿಗೆ ಬೀಳಲು ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ.
ದರ್ಭಾಂಗ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿಮಂತ್ರಿ ನರೇಂದ್ರ ಮೋದಿ ಏಮ್ಸ್(AIIMS)ಗೆ ಶಂಕು ಸ್ಥಾಪನೆ ನೆರವೇರಿಸಿದ್ದು, 12 ಸಾವಿರ ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು, (ಏಜೆನ್ಸೀಸ್).