ನ್ಯೂಸ್

ಏರಿಕೆಯತ್ತ ಬೆಳ್ಳಿ, ಇಳಿಕೆಯತ್ತ ಚಿನ್ನ! ಗೋಲ್ಡ್​ ಖರೀದಿದಾರಿಗೆ ಇದು ಒಳ್ಳೆಯ ಸಮಯ; ಹೀಗಿದೆ ಇಂದಿನ ದರ | Gold Rates

Gold Rates: ಕಳೆದ ಒಂದು ವಾರದಿಂದ ಕೆಜಿ ಬೆಳ್ಳಿ ದರದಲ್ಲಿ ಹೆಚ್ಚಳ ಕಂಡಿದೆಯೇ ಹೊರತು ಕಡಿಮೆಯಾಗುವ ಲಕ್ಷಣಗಳು ಮರೀಚಿಕೆಯಾಗಿದೆ. ಮತ್ತೊಂದೆಡೆ, ಚಿನ್ನದ ಬೆಲೆಗಳು ಕ್ರಮೇಣವಾಗಿ ಇಳಿಕೆಯಾಗುತ್ತಿದ್ದು, ಮದುವೆ ಸೀಸನ್​ನಲ್ಲಿರುವ ಚಿನ್ನದ ಗ್ರಾಹಕರಲ್ಲಿ ಸಂತಸ ಮೂಡಿಸಿದೆ. ಹಾಗಿದ್ದರೆ, ಚಿನ್ನದ ದರ ಎಷ್ಟು ಕಡಿಮೆಯಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಬೆಲೆ ಎಷ್ಟಿದೆ ಎಂಬುದರ ವಿವರ ಹೀಗಿದೆ ಗಮನಿಸಿ.

ಕಳೆದ ಶನಿವಾರದಿಂದ ಚಿನ್ನದ ಬೆಲೆಯಲ್ಲಿ ಸತತ ಇಳಿಕೆ ಕಂಡುಬಂದಿದ್ದು, ಕಳೆದ ಮೂರು ದಿನಗಳಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಸುಮಾರು 2 ಸಾವಿರ ರೂ. ಕಡಿಮೆಯಾಗಿದೆ. ಮಂಗಳವಾರ (ಜೂ.10) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 110 ರೂ. ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ 100 ರೂ. ಕಡಿಮೆಯಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ತೀವ್ರವಾಗಿ ಕುಸಿದಿದೆ. ಒಂದು ಔನ್ಸ್ ಗೋಲ್ಡ್​ ಬೆಲೆ 17 ಡಾಲರ್​ ಕುಸಿದಿದೆ. ಪ್ರಸ್ತುತ 3,316 ಡಾಲರ್​ನಲ್ಲಿ ವಹಿವಾಟು ನಡೆಸುತ್ತಿದೆ. ಈ ಮಧ್ಯೆ ಒಂದು ಕೆಜಿ ಬೆಳ್ಳಿ ಬೆಲೆ 1,000 ರೂ. ಹೆಚ್ಚಾಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಬೆಲೆ

  • ನವದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 89,600 ರೂ. ಆಗಿದ್ದರೆ, 24 ಕ್ಯಾರೆಟ್ ಬೆಲೆ 97,730 ರೂ. ಆಗಿದೆ.
  • ಮುಂಬೈ, ಬೆಂಗಳೂರು, ಚೆನ್ನೈ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 89,450 ರೂ. ಆಗಿದ್ದರೆ, 24 ಕ್ಯಾರೆಟ್ ಬೆಲೆ 97,580 ರೂ. ಆಗಿದೆ.
  • ಇನ್ನು ಹೈದರಾಬಾದ್, ವಿಜಯವಾಡ, ವಿಶಾಖಪಟ್ಟಣದಲ್ಲಿ, 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 89,450 ರೂ. ಇದ್ದರೆ, 24 ಕ್ಯಾರೆಟ್ ಬೆಲೆ 97,580 ರೂ. ಆಗಿದೆ.

ಕೈಗೆಟುಕದ ಬೆಳ್ಳಿ ಬೆಲೆ

  • ದೆಹಲಿ, ಮುಂಬೈ ಮತ್ತು ಬೆಂಗಳೂರು ನಗರಗಳಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 1,09,000 ರೂ. ಆಗಿದೆ.
  • ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 1,19,000 ರೂ. ಆಗಿದೆ.
  • ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣದಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 1,19,000 ರೂ. ಇದೆ,(ಏಜೆನ್ಸೀಸ್).

ನಿಮ್ಮ ಗಮನಕ್ಕೆ: ಮೇಲೆ ತಿಳಿಸಲಾದ ದರ ಇಂದು ಬೆಳಗ್ಗೆ 10 ಗಂಟೆಯವರೆಗೆ ದಾಖಲಾದ ಮಾಹಿತಿ. ಚಿನ್ನ-ಬೆಳ್ಳಿ ಬೆಲೆಗಳು ದಿನಕ್ಕೆ ಹಲವು ಬಾರಿ ಏರುಪೇರು ಆಗುತ್ತಿರುತ್ತವೆ. ನಿಖರವಾದ ಬೆಲೆಗಳಿಗಾಗಿ, ನಿಮ್ಮ ಹತ್ತಿರದ ಆಭರಣ ಮಳಿಗೆ ಅಥವಾ ಅಧಿಕೃತ ವೆಬ್​ಸೈಟ್​ ದರ ಪರಿಶೀಲಿಸಿ.