ನ್ಯೂಸ್

ಚೀನಾ ನಿರ್ಮಿತ ಡ್ರೋನ್ ಹೊಡೆದುರುಳಿಸಿದ ಗಡಿ ಭದ್ರತಾ ಪಡೆ!

ಪಂಜಾಬ್: ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿಯ ಬಳಿ ಪತ್ತೆಯಾದ ಚೀನಾ ನಿರ್ಮಿತ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (BSF) ಹೊಡೆದುರುಳಿಸಿದ್ದು, ಭಾರತ-ಪಾಕ್ ಅಂತಾರಾಷ್ಟ್ರೀಯ ಬಾರ್ಡರ್​​ ಸಮೀಪದಲ್ಲಿ ನಡೆದಿದೆ ಎಂದು ಪಡೆ ಮಾಹಿತಿ ನೀಡಿದೆ.

ಶನಿವಾರ (ಫೆಬ್ರವರಿ 9) ರಾತ್ರಿ ವೇಳೆ ಈ ಘಟನೆ ನಡೆದಿದ್ದು, ಗುರುದಾಸ್‌ಪುರ ಜಿಲ್ಲೆಯ ರೊಸ್ಸಿ ಗ್ರಾಮದ ಬಳಿ ಗಡಿಯನ್ನು ಪ್ರವೇಶಿಸುತ್ತಿದ್ದ ಕ್ವಾಡ್‌ಕಾಪ್ಟರ್ ಡ್ರೋನ್ ಚಲಿಸುತ್ತಿದದ್ದನ್ನು ಪತ್ತೆಹಚ್ಚಿದ ಬಿಎಸ್‌ಎಫ್ ಪಡೆ, ಡ್ರೋನ್ ಹಾರಾಟದ ಬೆನ್ನಲ್ಲೇ ತ್ವರಿತಗತಿಯಲ್ಲಿ ಗುಂಡು ಹಾರಿಸಿ ಡ್ರೋನ್ ಅನ್ನು ಯಶಸ್ವಿಯಾಗಿ ಧ್ವಂಸಗೊಳಿಸಿತು ಎಂದು ಗಡಿ ಭದ್ರತಾ ಪಡೆ ಹೇಳಿದೆ.

ಹಾನಿಗೊಳಗಾದ ಡ್ರೋನ್ ನಿಯಂತ್ರಣ ಕಳೆದುಕೊಂಡು ಕೃಷಿ ಜಮೀನಿನಲ್ಲಿ ಪತನಗೊಳ್ಳುತ್ತಿದ್ದಂತೆ ಸ್ಥಳವನ್ನು ಸುತ್ತುವರೆದ ಬಿಎಸ್‌ಎಫ್, ಅದನ್ನು ವಶಕ್ಕೆ ಪಡೆಯಿತು. ತದನಂತರ ಹೆಚ್ಚಿನ ಶೋಧ ನಡೆಸಿದ್ದು, ಅದು ಭಾಗಶಃ ಮುರಿದ ಸ್ಥಿತಿಯಲ್ಲಿರುವುದು ಖಚಿತವಾಗಿದೆ. ವಶಪಡಿಸಿಕೊಂಡ ಡ್ರೋನ್ ಕ್ವಾಡ್‌ಕಾಪ್ಟರ್ ಮಾದರಿ - ಡಿಜೆಐ ಮಾವಿಕ್ 3 ಕ್ಲಾಸಿಕ್ ಆಗಿದ್ದು, ಇದು ಚೀನಾದಲ್ಲಿ ತಯಾರಿಸಲ್ಪಟ್ಟಿದೆ ಎಂದು ಬಿಎಸ್‌ಎಫ್ ತಿಳಿಸಿದೆ.

"ಬಿಎಸ್ಎಫ್ ಪಡೆಗಳ ಅನುಕರಣೀಯ ಶೂಟಿಂಗ್ ಕೌಶಲ್ಯದೊಂದಿಗೆ ತೀಕ್ಷ್ಣವಾದ ಅವಲೋಕನ ಮತ್ತು ತ್ವರಿತ ಪ್ರತಿಕ್ರಿಯೆಯು ಡ್ರೋನ್ ದೇಶದೊಳಗೆ ಬರುವುದನ್ನು ಯಶಸ್ವಿಯಾಗಿ ತಡೆಯಲಾಗಿದೆ ಎಂದು ಬಿಎಸ್​ಎಫ್ ಹೇಳಿದೆ,(ಏಜೆನ್ಸೀಸ್).