ವುಹಾನ್: ಕರೊನಾ ಕಾಟ ತಪ್ಪಿತ್ತಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದ ಚೀನಾಗೆ ಮತ್ತೊಂದು ಆಘಾತ ಎದುರಾಗಿದೆ.
ತನ್ನಲ್ಲೇ ಸ್ಪೋಟಗೊಂಡಿದ್ದ ವೈರಸ್ನಿಂದ ಚೀನಾ ಇದೀಗ ಚೇತರಿಸಿಕೊಂಡಿದೆ. ಆದರೆ, ಬೇರೆ ದೇಶದಿಂದ ಆಮದಾಗುತ್ತಿರುವ ಕರೊನಾ ಪ್ರಕರಣಗಳು ಚೀನಾದಲ್ಲಿ ಎರಡನೇ ಸೋಂಕಿನ ಅಲೆಯನ್ನು ಸೃಷ್ಟಿಸುವ ಸಾಧ್ಯತೆ ಇದೆ ಎಂದು ಚೀನಾ ಆರೋಗ್ಯ ಇಲಾಖೆಯ ವಕ್ತಾರರು ಎಚ್ಚರಿಕೆ ನೀಡಿದ್ದಾರೆ.
ವಿದೇಶದಿಂದ ಬಂದ 693 ಸೋಂಕಿತರ ಪ್ರಕರಣಗಳು ಚೀನಾದಲ್ಲಿದ್ದು, ಇದು ಎರಡನೇ ಸುತ್ತಿನ ಸಾಂಕ್ರಮಿಕ ಅಲೆಯನ್ನು ಸೃಷ್ಟಿಸುವ ಭೀತಿ ಇದೆ. ಅಲ್ಲದೆ, ಇದು ಹೆಚ್ಚು ಅಪಾಯವನ್ನು ಉಂಟುಮಾಡುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋದ ವಕ್ತರಾ ಮಿ ಫೆಂಗ್ ತಿಳಿಸಿದ್ದಾರೆ.
ಚೀನಾದಲ್ಲಿ ಇಂದು ಮತ್ತೆ 45 ಹೊಸ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ ಓರ್ವ ವಿದೇಶದಿಂದ ಬಂದಂತಹ ಪ್ರಕರಣವಾಗಿದ್ದು, ಕೋವಿಡ್-19 ಪಾಸಿಟಿವ್ ವರದಿ ಬಂದಿದೆ. (ಏಜೆನ್ಸೀಸ್)