ಚಾಮರಾಜನಗರ: ಕೇಂದ್ರ ಸಚಿವ ಅಮಿತ್ ಷಾ ರಾಜೀನಾಮೆಗೆ ಒತ್ತಾಯಿಸಿ ದಲಿತಪರ ಮತ್ತು ಪ್ರಗತಿಪರ ಸಂಘಟನೆಗಳು ನೀಡಿರುವ ಚಾಮರಾಜನಗರ ಬಂದ್ನಿಂದಾಗಿ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ತೀವ್ರ ಪರದಾಡುವಂತಾಗಿದೆ.
ಇದನ್ನೂ ಓದಿ: ಭೀಕರ ವಿಮಾನ ದುರಂತದಲ್ಲಿ ಇಬ್ಬರು ಮಾತ್ರ ಬದುಕುಳಿದಿದ್ದು ಹೇಗೆ? ಕಡೆಗೂ ವರದಿ ಮೂಲಕ ಸಿಕ್ತು ಸ್ಪಷ್ಟ ವಿವರಣೆ | Plane Crash
ನಗರದಲ್ಲಿ ವಿವಿಧ ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಮಂಗಳವಾರ (ಡಿ.31) ಕರೆ ನೀಡಿರುವ ಚಾಮರಾಜನಗರ ಬಂದ್ ನಿಂದಾಗಿ ಕೆಎಸ್ಆರ್ಟಿಸಿ ಬಸ್ ಮತ್ತು ಖಾಸಗಿ ಬಸ್ಗಳು ಸಂಚರಿಸದೇ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗಲು ಪರದಾಡಿದ್ದಾರೆ.
ನಗರದ ವಿವಿಧ ಕಾಲೇಜುಗಳಿಗೆ ಗ್ರಾಮೀಣ ಭಾಗದಿಂದ ಬಂದ ವಿದ್ಯಾರ್ಥಿಗಳು ಹಾಗೂ ಜಿಲ್ಲಾ ಕೇಂದ್ರದಿಂದ ಇಂಜಿನಿಯರಿಂಗ್ ಕಾಲೇಜು ಮತ್ತು ಇನ್ನಿತರೆ ಕಾಲೇಜುಗಳಿಗೆ ಹೋಗಬೇಕಾದ ವಿದ್ಯಾರ್ಥಿಗಳು ಸಾರಿಗೆ ಬಸ್ಗಳ ಕೊರತೆ ಎದುರಿಸಿದ ಹಿನ್ನಲೆ ತೊಂದರೆ ಅನುಭವಿಸಿದ್ದಾರೆ. ಕೆಲವರು ಬಸ್ಗಾಗಿ ಕಾದು ಕಾದು ನಂತರ ಆಟೋಗಳಲ್ಲಿ ತಮ್ಮ ಸ್ಥಳಕ್ಕೆ ತೆರಳಿದ್ದಾರೆ.