ChatGPT CEO: ಪ್ರಸ್ತುತ ಕಾಲಘಟ್ಟದಲ್ಲಿ ಎಲ್ಲವೂ ಡಿಜಿಟಲ್ ಮಯ. ಕೃತಕ ಬುದ್ಧಿಮತ್ತೆ ಬಳಕೆ ಹೆಚ್ಚಾಗುತ್ತಿದ್ದಂತೆ ಮಾನವನ ಕೆಲಸಕ್ಕೆ ಹಿಂದಿದ್ದ ಬೇಡಿಕೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಮನುಷ್ಯ ಮಾಡಬಹುದಾದ ಬಹುತೇಕ ಕೆಲಸಗಳನ್ನು ಕ್ಷಣಮಾತ್ರದಲ್ಲಿ ಮಾಡಿ ಮುಗಿಸುವ ಸಾಮರ್ಥ್ಯವುಳ್ಳ ಈ ಎಐ ಆವಿಷ್ಕಾರ, ಜನರ ಅರ್ಧದಷ್ಟು ಉದ್ಯೋಗಗಳನ್ನು ಶರವೇಗದಲ್ಲಿ ಕಸಿದುಕೊಳ್ಳುತ್ತಿದೆ.
ಇದನ್ನೂ ಓದಿ: 35 ಸಾವಿರಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರು: ಅರವಿಂದ ಲಿಂಬಾವಳಿ ಹೇಳಿಕೆ | 1500 more complaints
ಪ್ರತಿಷ್ಠಿತ ಸಂಸ್ಥೆಗಳು, ಟೆಕ್ನಿಕಲ್ ವಿಭಾಗದ ಉದ್ಯೋಗಿಗಳು ಹಾಗೂ ಯುವಜನರು ಈ ಕೃತಕ ಬುದ್ಧಿಮತ್ತೆ ಮೇಲೆ ಸಂಪೂರ್ಣವಾಗಿ ಆವಲಂಬಿತರಾಗಿದ್ದಾರೆ. ಸುಲಭ ಹಾಗೂ ಸರಳವಾಗಿ ತಮ್ಮ ದೈನಂದಿನ ಕೆಲಸಗಳನ್ನು ಈಡೇರಿಸಿಕೊಳ್ಳುವ ಮಂದಿ, ಇಂತಹ ಆಧುನಿಕ ಎಐ ಮೊರೆ ಹೋಗಿರುವುದರಲ್ಲಿ ತೀರ ಅಚ್ಚರಿ ಏನಿಲ್ಲ. ಸದ್ಯ ಈ ಕುರಿತಂತೆ ಮಾತನಾಡಿರುವ ಚಾಟ್ಜಿಪಿಟಿ ಸಿಇಓ ಸ್ಯಾಮ್ ಆಲ್ಟ್‌ಮನ್, ಎಐಗಿಂತಲೂ ದೊಡ್ಡದು ಮತ್ತೇನೋ ಬರುತ್ತಿದೆ ಎಂಬುದರ ಸುಳಿವೊಂದನ್ನು ಇದೀಗ ಬಿಟ್ಟುಕೊಟ್ಟಿದ್ದಾರೆ.
"ಬಹುತೇಕ ಎಲ್ಲಾ ಕಂಪನಿಗಳು ಪ್ರಸ್ತುತ ಕೃತಕ ಬುದ್ಧಿಮತ್ತೆಯನ್ನು ಬಳಸುತ್ತಿವೆ. ಎಐ ಬರವಣಿಗೆ, ಕೋಡಿಂಗ್, ಡೇಟಾ ಕೆಲಸದಂತಹ ಅನೇಕ ಡೆಸ್ಕ್ ಕೆಲಸಗಳನ್ನು ಸುಲಭವಾಗಿ ಆಗುತ್ತಿದೆ. ಇದು ಕೇವಲ ಆರಂಭ. ಈಗ ಪ್ರತಿಯೊಬ್ಬರೂ AI ಟೆಕ್ನಾಲಜಿ ಬಗ್ಗೆಯೇ ಮಾತನಾಡುತ್ತಿದ್ದಾರೆ. ಡೆಸ್ಕ್ ಕೆಲಸಗಳು ಕಣ್ಮರೆಯಾಗುತ್ತಿವೆ ಎಂದು ಹೇಳುತ್ತಾರೆ. ಆದರೆ, ಇದಕ್ಕಿಂತಲೂ ಇನ್ನೂ ದೊಡ್ಡ ಬದಲಾವಣೆ ಬರಲಿದೆ, ನಿರೀಕ್ಷಿಸಿ. ಮುಂದಿನ ದಿನಗಳಲ್ಲಿ, ಹ್ಯುಮನಾಯ್ಡ್ ರೋಬೋಟ್‌ಗಳು ನಮ್ಮ ದೈನಂದಿನ ಬದುಕಿನಲ್ಲಿ ಪ್ರವೇಶಿಸಲಿವೆ" ಎಂದು ಹೇಳಿದರು.
ಇದನ್ನೂ ಓದಿ: ಟ್ಯಾನ್ ಆಗೋ ಭಯದಿಂದ 2 ವರ್ಷ ಸೂರ್ಯನ ಬೆಳಕು ತಪ್ಪಿಸಿದ ಮಹಿಳೆಗೆ ಶಾಕ್: ಸುಮ್ಮನೆ ತಿರುಗಿದ್ದಕ್ಕೆ ಮೂಳೆ ಮುರಿತ! Skin
"ಈ ರೋಬೋಟ್‌ಗಳು ನಮ್ಮ ನಿಮ್ಮಂತೆಯೇ ಬೀದಿಗಳಲ್ಲಿ ನಡೆದಾಡುವುದನ್ನು ಕಾಣಬಹುದು. ಅಸಲಿಗೆ ಸ್ಮಾರ್ಟ್ ರೋಬೋಟ್‌ಗಳು ಏನ್ನೆಲ್ಲ ಮಾಡಬಹುದು ಎಂಬುದನ್ನು ಇನ್ನೂ ಜಗತ್ತು ನೋಡಿಲ್ಲ. ಅದರ ಊಹೆಯೂ ಮಾಡಿಕೊಂಡಿಲ್ಲ. ಸೈನ್ಸ್ ಫಿಕ್ಷನ್ ಆಧರಿತ ಸಿನಿಮಾಗಳಲ್ಲಿ ನಾವು ನೋಡುವಂತೆ ನಮ್ಮ ಜೀವನವು ಶೀಘ್ರದಲ್ಲೇ ಬದಲಾಗುತ್ತದೆ" ಎಂದು ಸ್ಯಾಮ್ ಆಲ್ಟ್‌ಮನ್ ಹೇಳಿದ್ದಾರೆ,(ಏಜೆನ್ಸೀಸ್).