ನ್ಯೂಸ್

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಕೊಟ್ರು ಮುಖ್ಯಮಂತ್ರಿ ಯಡಿಯೂರಪ್ಪ!

ಬೆಂಗಳೂರು: 2021ನೇ ಸಾಲಿನ ಸರ್ಕಾರಿ ನೌಕರರ ಗಳಿಕೆ ರಜೆ ತೀರ್ಮಾನ ತಡೆ ಹಿಡಿದಿದ್ದ ಆರ್ಥಿಕ ಇಲಾಖೆ ನಿರ್ಧಾರವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಿಂಪಡೆದಿದ್ದಾರೆ. ಶುಕ್ರವಾರ ಕಡತ ಪರಿಶೀಲಿಸಿದ ಸಿಎಂ, ಸರ್ಕಾರಿ ನೌಕರರ ಸಂಘದ ಕೋರಿಕೆಯನ್ನು ಮಾನ್ಯ ಮಾಡಿ ಈ ಹಿಂದಿನ ಆದೇಶ ಹಿಂಪಡೆಯಲು ನಿರ್ಧರಿಸಿದರು.

ಕರೊನಾ ಕಾರಣದಿಂದ ಆರ್ಥಿಕ ಮಿತವ್ಯಯ ಹೇರಿದ್ದ ಸರ್ಕಾರ, ಸರ್ಕಾರಿ ನೌಕರರ ಹದಿನೈದು ದಿನಗಳ ಗಳಿಕೆ ರಜೆಯನ್ನು ನಗದೀಕರಿಸುವ ಅವಕಾಶ ತಡೆಹಿಡಿದಿತ್ತು. ಅದನ್ನು 2021ನೇ ಸಾಲಿಗೂ ವಿಸ್ತರಿಸಿತ್ತು. ಆದರೆ, ಸರ್ಕಾರಿ ನೌಕರರ ಸಂಘ ಈ ತೀರ್ಮಾನ ರದ್ದು ಮಾಡುವಂತೆ ಒತ್ತಡ ತಂದಿತ್ತು.

ಮುಖ್ಯಮಂತ್ರಿಯವರ ಈ ತೀರ್ಮಾನದಿಂದ ಸರ್ಕಾರಿ ನೌಕರರಿಗೆ ವಾರ್ಷಿಕ ಒಟ್ಟಾರೆ ಏಳುನೂರು ಕೋಟಿ ರೂ.ವರೆಗೆ ಸಂದಾಯವಾಗಲಿದೆ. ಮುಖ್ಯಮಂತ್ರಿಯವರ ನಿರ್ಧಾರಕ್ಕೆ ಸರ್ಕಾರಿ‌ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಅಭಿನಂದನೆ ಸಲ್ಲಿಸಿದ್ದಾರೆ.