ನ್ಯೂಸ್

ಬಿಹಾರ ಚುನಾವಣೆ ಬಳಿಕ ಸಿಎಂ ನಿತೀಶ್ ಕುಮಾರ್ ಎನ್​ಡಿಎ ಕೂಟದಲ್ಲಿ ಇರಲ್ಲ: ಪಪ್ಪು ಯಾದವ್| Pappu Yadav

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಬಳಿಕ ಸಿಎಂ ನಿತೀಶ್ ಕುಮಾರ್ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟದಲ್ಲಿ ಇರೋದಿಲ್ಲ. ಬಿಜೆಪಿ ನಿತೀಶ್ ಅವರನ್ನು ಬದಿಗಿಡುತ್ತದೆ ಎಂದು ಮಂಗಳವಾರ(ಅ. 21) ಪೂರ್ಣಿಯಾ ಕಾಂಗ್ರೆಸ್​ ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್(Pappu Yadav) ಹೇಳಿದ್ದಾರೆ.

ಪಾಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿ ನೇತೃತ್ವದ ಎನ್​ಡಿಎ ಕೂಟ ನಿತೀಶ್ ಕುಮಾರ್ ಅವರಿಗೆ ಸರಿಯಾದ ಗೌರವ ನೀಡುತ್ತಿಲ್ಲ. ಬಿಜೆಪಿ ಮತ್ತು ಚಿರಾಗ್ ಪಾಸ್ವಾನ್ ತಮ್ಮ ಸ್ಟ್ರೈಕ್ ರೇಟ್ ಕಾಯ್ದುಕೊಳ್ಳಲು ನಿತೀಶ್ ಕುಮಾರ್ ಅವರನ್ನು ಪ್ರತ್ಯೇಕಿಸಿದ ರೀತಿ ನೋಡಿದ್ರೆ, ಚುನಾವಣೆಯ ಬಳಿಕ ಅವರು ಎನ್‌ಡಿಎಯಲ್ಲಿ ಉಳಿಯುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಆದರೆ ನಿತೀಶ್ ಕುಮಾರ್​ಗೆ ಅರ್ಹವಾದ ಗೌರವವನ್ನು ಕಾಂಗ್ರೆಸ್ ಮಾತ್ರ ನೀಡುತ್ತದೆ ಎಂದು ತಿಳಿಸಿದ್ದಾರೆ.

ಈ ಚುನಾವಣೆಯಲ್ಲಿ ಬಿಹಾರದ ಜನ ಇಂಡಿಯಾ ಕೂಟದ ಜೊತೆ ನಿಂತಿದ್ದಾರೆ. ಕುರುಡಾಗಿ ನಮ್ಮ ಕೂಟವನ್ನು ಬೆಂಬಲಿಸುತ್ತಾರೆ. ಜನ ಒಗ್ಗಟ್ಟಾಗಿದ್ದಾರೆ. ಅವರೇ ಎಲ್ಲವನ್ನೂ ನಿರ್ಣಯಿಸುತ್ತಾರೆ, ಚಿಂತಿಸಬೇಡಿ ಎಂದಿದ್ದಾರೆ.

ಬಿಹಾರ ರಾಜಕಾರಣದಲ್ಲಿ ಆಗಾಗ ತಮ್ಮ ಮೈತ್ರಿಯನ್ನು ಬದಲಾಯಿಸುವ ಚಾಳಿಯಿಂದ ಪಲ್ಟು ಕುಮಾರ್ ಎಂದೇ ನಿತೀಶ್ ಅವರಿಗೆ ಅಡ್ಡ ಹೆಸರು ಇದೆ. ಕಳೆದ 20 ವರ್ಷಗಳಿಗಿಂತ ಹೆಚ್ಚು ಕಾಲ ಬಿಹಾರ ಸಿಎಂ ಆಗಿ ಆಡಳಿತ ನಡೆಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ತಮ್ಮ ಸ್ಥಾನವನ್ನು ಭದ್ರಾ ಪಡಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಮುಂದಿನ ತಿಂಗಳ ನ. 06 ಮತ್ತು 11ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, 14ರಂದು ಫಲಿತಾಂಶ ಹೊರಬೀಳಲಿದೆ. (ಏಜೆನ್ಸೀಸ್)