ನ್ಯೂಸ್

ಇವರೇ ನೋಡಿ 2024ರಲ್ಲಿ ಗೂಗಲ್​ನಲ್ಲಿ ಅತಿ ಹೆಚ್ಚು ಬಾರಿ ಹುಡುಕಲ್ಪಟ್ಟ 10 ಭಾರತೀಯರು!

ನವದೆಹಲಿ: ಇತ್ತಿಚೀಗೆ ನಡೆದ ಪ್ಯಾರೀಸ್​ ಒಲಂಪಿಕ್​ನಲ್ಲಿ ಅನರ್ಹಗೊಂಡ ಕ್ರೀಡಾಪಟು, ರಾಜಕಾರಣಿ ವಿನೇಶ್​ ಫೋಗಟ್ 2024ರ ಗೂಗಲ್​ ಸರ್ಚ್​ ಇಂಜಿನ್​ನಲ್ಲಿ ಅತ್ಯಂತ ಹೆಚ್ಚುಬಾರಿ ಹುಡುಕಲ್ಪಟ್ಟ ಭಾರತೀಯ ವ್ಯಕ್ತಿ ಎಂದು ವರದಿಯಾಗಿದೆ.

ವಿನೇಶ್​ ಫೋಗಟ್​

ಪ್ಯಾರೀಸ್​ ಒಲಂಪಿಕ್​ನಲ್ಲಿ ಫೈನಲ್​​ ಆಯ್ಕೆಯಾಗಿದ್ದ ವಿನೇಶ್​ ಫೋಗಟ್​ ಅಧಿಕ ತೂಕದ ಕಾರಣದಿಂದ ಅನರ್ಹಗೊಂಡು ಭಾರೀ ಸುದ್ದಿಯಾಗಿದ್ದರು. ಅಲ್ಲದೆ, ಈ ಸುದ್ದಿ ಕೇಳಿ ಪದಕ ನಿರೀಕ್ಷೆಯಲಿದ್ದ ಅನೇಕ ಭಾರತೀಯರು ಕೂಡ ನಿರಾಸೆಗೊಂಡಿದ್ದರು. ಬಳಿಕ ದೇಶಕ್ಕೆ ಆಗಮಿಸಿದ ಫೋಗಟ್​ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಮತ್ತೊಮ್ಮೆ ಗಮನ ಸೆಳೆದಿದ್ದರು. ಎಲೆಕ್ಷನ್​ನಲ್ಲಿ ಬಿಜೆಪಿ ಗೆದ್ದು ಅಧಿಕಾರ ಚುಕ್ಕಾಣಿ ಹಿಡಿದಿದ್ದರೂ, ಫೋಗಟ್​ ಜೂಲನಾ ಕ್ಷೇತ್ರದಿಂದ ಗೆದ್ದು ಬಿಗಿದ್ದರು. ಇದೀಗ, 2024ರ ಗೂಗಲ್​ ಸರ್ಚ್​ ಇಂಜಿನ್​ನಲ್ಲಿ ಅತ್ಯಂತ ಹೆಚ್ಚುಬಾರಿ ಹುಡುಕಲ್ಪಟ್ಟ ಭಾರತೀಯ ಮೊದಲನೇ ವ್ಯಕ್ತಿ ಎಂದು ಗುರುತಿಸಲಾಗಿದೆ.

ಈ ಹಿಂದೆ ರೆಸ್ಲಿಂಗ್​(ಕುಸ್ತಿ) ಫೆಡರೇಷನ್​ ಆಫ್​ ಇಂಡಿಯಾದ ಅಧ್ಯಕ್ಷರಾಗಿದ್ದ ಬಿಜೆಪಿಯ ಬ್ರಿಜ್​ ಭೂಷಣ್​ ಸಿಂಗ್​ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದರು. ಇವರ ಜತೆ ಒಲಂಪಿಕ್​ ಕ್ರೀಡಾಪಟುಗಳಾದ ಸಾಕ್ಷಿ ಮಲ್ಲಿಕ್​ ಮತ್ತು ಬಜರಂಗ್​ ಪೂನಿಯಾ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ದೇಶಾದ್ಯಂತ ಈ ಸುದ್ದಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.

ಬಿಹಾರ್​ ಸಿಎಂ ನಿತೀಶ್​ ಕುಮಾರ್​

2024ರ ಲೋಕಸಭಾ ಚುನಾವಣೆಯಲ್ಲಿ ಎನ್​ಡಿಎ ಸರ್ಕಾರ ಮೈತ್ರಿಕೂಟಕ್ಕೆ ಬರಲು ಪ್ರಮುಖ ಪಾತ್ರವಹಿಸಿದ್ದ ವ್ಯಕ್ತಿ ಸಿಎಂ ನಿತೀಶ್​ 2024ರ ಗೂಗಲ್​ ಸರ್ಚ್​ ಇಂಜಿನ್​ನಲ್ಲಿ ಅತ್ಯಂತ ಹೆಚ್ಚುಬಾರಿ ಹುಡುಕಲ್ಪಟ್ಟ ಭಾರತೀಯ 2ನೇ ವ್ಯಕ್ತಿ ಎಂದು ಗುರುತಿಸಲಾಗಿದೆ.

ಕೇಂದ್ರ ಸಚಿವ ಚಿರಾಗ್​ ಪಸ್ವಾನ್​

ಬಿಜೆಪಿ ಮಿತ್ರ ಪಕ್ಷವಾಗಿರುವ ಲೋಕ ಜನಶಕ್ತಿ ಪಕ್ಷದ(ರಾಮ್​ವಿಲಾಸ್​) ಮುಖ್ಯಸ್ಥ ಚಿರಾಗ್​ ಪಸ್ವಾನ್​ 2024ರ ಗೂಗಲ್​ ಸರ್ಚ್​ ಇಂಜಿನ್​ನಲ್ಲಿ ಅತ್ಯಂತ ಹೆಚ್ಚುಬಾರಿ ಹುಡುಕಲ್ಪಟ್ಟ ಭಾರತೀಯ 3ನೇ ವ್ಯಕ್ತಿ ಎಂದು ಗುರುತಿಸಲಾಗಿದೆ. ಪಸ್ವಾನ್​​ ಅವರು ಪ್ರಸ್ತುತ ಎನ್​​ಡಿಎ ನೇತೃದ ಕೇಂದ್ರ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದಾರೆ.

ರೋಹಿತ್​ ಶರ್ಮಾ

ಭಾರತ ಕ್ರಿಕೆಟ್​ ತಂಡದ ನಾಯಕ ಮತ್ತು ಮುಂಬೈ ಇಂಡಿಯನ್ಸ್​ ತಂಡದ ಮಾಜಿ ನಾಯಕ ರೋಹಿತ್​ ಶರ್ಮಾ 2024ರ ಗೂಗಲ್​ ಸರ್ಚ್​ ಇಂಜಿನ್​ನಲ್ಲಿ ಅತ್ಯಂತ ಹೆಚ್ಚುಬಾರಿ ಹುಡುಕಲ್ಪಟ್ಟ ಭಾರತೀಯ 4ನೇ ವ್ಯಕ್ತಿ ಎಂದು ಗುರುತಿಸಲಾಗಿದೆ. ಜೂನ್​ನಲ್ಲಿ ನಡೆದ ಟಿ-20 ವಿಶ್ವಕಪ್​ನಲ್ಲಿ ಭಾರತ ತಂಡದ ನಾಯಕರಾಗಿದ್ದ ರೋಹಿತ್ ವಿಶ್ವಕಪ್​ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸದ್ದರು. ಅಲ್ಲದೇ, ಕಪ್​ ಗೆದ್ದ ಬಳಿಕ ಟಿ-20 ಕ್ಯಾಪ್ಟನ್ಸಿ ಮತ್ತು ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು.

ಪವನ್ ಕಲ್ಯಾಣ್​

ಟಾಲಿವುಡ್​ ಸ್ಟಾರ್​ ಪವನ್​ ಕಲ್ಯಾಣ ಈ ಬಾರಿಯ ಆಂಧ್ರದ ವಿಧಾನಸಭೆ ಚುನಾವಣೆಯಲ್ಲಿ 21 ಸ್ಥಾನ ಗೆಲ್ಲುವ ಮೂಲಕ ಆಂಧ್ರಪ್ರದೇಶ ಡಿಸಿಎಂ ಆಗಿದ್ದಾರೆ.2024ರ ಗೂಗಲ್​ ಸರ್ಚ್​ ಇಂಜಿನ್​ನಲ್ಲಿ ಅತ್ಯಂತ ಹೆಚ್ಚುಬಾರಿ ಹುಡುಕಲ್ಪಟ್ಟ ಭಾರತೀಯ 5ನೇ ವ್ಯಕ್ತಿ ಎಂದು ಗುರುತಿಸಲಾಗಿದೆ.

ಇನ್ನು ಅದರಂತೆ ವಿವಿಧ ಕ್ಷೇತ್ರಗಳ ಉಳಿದ 5 ಸ್ಥಾನಗಳನ್ನು ಶಶಾಂಕ್​ ಸಿಂಗ್​(ಕ್ರಿಕೆಟ್​), ಪೂನಂ ಪಾಂಡೆ(ಮಾಡೆಲ್​), ರಾಧಿಕ ಮಾರ್ಚೆಂಟ್​(ವ್ಯಾಪರಿ), ಅಭಿಷೇಕ್​ ಶರ್ಮಾ(ಕ್ರಿಕೆಟ್​) ಮತ್ತು ಲಕ್ಷ್ಯ ಸೇನ್​ (ಬ್ಯಾಡ್ಮಿಂಟನ್​) ಅವರನ್ನು ಗುರುತಿಸಲಾಗಿದೆ, (ಏಜೆನ್ಸಿಸ್​).