ಬೆಂಗಳೂರು: ವಿಜಯವಾಣಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಸ್ಯಾಂಡಲ್ವುಡ್ನ ಯುವ ನಟಿ ಚೈತ್ರಾ ಜೆ.ಆಚಾರ್, ಸಿಂಗರ್ನಿಂದ ನಟನೆಗೆ ಬಂದ ಹಾದಿ ಹೇಗೆ ಎಂಬ ಪ್ರಶ್ನೆಗೆ ಈ ರೀತಿ ಉತ್ತರ ನೀಡಿದ್ದಾರೆ.
"ನನಗೆ ಅದರ ಬಗ್ಗೆ ಸ್ವಲ್ಪವೂ ತಿಳಿದಿರಲಿಲ್ಲ. ಆದ್ರೆ ನಮ್ಮ ಮನೆಯಲ್ಲಿ ನಾನೊಬ್ಬಳು ಸಿಂಗರ್ ಆಗುತ್ತೀನಿ ಎಂದೆ ಗೊತ್ತಿತ್ತೇ ಹೊರತು ನಟಿಯಾಗಲ್ಲ! ಶಾಲೆ ಮತ್ತು ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕಗಳಲ್ಲಿ ನಟನೆ ಮಾಡುತ್ತಿದ್ದೆ, ಆಕ್ಟಿಂಗ್ನಲ್ಲಿ ಅಧಿಕ ಆಸಕ್ತಿ ನನ್ನಲಿತ್ತು. ಆದ್ರೆ, ನಟನೆಯನ್ನು ವೃತ್ತಿಯಾಗಿ ಮುಂದುವರಿಸಿಕೊಂಡು ಹೋಗಬೇಕು ಅಥವಾ ಚಿತ್ರರಂಗದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಬೇಕು ಎಂಬ ಐಡಿಯಾ ನನಗೆ ಇರಲಿಲ್ಲ" ಎಂದು ಹೇಳಿದರು.
ಇದನ್ನೂ ಓದಿ: ಕೆಳಗೆ ಬಿದ್ದು ತನಗೇನೂ ತಿಳಿಯದಂತೆ ಮುಖ ಮಾಡಿಕೊಂಡ ಪಾಂಡಾ; ಈ ವಿಡಿಯೋ ನೋಡಿದರೆ ನಗು ಉಕ್ಕಿ ಬರದೇ ಇರಲಾರದು…
"ಈಗಲೂ ನಮ್ಮ ತಾಯಿಯನ್ನು ನಿಮ್ಮ ಮಗಳು ಏನು ಮಾಡಬೇಕಿತ್ತು ಎಂದು ಕೇಳಿದರೆ, ಅವರು ನಾನೊಬ್ಬಳು ಸಿಂಗರ್ ಆಗಿದ್ದರೆ ಚೆನ್ನಾಗಿರುತ್ತಿತ್ತು ಎಂದೇ ಹೇಳುತ್ತಾರೆ" ಎಂದು ಹೇಳಿದರು. 'ಗರುಡ ಗಮನ ವೃಷಭ ವಾಹನ' ಸಿನಿಮಾದಲ್ಲಿ ಹಾಡಲು ಅವಕಾಶ ಲಭಿಸಿದ್ದು ಹೇಗೆ ಎಂಬುದರ ಬಗ್ಗೆ ಚೈತ್ರಾ ಜೆ.ಆಚಾರ್ ಈ ಕೆಳಗಿನ ಸಂದರ್ಶನದ ವಿಡಿಯೋದಲ್ಲಿ ಮಾತನಾಡಿದ್ದಾರೆ. ವೀಕ್ಷಿಸಲು ಲಿಂಕ್ ಕ್ಲಿಕ್ ಮಾಡಿ.