ನ್ಯೂಸ್

ಸಿನಿಮಾ ಮಂದಿರಗಳಿಗೆ ರಿಲೀಫ್​; ಹೆಚ್ಚು ಮಂದಿ ಸೇರುವುದಕ್ಕೆ ಅವಕಾಶ ಕೊಟ್ಟ ಸರ್ಕಾರ

ನವದೆಹಲಿ: ಕರೊನಾ ಹಿನ್ನೆಲೆಯಲ್ಲಿ ಕೇವಲ ಶೇ. 50 ಆಸನ ಸಾಮರ್ಥ್ಯದೊಂದಿಗೆ ಸಿನಿಮಾ ಪ್ರದರ್ಶನ ಮಾಡುತ್ತಿರುವ ಸಿನಿಮಾ ಮಂದಿರಗಳಿಗೆ ಕೇಂದ್ರ ಗೃಹ ಸಚಿವಾಲಯ ರಿಲೀಫ್​ ನೀಡಿದೆ. ಫೆಬ್ರವರಿ 1ರಿಂದ ಶೇ. 50ಕ್ಕಿಂತ ಹೆಚ್ಚು ಆಸನಗಳನ್ನು ಭರ್ತಿ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ.

ಈ ಕುರಿತಾಗಿ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಲು ಸಚಿವಾಲಯ ಆದೇಶ ಹೊರಡಿಸಿದೆ. ಈಜುಕೊಳಗಳ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಬೇಕು, ಎಲ್ಲ ಈಜುಕೊಳಗಳನ್ನೂ ತೆರೆಯುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಚಿವಾಲಯ ತಿಳಿಸಿದೆ. ಈ ಮೊದಲು ಜಾರಿಯಲ್ಲಿದ್ದ ಎಲ್ಲ ಸುರಕ್ಷತಾ ಕ್ರಮಗಳು ಮುಂದೆಯೂ ಜಾರಿಯಲ್ಲಿರಲಿವೆ. ಫೆಬ್ರವರಿ 1ರಿಂದ ಫೆಬ್ರವರಿ 28ಕ್ಕೆಂದು ಮಾರ್ಗಸೂಚಿ ತಯಾರಿಸಲು ಆದೇಶಿಸಲಾಗಿದೆ. (ಏಜೆನ್ಸೀಸ್​)