ನ್ಯೂಸ್

ಬಾಕ್ಸ್​ ಆಫೀಸ್​ನಲ್ಲಿ 'ಸಲಾರ್'​ ಆರ್ಭಟ! 9ನೇ ದಿನಕ್ಕೆ ಕಾಲಿಟ್ಟ ಪ್ರಭಾಸ್​ ಚಿತ್ರದ ಒಟ್ಟು ಕಲೆಕ್ಷೆನ್ ಎಷ್ಟು? ಇಲ್ಲಿದೆ ವಿವರ

ಬೆಂಗಳೂರು: 'ಕೆಜಿಎಫ್' ಖ್ಯಾತಿಯ ಸ್ಟಾರ್​ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಹಾಗೂ ಟಾಲಿವುಡ್​ನ ರೆಬೆಲ್ ಸ್ಟಾರ್​, ನಟ ಪ್ರಭಾಸ್​ ಮತ್ತು ನಟಿ ಶ್ರುತಿ ಹಾಸನ್ ಮುಖ್ಯಭೂಮಿಕೆಯಲ್ಲಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ 'ಸಲಾರ್'​ ಇದೀಗ ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸಿದ್ದು, ಬಿಡುಗಡೆಗೊಂಡು ಇಂದಿಗೆ 9ನೇ ದಿನ ಕಳೆದರೂ, ಗಲ್ಲಾಪೆಟ್ಟಿಗೆಯಲ್ಲಿ ತನ್ನ ಆರ್ಭಟವನ್ನು ಮುಂದುವರೆಸಿದೆ. ಅಷ್ಟಕ್ಕೂ ಪ್ರಭಾಸ್​ ನಟನೆಯ ಸಿನಿಮಾ ಜಾಗತಿಕವಾಗಿ ಇಲ್ಲಿಯವರೆಗೆ ಗಳಿಸಿದ್ದೆಷ್ಟು? ಎಂಬ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.

ಪ್ರಶಾಂತ್ ನೀಲ್ ಮತ್ತು ಪ್ರಭಾಸ್​ ಕಾಂಬಿನೇಷನ್​ ಅನ್ನು ದೊಡ್ಡ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದ ಸಿನಿಪ್ರಿಯರಿಗೆ ಇದೀಗ 'ಸಲಾರ್' ನೋಡಿ ಖುಷಿಯಾಗಿದ್ದು, ವ್ಯಾಪಕ ಪ್ರತಿಕ್ರಿಯೆ ನೀಡುವ ಮೂಲಕ ಸಿನಿಮಾ ಹೇಗಿದೆ ಎಂಬುದನ್ನು ತಮ್ಮ ಶೈಲಿಯಲ್ಲೇ ತಿಳಿಸಿದ್ದಾರೆ.

ಜಾಗತಿಕ ಬಾಕ್ಸ್​ ಆಫೀಸ್​ನಲ್ಲಿ 'ಸಲಾರ್'​ ಇಲ್ಲಿಯವರೆಗೆ ಒಟ್ಟು 578.29 ಕೋಟಿ ರೂ. ಗಳಿಕೆ ಕಂಡಿದ್ದು, ಇದೀಗ 600 ಕೋಟಿಯತ್ತ ಸಾಗುತ್ತಿದೆ. ರಿಲೀಸ್ ಆದ ಮೊದಲ ದಿನದಿಂದ 9ನೇ ದಿನಕ್ಕೆ ಪ್ರಭಾಸ್​ ಚಿತ್ರ ಮಾಡಿದ ಆಯಾ ದಿನದ ಕಲೆಕ್ಷನ್ ವಿವರ ಹೀಗಿದೆ.

ದಿನ 1: 176.52 ಕೋಟಿ ರೂ.

ದಿನ 2: 101.39 ಕೋಟಿ ರೂ.

ದಿನ 3: 95.24 ಕೋಟಿ ರೂ.

ದಿನ 4: 76.91 ಕೋಟಿ ರೂ.

ದಿನ 5: 40.17 ಕೋಟಿ ರೂ.

ದಿನ 6: 31.62 ಕೋಟಿ ರೂ.

ದಿನ 7: 20.78 ಕೋಟಿ ರೂ.

ದಿನ 8: 14.21 ಕೋಟಿ ರೂ.

ದಿನ 9: 21.45 ಕೋಟಿ ರೂ.

ಒಟ್ಟು ಗಳಿಕೆ: 578.29 ಕೋಟಿ ರೂ.