ನವದೆಹಲಿ: ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರ ತಾಯಿ, ಬಿಜೆಪಿ ಮುಖಂಡರಾಗಿದ್ದ ಚಂದ್ರಕಾಂತಾ ಗೋಯಲ್ (88) ಶನಿವಾರ ಬೆಳಿಗ್ಗೆ ನಿಧನರಾದರು.
ತಮ್ಮ ತಾಯಿಯ ನಿಧನದ ಸುದ್ದಿಯನ್ನು ಪಿಯುಷ್ ಗೋಯಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಇಸ್ರೇಲ್: ಡಜನ್ಗಟ್ಟಲೆ ಶಾಲೆಗಳಿಗೆ ಬೀಗ, ಸಾವಿರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕ್ವಾರಂಟೈನ್ಗೆ..!
"ಯಾವಾಗಲೂ ಪ್ರೀತಿಯಿಂದ ನಮಗೆ ಮಾರ್ಗದರ್ಶನ ನೀಡುತ್ತಿದ್ದ ನಮ್ಮ ತಾಯಿ ಇಂದು ಈ ಬೆಳಿಗ್ಗೆ ನಿಧನರಾದರು. ಅವರು ತಮ್ಮ ಇಡೀ ಜೀವನವನ್ನು ಸೇವೆಯಲ್ಲೇ ಕಳೆದು ನಮಗೂ ಮಾದರಿಯಾಗಿದ್ದಾರೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಓಂ ಶಾಂತಿ, ಎಂದು ಗೋಯಲ್ ಟ್ವೀಟ್ ಮಾಡಿದ್ದಾರೆ.
ಮಾಜಿ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಸಚಿವ ಸಂಪುಟದಲ್ಲಿ ಜಲಸಾರಿಗೆ ಸಚಿವರಾಗಿದ್ದ ವೇದ್ಪ್ರಕಾಶ್ ಗೋಯಲ್ ಅವರ ಪತ್ನಿಯಾಗಿದ್ದ ಚಂದ್ರಕಾಂತಾ 3 ಬಾರಿ ಮುಂಬೈನ ಮಾತುಂಗಾ ಕ್ಷೇತ್ರದ ಶಾಸಕಿಯಾಗಿದ್ದರು.