ಶಹಾಬಾದ್ (ಕಲಬುರಗಿ): ನಗರದ ಕ್ವಾರಂಟೈನ್ ಕೇಂದ್ರದಲ್ಲಿ ಮಂಗಳವಾರ ಅಪ್ರಾಪ್ತ ವಯಸ್ಕಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ಈಕೆ ಮಹಾರಾಷ್ಟ್ರದ ಕೊಲ್ಹಾಪುರ ಬಳಿಯ ಸೋಮನಳ್ಳಿಯಲ್ಲಿ ವಾಸವಾಗಿದ್ದಳು. ಮೇ 17ರಂದು ಕಾರ್ಮಿಕರೊಂದಿಗೆ ಕಲಬುರಗಿಗೆ ವಾಪಸಾಗಿದ್ದಾಳೆ. ಈಕೆಯ ಜತೆಗೆ ತಾಯಿ ಹಾಗೂ ಸಹೋದರನನ್ನು ಇಂದಿರಾನಗರ ಮಡ್ಡಿ-1ರ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಹೆರಿಗೆ ವಿಷಯ ತಿಳಿಯುತ್ತಿದ್ದಂತೆ ತಹಸೀಲ್ದಾರ್ ಸುರೇಶ ವರ್ಮಾ, ನೋಡಲ್ ಅಧಿಕಾರಿ ನೀಲಗಂಗಾ ಬಬಲಾದ, ಇನ್ಸ್‌ಪೆಕ್ಟರ್ ಬಿ. ಅಮರೇಶ ಅವರು ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ ನೀಡಿ ತಾಯಿ, ಮಗುವನ್ನು ಆಂಬುಲೆನ್ಸ್‌ನಲ್ಲಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಇದನ್ನೂ ಓದಿರಿ VIDEO/ ಕೊನೆಗೂ ಸೇಡು ತೀರಿಸಿಕೊಂಡ ಎಮ್ಮೆ!