ನ್ಯೂಸ್

ಗೋಲ್ಡ್ ಬೆಲೆ ಇಳಿಕೆ? ಏರಿಕೆ? ದೇಶದ ಪ್ರಮುಖ ನಗರಗಳಲ್ಲಿ ಹೀಗಿದೆ ಇಂದಿನ ಚಿನ್ನ-ಬೆಳ್ಳಿ ದರ | Gold Rate

Gold Rate: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ ಎಂಬುದು ಕಣ್ಣಿಗೆ ಕಾಣುತ್ತಿರುವ ಸತ್ಯ. ಹಿಂದಿನಕ್ಕಿಂತ ಮತ್ತಷ್ಟು ದುಬಾರಿ ಆಗಿರುವ ಚಿನ್ನದ ಬೆಲೆಗಳು ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ. ಆದಾಗ್ಯೂ, ಮದುವೆ ಸೇರಿದಂತೆ ಇತರೆ ಶುಭಾರಂಭ ಕಾರ್ಯಗಳಿಗೆ ಚಿನ್ನದ ಖರೀದಿ ತೀರ ಅಗತ್ಯವಿರುವ ಹಿನ್ನೆಲೆ ಗ್ರಾಹಕರು ಚಿನ್ನದ ಬೆಲೆಯತ್ತ ಕಣ್ಣಾಯಿಸುತ್ತಿದ್ದಾರೆ. ಹಾಗಿದ್ದರೆ, ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಾಗಿದೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ಗಮನಿಸಿ.

ಶನಿವಾರ (ಏ.12) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 270 ರೂ. ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ 250 ರೂ. ಹೆಚ್ಚಳವಾಗಿದೆ. ಮತ್ತೊಂದೆಡೆ, ಬೆಳ್ಳಿಯ ಬೆಲೆ ಗಮನಾರ್ಹವಾಗಿ ಏರಿಕೆಗೊಂಡಿದೆ. ಒಂದು ಕೆಜಿ ಬೆಳ್ಳಿ 2 ಸಾವಿರ ರೂ. ಹೆಚ್ಚಾಗಿದೆ. ಆದರೆ, ಇಲ್ಲಿ ಸಮಾಧಾನಕರ ವಿಷಯವೆಂದರೆ, ಕಳೆದ ನಾಲ್ಕು ದಿನಗಳಲ್ಲಿ ಚಿನ್ನದ ಬೆಲೆ 2,000 ರೂ.ನಿಂದ 3 ಸಾವಿರದಷ್ಟು ಹೆಚ್ಚಾಗಿತ್ತು. ಆದಾಗ್ಯೂ, ಇಂದು ದರದ ಏರಿಕೆ ಪ್ರಮಾಣ ಕೊಂಚ ಇಳಿಕೆಯಾಗಿದೆ. ಅಂದರೆ, ಕೇವಲ 270 ರೂ. ಮಾತ್ರ ಹೆಚ್ಚಾಗಿದೆ.

ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ

  • ದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 87,850 ರೂ. ಇದ್ದರೆ, 24 ಕ್ಯಾರೆಟ್ ಬೆಲೆ 95,820 ರೂ. ತಲುಪಿದೆ.
  • ಮುಂಬೈ, ಬೆಂಗಳೂರು ಮತ್ತು ಚೆನ್ನೈ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 87,700 ರೂ. ಆಗಿದ್ದರೆ, 24 ಕ್ಯಾರೆಟ್ ಬೆಲೆ 95,670 ರೂ. ದಾಖಲಾಗಿದೆ.
  • ಇನ್ನು ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣದಲ್ಲಿ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 87,700 ರೂ. ಇದ್ದರೆ, 24 ಕ್ಯಾರೆಟ್ ಬೆಲೆ 95,670 ರೂ.ಗೆ ತಲುಪಿದೆ.

ಹೀಗಿದೆ ಬೆಳ್ಳಿ ಬೆಲೆ

  • ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 1,00,000 ರೂ. ಆಗಿದೆ.
  • ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 1,10,000 ತಲುಪಿದೆ.
  • ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣದಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 1,10,000 ರೂ. ಇದೆ,(ಏಜೆನ್ಸೀಸ್).

ನಿಮ್ಮ ಗಮನಕ್ಕೆ: ಮೇಲಿನ ಬೆಲೆಗಳು ಇಂದು ಬೆಳಗ್ಗೆ 10 ಗಂಟೆಯವರೆಗೆ ದಾಖಲಾದ ಮಾಹಿತಿ. ಚಿನ್ನ ಮತ್ತು ಬೆಳ್ಳಿ ದರಗಳು ದಿನಕ್ಕೆ ಹಲವಾರು ಬಾರಿ ಬದಲಾವಣೆಗೊಳ್ಳುತ್ತಿರುತ್ತವೆ. ನಿಖರವಾದ ಬೆಲೆಗಳನ್ನು ತಿಳಿಯಲು ಆಗಾಗ್ಗೆ ಗೋಲ್ಡ್​ ರೇಟ್​ ತಿಳಿಸುವ ಅಧಿಕೃತ ಜಾಲ ಅಥವಾ ನಿಮ್ಮ ಹತ್ತಿರದ ಚಿನ್ನದ ವ್ಯಾಪಾರಿಯನ್ನು ಸಂಪರ್ಕಿಸಿ,(ಏಜೆನ್ಸೀಸ್).