ನ್ಯೂಸ್

ಚೀನಾಕ್ಕೆ ತೆರಳುತ್ತಿದ್ದ ವಿಮಾನ ವೈದ್ಯಕೀಯ ತುರ್ತು ಭೂಸ್ಪರ್ಶ, ಅಸ್ವಸ್ಥಗೊಂಡಿದ್ದ ಇರಾಕ್ ಬಾಲಕಿ ಸಾವು

ಕೋಲ್ಕತ: ವಿಮಾನದಲ್ಲಿ ಬಾಲಕಿಯೊಬ್ಬರು ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಬಾಗ್ದಾದ್‌ನಿಂದ ಚೀನಾದ ಗೌಂಗ್​ಝೌನತ್ತ ತೆರಳುತ್ತಿದ್ದ ಇರಾಕ್​ನ ಏರ್‌ವೇಸ್ ವಿಮಾನವೊಂದು ಕೋಲ್ಕತ ವಿಮಾನ ನಿಲ್ದಾಣದಲ್ಲಿ ಬುಧವಾರ ತುರ್ತು ಭೂಸ್ಪರ್ಶ ಮಾಡಿತು.

ವಿಮಾನ ತುರ್ತು ಭೂಸ್ಪರ್ಶ ತಕ್ಷಣವೇ ಇರಾಕ್​ನ 16 ವರ್ಷದ ಬಾಲಕಿಯನ್ನು ನಗರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆ ವೇಳೆಯಾಗಲೇ ಬಾಲಕಿ ಮೃತಪಟ್ಟಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

100 ಪ್ರಯಾಣಿಕರು ಮತ್ತು 15 ಸಿಬ್ಬಂದಿ ಪ್ರಯಾಣಿಸುತ್ತಿದ್ದ ಐಎ-473 ವಿಮಾನವನ್ನು ಬುಧವಾರ ರಾತ್ರಿ 10:18ಕ್ಕೆ ಇಲ್ಲಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ತಕ್ಷಣವೇ ಅವರಿಗೆ ಚಿಕಿತ್ಸೆ ಒದಗಿಸಲು ವೈದ್ಯಕೀಯ ತಂಡವು ವಿಮಾನ ನಿಲ್ದಾಣದಲ್ಲಿ ಸಿದ್ಧವಾಗಿತ್ತು ಎಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ವಕ್ತಾರರ ಡೆರನ್ ಸಮೀರ್ ಅಹಮ್ಮದ್​ ತಿಳಿಸಿದರು.

ಮೃತರನ್ನು ಇರಾಕ್​ನ ರಾಜಧಾನಿ ಬಾಗ್ದಾದ್ಬ ಚರ್​ ಚಿನಾರ್​ ಪೊಲೀಸ್​ ಠಾಣಾ ವ್ಯಾಪ್ತಿಯ ನಿವಾಸಿ ಎಂದು ಗುರುತಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.