ನ್ಯೂಸ್

ಕೊಳದ ಬಳಿ ಕುಳಿತ ಚಿಂಪಾಂಜಿ ಏನು ಮಾಡ್ತಿದೆ? ವಿಡಿಯೋ ನೋಡಿದ್ರೆ ನೀವು ತುಂಬ ಖುಷಿ ಪಡ್ತೀರಿ...

ಪ್ರಾಣಿಗಳಿಗೆ ಸಂಬಂಧಪಟ್ಟ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬ ಮೆಚ್ಚುಗೆಗಳಿಸುತ್ತವೆ. ಈಗಾಗಲೇ ಅದೆಷ್ಟೋ ವಿಡಿಯೋಗಳು ಸೋಷಿಯಲ್​ ಮೀಡಿಯಾಗಳಲ್ಲಿ ಟ್ರೆಂಡ್ ಆಗಿವೆ.

ಈಗ ಚಿಂಪಾಂಜಿಯೊಂದು ಮೀನುಗಳಿಗೆ ಆಹಾರ ನೀಡುವ ವಿಡಿಯೋ ವೈರಲ್​ ಆಗಿದ್ದು, ಇಂದು ಮುಂಜಾನೆ ಐಎಫ್​ಎಸ್​ ಅಧಿಕಾರಿ ಸುಸಾಂತಾ ನಂದಾ ಅವರು ತಮ್ಮ ಟ್ವಿಟರ್​​ನಲ್ಲಿ ಪೋಸ್ಟ್​ ಮಾಡಿದ್ದಾರೆ. 14 ಸೆಕೆಂಡ್​​ಗಳ ಈ ವಿಡಿಯೋವನ್ನು 16,000ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಒಂದು ಪುಟ್ಟ ಕೊಳದ ಬ್ರಿಜ್​ ಮೇಲೆ ಕುಳಿತ ಚಿಂಪಾಂಜಿ, ಆ ನೀರಿನಲ್ಲಿರುವ ಮೀನುಗಳಿಗೆ ಅದೇನೋ ಕಾಳಿನಂತಹ ಆಹಾರವನ್ನು ಹಾಕುತ್ತದೆ. ಚಿಂಪಾಂಜಿ ಅದನ್ನು ಹಾಕುತ್ತಿದ್ದಂತೆ ಮೀನುಗಳೆಲ್ಲ ಸರಸರನೆ ಬಂದು, ಅದನ್ನೆಲ್ಲ ತಿನ್ನುವುದನ್ನು ವಿಡಿಯೋದಲ್ಲಿ ನೋಡಬಹುದು.

ವಿಡಿಯೋ ಪೋಸ್ಟ್ ಮಾಡಿರುವ ಸುಸಾಂತಾ ನಂದಾ ಅವರು, ಚಿಂಪಾಂಜಿಗಳು ಶೇ.98ರಷ್ಟು ಮನುಷ್ಯರು ಎಂದಿದ್ದಾರೆ. ಮೀನುಗಳಿಗೆ ಆಹಾರ ಕೊಡುವುದು ಒತ್ತಡ ಕಡಿಮೆ ಮಾಡಿಕೊಳ್ಳಲು ಇರುವು ಒಂದು ಒಳ್ಳೆಯ ಮಾರ್ಗ. ನೀವು ಪ್ರಯತ್ನಿಸಿ ಎಂದು ಸುಸಾಂತಾ ನಂದಾ ಹೇಳಿದ್ದಾರೆ.

2600ಕ್ಕೂ ಅಧಿಕ ಲೈಕ್ಸ್​ಗಳು ಬಂದಿದ್ದು, ನೆಟ್ಟಿಗರು ಕಾಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.