ನ್ಯೂಸ್

ನೋಡಲು ಚಿಕನ್ ಲೆಗ್ ಪೀಸ್ ಅಂತೆ! ಆದ್ರೆ ನಿಜವಾದ ವಿಷಯ ಬೇರೆಯೇ ಇದೆ...ವಿಡಿಯೋ ನೋಡಿ..

ನವದೆಹಲಿ: ಗ್ರಾಹಕರನ್ನು ಮೆಚ್ಚಿಸಲು ವಿವಿಧ ಮಾರ್ಗಗಳನ್ನು ಆಯ್ಕೆ ಮಾಡಲಾಗುತ್ತದೆ.  ಇತ್ತೀಚೆಗಷ್ಟೇ ಈ ರೀತಿಯ ವಿಡಿಯೋವೊಂದು ನೆಟ್ಟಿಗರನ್ನು ಆಕರ್ಷಿಸುತ್ತಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಚಿಕನ್ ಲೆಗ್ ಪೀಸ್ ಕತ್ತರಿಸುತ್ತಿರುವ ದೃಶ್ಯವಿದೆ. ಆದರೆ ಅಸಲಿ ಸಂಗತಿಯೇ ಬೇರೆ ಇದೆ..

ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಚಿಕನ್ ಲೆಗ್ ಪೀಸ್ ಕತ್ತರಿಸುತ್ತಿರುವ ದೃಶ್ಯವಿದೆ. ಆದರೆ ಅದು ಚಿಕನ್ ಅಲ್ಲ  ಕೇಕ್ ಆಗಿದೆ. ನಮ್ಮ ಕಣ್ಣನ್ನೆ ಯಾಮಾರಿಸುವಂತಿದೆ ಈ ಕೇಕ್​. ನೋಡಲು ಚಿಕನ್​ ಲೆಗ್​ ಪೀಸ್​ನ ಹಾಗೆ ಕಾಣಿಸುತ್ತದೆ. ಕಟ್ ಮಾಡುವವರೆಗೂ ಕೇಕ್ ಎಂದು ಯಾವುದೇ ಅನುಮಾನ ಬರದಂತೆ ವಿನ್ಯಾಸಗೊಳಿಸಲಾಗಿದೆ.

ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ ಪೇಜ್ diyacakesit ನಲ್ಲಿ ಪೋಸ್ಟ್ ಮಾಡಲಾಗಿದೆ. ತಂದೂರಿ ಚಿಕನ್ ರೂಪದಲ್ಲಿ ಕೇಕ್ ತಯಾರಿಸಲಾಗಿದೆ. ಈ ಕೇಕ್ ಅನ್ನು ಡಾರ್ಕ್ ಚಾಕೊಲೇಟ್ ನಿಂದ ತಯಾರಿಸಲಾಗುತ್ತದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋ ನೋಡಿದ ನೆಟ್ಟಿಗರು ಇದನ್ನು ಮಾಡಿದ ವ್ಯಕ್ತಿಯನ್ನು ಹೊಗಳುತ್ತಿದ್ದಾರೆ. ಇದು ನೋಡುವ ಕಣ್ಣಿಗೆ ಮೋಸ ಮಾಡುತ್ತಿದೆ ಎಂದು ಕೆಲ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.