ಬೆಂಗಳೂರು: ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಚಾನಲ್ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ವರ್ಷದ ಮಹಿಳೆ ಪ್ರಶಸ್ತಿಯನ್ನು ಐವರು ಸಾಧಕಿಯರಿಗೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶೋಭಾ ಕರಂದ್ಲಾಜೆ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಈ ಮಹಿಳೆಯರ ಹೆಸರು ಹೀಗಿದೆ: 1) ಪುಟ್ಟಮ್ಮ 2) ಪ್ರೇಮಾ ಹುಚ್ಚಣ್ಣನವರ್ 3) ಇಂದುಶ್ರೀ ರವೀಂದ್ರ 4) ಮೋಕ್ಷಮ್ಮ ಮಸ್ಕಿ 5) ಅಲ್ಮಿತ್ರಾ ಪಟೇಲ್.
ವಿಜಯವಾಣಿ ಹಾಗೂ ದಿಗ್ವಿಜಯ ಸಂಸ್ಥೆಗಳಿಂದ ಆಯೋಜಿಸಲ್ಪಟ್ಟ ಇಂತಹ ವಿಶಿಷ್ಟ ಕಾರ್ಯಕ್ರಮದಲ್ಲಿ ಸೇರಿದ್ದ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಸಂಸ್ಥೆಯ ಎಂಡಿ ಶಿವ ಸಂಕೇಶ್ವರ 'ಕಳೆದ ಹತ್ತು ವರ್ಷದಲ್ಲಿ ಎಲ್ಲ ಕ್ಷೇತ್ರದಲ್ಲಿ ಮಹಿಳೆಯರಿಗೆ ಜಾಸ್ತಿ ಅವಕಾಶ ಸಿಗುತ್ತಿದೆ. ಓರ್ವ ತಾಯಿಗೆ ಇರುವ ಪವರ್ ಯಾರಿಗೂ ಇರಲ್ಲ' ಎಂದರು.
ಈ ವಿಶೇಷ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಸಂಭಂಧದಿಂದ ಸಾಧನೆವರೆಗೆ ಮಹಿಳೆ ಪಾತ್ರ ತುಂಬ ಮುಖ್ಯ. ಹುಟ್ಟಿದ ಪ್ರತೀ ವ್ಯಕ್ತಿ ಜನ್ಮಪೂರ್ವದಿಂದ ಸಂಭಂದ ಹೊಂದಿದ್ದು ತಾಯಿ ಜೊತೆಗೆ ಮಾತ್ರ. ಗ್ರಾಮೀಣ ಭಾಗದ ಮಹಿಳೆಯರು ಪುರುಷರಿಗಿಂತ ದುಪ್ಪಟ್ಟು ಕೆಲಸ ಮಾಡುತ್ತಾರೆ. ಇಂದು ಎಲ್ಲ ಕ್ಷೇತ್ರದಲ್ಲಿ ಮಹಿಳಾ ಸಾಧಕಿಯರಿದ್ದಾರೆ.
ಇದನ್ನೂ ಓದಿ: WOMEN’S DAY SPECIAL | ವಿಜಯವಾಣಿ ಹಾಗೂ ದಿಗ್ವಿಜಯ ಸಹಯೋಗದಲ್ಲಿ ಐವರು ಮಹಿಳೆಯರಿಗೆ ಪ್ರಶಸ್ತಿ ಪ್ರದಾನ…
ಈ ವರ್ಷ ವಿದ್ಯಾರ್ಥಿಗಳಿಗೆ ಮತ್ತು ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ನಾವು ನೀಡಿದ್ದು ಪಿಯುಸಿವರೆಗೆ ಉಚಿತ ಶಿಕ್ಷಣವನ್ನೂ ನೀಡುತ್ತೇವೆ. ಮಹಿಳೆಯರ ಸುರಕ್ಷತೆಗೆ ನಗರದ ಬಹುಭಾಗದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು ಅಂದಾಜು 18 ಕೋಟಿ ರೂಪಾಯಿ ಸ್ತ್ರೀಶಕ್ತಿ ಸಹಕಾರ ಸಂಘಗಳಿಗೆ ನೀಡಲಾಗಿದೆ. ಮಹಿಳೆಯರು ಎಂದೆಂದೂ ಆತ್ಮ ವಿಸ್ವಾಶದಿಂದ ಮುನ್ನುಗ್ಗಬೇಕು' ಎಂದರು.
ಇದೇ ವೇಳೆ ಮಾತನಾಡಿದ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಲಿಂಗರಾಜ ಗಾಂಧಿ 'ಮಹಿಳಾ ಸಮಾನತೆ ನಮ್ಮೆಲ್ಲರ ಆದ್ಯ ಕರ್ತವ್ಯ. ಸಮಾನ ಅವಕಾಶ ಮಹಿಳೆಯರಿಗೆ ಸಿಗಬೇಕು ಜೊತೆಗೆ ಅವಕಾಶ ಕಲ್ಪಿಸಬೇಕು. ಸಾಧನೆ ಮಾಡಿದ ಮಹಿಳೆಯನ್ನು ಗುರುತಿಸಿ ಗೌರವಿಸುವುದು ಮಹಿಳೆಯನ್ನು ಮತ್ತಷ್ಟು ಸಧೃಡ ಮಾಡಿದಂತೆ ಆಗುತ್ತದೆ' ಎಂದು ಹೇಳಿದ್ದಾರೆ.