ನ್ಯೂಸ್

ದೀಪಾವಳಿಗೂ ಮುನ್ನ ಗೋಲ್ಡ್​ ಸದ್ದು! ದಿನ ಕಳೆದಂತೆ ದುಬಾರಿಯತ್ತ ಚಿನ್ನದ ಬೆಲೆ; ಹೀಗಿದೆ ಇಂದಿನ ದರ | Gold Rates

Gold Rates: ದಸರಾ ಹಬ್ಬದ ನಂತರ ಉಳಿದಿರುವುದು ವರ್ಷದ ಕೊನೆಯ ಹಬ್ಬ ಅದು ದೀಪಾವಳಿ. ಈ ಶುಭದಿನಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಮದುವೆ ಮತ್ತು ಹಬ್ಬದ ಸೀಸನ್​ನಲ್ಲಿ ಚಿನ್ನ ಖರೀದಿಗೆ ಯೋಚಿಸುತ್ತಿರುವ ಗ್ರಾಹಕರು ಸದ್ಯ ಚಿನ್ನ ಹೊಸ ದಾಖಲೆಯನ್ನು ಬರೆಯುವತ್ತ ಸಾಗುತ್ತಿರುವುದನ್ನು ಕಂಡು ಅಕ್ಷರಶಃ ಕಂಗಾಲಾಗಿದ್ದಾರೆ. ಇಂತಹ ಮುಖ್ಯ ಸಮಯದಲ್ಲಿ ಗೋಲ್ಡ್​ ಬೆಲೆ ತೀವ್ರವಾಗಿ ಹೆಚ್ಚುತ್ತಿರುವ ಕಾರಣ, ಖರೀದಿ ಎಷ್ಟರ ಮಟ್ಟಿಗೆ ನಡೆಯುತ್ತದೆ ಎಂಬ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ. ದೇಶದಲ್ಲಿ ಇಂದೂ ಸಹ ಚಿನ್ನದ ಬೆಲೆ ಹೆಚ್ಚಾಗಿದೆ.

  • ಇಂದು ದೆಹಲಿಯಲ್ಲಿ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,370 ರೂ. ಹೆಚ್ಚಾಗಿದ್ದು, 1,20,920 ರೂ.ಗೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,250 ರೂ. ಏರಿಕೆಯಾಗಿದ್ದು, 1,10,850 ರೂ.ಗೆ ತಲುಪಿದೆ.
  • ಮುಂಬೈನಲ್ಲಿ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,370 ರೂ. ಏರಿಕೆಯಾಗಿ, 1,20,770 ರೂ.ಗೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,250 ರೂ. ಹೆಚ್ಚಾಗಿ 1,10,700 ರೂ.ಗೆ ಬಂದು ನಿಂತಿದೆ.
  • ಇನ್ನು ಹೈದರಾಬಾದ್​ ಸೇರಿದಂತೆ ತೆಲುಗು ರಾಜ್ಯಗಳಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,370 ರೂ. ಹೆಚ್ಚಾಗಿ 1,20,770 ರೂ.ಗೆ ತಲುಪಿದೆ. ಅದೇ ರೀತಿ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,250 ರೂ. ಏರಿಕೆಯಾಗಿ, 1,10,700 ರೂ.ಗೆ ತಲುಪಿದೆ.

ಬೆಳ್ಳಿ ಬೆಲೆಯಲ್ಲಿ 1000 ರೂ. ಏರಿಕೆ

  • ದೆಹಲಿಯಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 1000 ರೂ. ಏರಿಕೆಯಾಗಿ 1,56,000 ರೂ.ಗೆ ತಲುಪಿದೆ.
  • ಮುಂಬೈನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 1000 ರೂ. ಏರಿಕೆಯಾಗಿ 1,56,000 ರೂ.ಗೆ ತಲುಪಿದೆ.
  • ಇನ್ನು ಹೈದರಾಬಾದ್‌ನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 1,000 ರೂ. ಏರಿಕೆಯಾಗಿ, 1,66,000 ರೂ. ಆಗಿದೆ.

ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ.