ನವದೆಹಲಿ: ಭಾರತ- ಚೀನಾ ನಡುವಿನ ಸಂಘರ್ಷದಲ್ಲಿ ಭಾರತದ ಬೆಂಬಲಕ್ಕೆ ಜಪಾನ್ ನಿಲ್ಲುತ್ತಿದ್ದಂತೆ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯು ಜಪಾನ್ ಗಡಿಯಲ್ಲಿ ಗಸ್ತು ನೌಕೆಗಳನ್ನು ನಿಯೋಜಿಸಿದೆ.
ಚೀನಾದ ಎರಡು ಹಡಗುಗಳು ಜಪಾನ್ ಜಲಗಡಿಯನ್ನು ಪ್ರವೇಶಿಸಿವೆ ಎಂದು ಜಪಾನ್ ಕರಾವಳಿ ಭದ್ರತಾ ಪಡೆಗಳು ಮಾಹಿತಿ ನೀಡಿವೆ.
ಪೂರ್ವ ಚೀನಾ ಸಮುದ್ರ ಪ್ರದೇಶದ ಮೂಲಕ ಜಪಾನ್ ಸೆನ್ಕಾಕು ದ್ವೀಪದ ಬಳಿ ಚೀನಾ ಹಡಗುಗಳು ಸಂಚರಿಸುತ್ತಿವೆ ಎಂದು ತಿಳಿಸಿದೆ.
ಇದನ್ನೂ ಓದಿ; ಕರೊನಾ ಮೂಲ ಹುಡುಕಲು ಚೀನಾಗೆ ವಿಶ್ವಸಂಸ್ಥೆ ತಂಡದ ಭೇಟಿ
ಇದಷ್ಟೇ ಅಲ್ಲ, ಅಲ್ಲಿದ್ದ ಜಪಾನ್ನ ಮೀನುಗಾರಿಕೆ ದೋಣಿಯೊಂದನ್ನು ಚೀನಿ ಪಡೆಗಳು ಸಂಪರ್ಕಿಸಿವೆ ಎಂದು ಗೊತ್ತಾಗಿದೆ.
ಇದುವರೆಗಿನ ಇತಿಹಾಸದಲ್ಲಿ ಜಪಾನ್ ಜಲ ಗಡಿಯಲ್ಲಿ ಇಷ್ಟು ದೂರದವರೆಗೆ ಚೀನಿ ಹಡಗುಗಳು ಪ್ರವೇಶಿಸಿದ್ದು ಇದೇ ಮೊದಲ ಬಾರಿಯಾಗಿದೆ. ಚೀನಾದ ಅತಿಕ್ರಮಣಶೀಲತೆಗೆ ಇದು ಸಾಕ್ಷಿಯಾಗಿದೆ ಎಂದು ಜಪಾನ್ ತಿಳಿಸಿದೆ.
ಈಗಾಗಲೇ ಚೀನಾದೊಂದಿಗೆ ಹಿಂದು ಮಹಾಸಾಗರ ಹಾಗೂ ಫೆಸಿಪಿಕ್ ಮಹಾಸಾಗರದಲ್ಲಿರುವ ಸೆನ್ಕಾಕು ಹಾಗೂ ಡಿಯಾಯು ದ್ವೀಪಗಳ ಬಗ್ಗೆ ಎರಡು ರಾಷ್ಟ್ರಗಳ ನಡುವೆ ಹಿಂದಿನಿಂದಲೂ ಅಂದರೆ 1972ರಿಂದಲೂ ವೈಷಮ್ಯವಿದೆ.
ಕಳೆದ ಏಪ್ರಿಲ್ನಿಂದ ಈವರೆಗೆ 67 ಬಾರಿ ಚೀನಿ ಹಡಗುಗಳು ಸೆನ್ಕಾಕು ದ್ವೀಪದ ಬಳಿ ಅತಿಕ್ರಮಣ ಪ್ರವೇಶ ನಡೆಸಿವೆ ಎಂದು ಜಪಾನ್ ದೂರಿದೆ. ಹೀಗಾಗಿ ಚೀನಾಗೆ ಮುಖ ಮಾಡಿಕೊಂಡಿರುವ ಜಪಾನ್ ಗಡಿಯಲ್ಲಿ ಅತ್ಯಾಧುನಿಕ ಕ್ಷಿಪಣಿಗಳನ್ನು ಸನ್ನದ್ಧವಾಗಿರಿಸಿದೆ.
ಸೆನ್ಕಾಕು ದ್ವೀಪ ತನಗೆ ಸೇರಿದ್ದೆಂದು ಸ್ಪಷ್ಟವಾಗಿ ಚೀನಾಗೆ ತಿಳಿಸಲು ಜಪಾನ್ ಇತ್ತೀಚೆಗೆ ದ್ವೀಪದ ಹೆಸರನ್ನು ತೊನೊಶಿರೋ ಸೆನ್ಕಾಕು ಎಂಬ ಬದಲಾಯಿಸಿದೆ.