ನ್ಯೂಸ್

ಮೂರು ಜನನಾಂಗದೊಂದಿಗೆ ಜನಿಸಿದ ಮಗು! ವಿಶ್ವದಲ್ಲೇ ಮೊದಲೆಂದ ವೈದ್ಯರು

Mandara

ಬಾಗ್ದಾದ್: ಒಬ್ಬ ವ್ಯಕ್ತಿಗೆ ಒಂದು ಜನನಾಂಗ ಇರುವುದು ಸಾಮಾನ್ಯ. ಆದರೆ ಈ ಒಂದು ಮಗು ಹುಟ್ಟುವಾಗಲೇ ಮೂರು ಜನನಾಂಗಗಳೊಂದಿಗೆ ಹುಟ್ಟಿದೆ. ಪ್ರಪಂಚದಲ್ಲಿ ಈ ರೀತಿ ಮೂರು ಜನನಾಂಗದೊಂದಿಗೆ ಹುಟ್ಟಿದ ಮೊದಲನೇ ಮಗುವಿದು ಎಂದು ವೈದ್ಯರು ತಿಳಿಸಿದ್ದಾರೆ.

ಇರಾಖ್​ನಲ್ಲಿ ಇಂತದ್ದೊಂದು ಮಗು ಜನಿಸಿದೆ. ಬೇರೆಲ್ಲ ಮಕ್ಕಳಂತೆ ಒಂದು ಜನನಾಂಗ, ಅದರ ಬಳಿಯೇ ಇನ್ನೊಂದು ಜನನಾಂಗ ಹಾಗೂ ಅಂಡಾಶಯದ ಬಳಿ ಒಂದು ಜನನಾಂಗ ಕಂಡುಬಂದಿದೆ. ಮೊದಲಿಗೆ ಏನೆಂದು ಗೊತ್ತಾಗದಿದ್ದರೂ ವೈದ್ಯಕೀಯ ಪರೀಕ್ಷೆಯ ನಂತರ ಈ ವಿಚಾರ ವೈದ್ಯರಿಗೆ ತಿಳಿದುಬಂದಿದೆ.

ಈ ವಿಚಾರವನ್ನು ಇಂಟರ್​ನ್ಯಾಷನಲ್​ ಜರ್ನಲ್​ ಸರ್ಜರಿಯಲ್ಲಿ ಡಾ.ಶಕೀರ್ ಸಲೀಮ್ ಜಬಾಲಿ ಮತ್ತು ಅಯಾದ್ ಅಹ್ಮದ್ ಮೊಹಮ್ಮದ್ ಅವರು ಪ್ರಕಟಿಸಿದ್ದಾರೆ. ಈ ಹಿಂದೆ 2015ರಲ್ಲಿ ಭಾರತದಲ್ಲಿ ಮೂರು ಜನನಾಂಗದೊಂದಿಗೆ ಮಗುವೊಂದು ಜನಿಸಿತ್ತು. ಆದರೆ ಅದನ್ನು ಜರ್ನಲ್​ನಲ್ಲಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಈ ಮಗುವನ್ನೇ ಈ ರೀತಿ ವಿಶೇಷವಾಗಿ ಜನಿಸಿದ ಮೊದಲು ಮಗು ಎಂದು ಪರಿಗಣಿಸಲಾಗಿದೆ. ಈಗ ಹುಟ್ಟಿರುವ ಈ ಮಗುವಿನ ಎರಡು ಜನನಾಂಗಳಲ್ಲಿ ಮೂತ್ರನಾಳಗಳು ಇಲ್ಲದ ಹಿನ್ನೆಲೆಯಲ್ಲಿ ಅದನ್ನು ಆಪರೇಷನ್​ ಮಾಡಿ ತೆಗೆಯಬಹುದು ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)