ನ್ಯೂಸ್

ಚಿಕ್ಕಪೇಟೆಗೆ ಬಂತು ಮೋದಿ ಬಟ್ಟೆ; ನಮೋ ಬಟ್ಟೆಗೆ ಫುಲ್ ಡಿಮ್ಯಾಂಡ್….

ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲಾ ಪಕ್ಷಗಳು ಸಖತ್​ ಆಕ್ಟಿವ್​ ಆಗಿವೆ. ತಮ್ಮದೆ ಆಗಿರುವ ರೀತಿಯಲ್ಲಿ ಪ್ರಚಾರ ಮಾಡಲು ಸಕಲ ತಯಾರಿಯನ್ನು ಪಕ್ಷಗಳು ನಡೆಸುತ್ತಿವೆ. ಇದೀಗ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಮೋದಿ ಕ್ರೇಜ್ ಜಾಸ್ತಿಯಾಗಿದೆ.‌ ನಗರದ ಚಿಕ್ಕಪೇಟೆಗೆ ಮೋದಿ ಫೋಟೋ ಇರುವ ಪಾಲಿಸ್ಟರ್ ಫ್ಯಾಬ್ರಿಕ್ ಬಟ್ಟೆಗಳು ಎಂಟ್ರಿಕೊಟ್ಟಿವೆ.

ಈ ಬಟ್ಟೆಯಲ್ಲಿ 3 ಡಿಸೈನ್ ಗಳು ಜನರನ್ನ ಸೆಳೆಯುತ್ತಿವೆ. ಮೋದಿ ಕೈ ಬೀಸುವ, ಕಮಲದ ಮೇಲಿರುವ ಮೋದಿ ಡಿಸೈನ್ ಬಟ್ಟೆಯನ್ನ ವೇಸ್ ಕೋಟ್ ಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.‌ ಮೋದಿ ಬಟ್ಟೆಗೆ ಫುಲ್ ಡಿಮ್ಯಾಂಡ್ ಬಂದಿದೆ.‌ ಹೀಗಾಗಿ ನಗರದ ಚಿಕ್ಕಪೇಟೆಗೆ ಮೋದಿ ಫೋಟೋ ಇರುವ ಪಾಲಿಸ್ಟರ್ ಫ್ಯಾಬ್ರಿಕ್ ಬಟ್ಟೆಗಳು ಎಂಟ್ರಿಕೊಟ್ಟಿವೆ.

ಡಿಜಿಟಲ್ ಪ್ರಿಂಟ್ ಇರುವ ಮೋದಿ ಬಟ್ಟೆಗೂ ಡಿಮ್ಯಾಂಡ್ ಇದ್ದು, ಜುಬ್ಬಾ, ವಾಸ್ ಕೋಟ್​ಗಳಿಗೆ ಜನರು ಬೇಡಿಕೆ ಇಡುತ್ತಿದ್ದಾರೆ.ವ್ಯಾಪಾರಸ್ಥರು ಜನರು ಡಿಮ್ಯಾಂಡ್ ಮಾಡುತ್ತಿರುವ ಮೋದಿ ಫೋಟೋ ಇರುವ ಬಟ್ಟೆಯನ್ನ‌ ಅಹಮದಬಾದ್, ಬಾಂಬೆ ಸೇರಿದಂತೆ ವಿವಿಧ ಭಾಗಗಳಿಂದ ತರಿಸಿಕೊಳ್ಳುತ್ತಿದ್ದಾರೆ.‌

ನಾವು ಮೋದಿ ಫ್ಯಾನ್. ಅವರ ಫೋಟೋ ಇರುವ ಬಟ್ಟೆಗಳನ್ನ ತೆಗೆದುಕೊಳ್ಳುವುದಕ್ಕೆ ಚಿತ್ರದುರ್ಗ, ಬೆಳಗಾವಿ ಭಾಗದಿಂದ ಬೆಂಗಳೂರಿಗೆ ಬಂದಿದ್ದೀವಿ. ಅವರ ಫೋಟೋ ಇರುವ ವೇಸ್ ಕೋಟ್ ಹಾಕಿ ಕಾರ್ಯಕ್ರಮಗಳಿಗೆ ಹೋಗ್ತಿವಿ.‌ ನಮಗೆ ತುಂಬ ಖುಷಿಯಾಗುತ್ತೆ ಅಂತ ಮೋದಿ ಅಭಿಮಾನಿಗಳು ಪ್ರೀತಿ ವ್ಯಕ್ತಪಡಿಸಿದ್ದಾರೆ.