ದೆಹಲಿ: ಒಡಿಶಾದ ಬಾಲಸೋರ್ನಲ್ಲಿ ನಡೆದ ರೈಲು ಅಪಘಾತದಲ್ಲಿ 288 ಜನರು ಮೃತಪಟ್ಟು, ಸಾವಿರಾರು ಜನರು ಗಾಯಗೊಂಡಿದ್ದರು. ಈ ಬೆನ್ನಲ್ಲೇ ಕೇಂದ್ರ ರೈಲ್ವೆ ಬೋರ್ಡ್ ಎಚ್ಚೆತ್ತುಕೊಂಡಿದೆ. ದೆಹಲಿಯ ರೈಲ್ವೆ ಛೇರ್ಮನ್ ದೇಶದ ಹದಿನಾರು ರೈಲ್ವೆ ವಿಭಾಗೀಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಪ್ರಮುಖ ಮಾರ್ಗಸೂಚಿಗಳನ್ನು ನೀಡಿದ್ದಾರೆ.
ವರ್ಚುವಲ್ ಸಭೆ ನಡೆಸಿದ್ದ ರೈಲ್ವೆ ಬೋರ್ಡ್ ಚೇರ್ಮನ್, ರೈಲ್ವೆ ಇಲಾಖೆಯಲ್ಲಿನ ಕೆಲ ಲೋಪಗಳ ಬಗ್ಗೆ ಅಧಿಕಾರಿಗಳ ಜೊತೆ ಆತ್ಮಾವಲೋಕನ ಮಾಡಿ ಹಲವಾರು ಮಾರ್ಗಸೂಚಿಗಳನ್ನು ನೀಡಿದ್ದಾರೆ. ಒಂದು ವಿಭಾಗಕ್ಕೆ ಒಬ್ಬ ಜನರಲ್ ಮ್ಯಾನೇಜರ್ ಇರಲಿದ್ದು, ಈತನ ಜೊತೆ ಡಿವಿಷನ್ ಮ್ಯಾನೇಜರ್ ಕಾರ್ಯ ನಿರ್ವಹಿಸಬೇಕು ಎಂದಿದ್ದಾರೆ. ಕರ್ನಾಟದಲ್ಲಿ ಮೂರು ಡಿವಿಷನ್ಗಳಿದ್ದು, ಮೈಸೂರು, ಬೆಂಗಳೂರು ಮತ್ತು ಹುಬ್ಬಳ್ಳಿಯ ಡಿವಿಷನ್ನ ರೈಲ್ವೆ ಜನರಲ್ ಮ್ಯಾನೇಜರ್ಗಳು ಸಹ ಸಭೆಯಲ್ಲಿ ಭಾಗಿಯಾಗಿದ್ದರು. ಮೂರು ವಿಭಾಗದ ಜನರಲ್ ಮ್ಯಾನೇಜರ್ಗಳಿಗೆ ಟಾಸ್ಕ್ ನೀಡಲಾಗಿದೆ.
ಮತ್ತೊಂದೆಡೆ ರೈಲ್ವೆ ಪೊಲೀಸ್ ಹಾಗೂ ಆರ್ಪಿಎಫ್ ಸಹ ಅಲರ್ಟ್ ಆಗಿದ್ದು, ರೈಲ್ವೆ ಎಡಿಜಿಪಿ ಅಲೋಕ್ ಕುಮಾರ್ರಿಂದಲೂ ಇಲಾಖೆಯ ಸಿಬ್ಬಂದಿ ಕಾರ್ಯ ನಿರ್ವಹಣೆ ಬಗ್ಗೆ ಟಾಸ್ಕ್ ನೀಡಲಾಗಿದೆ. ಇಡೀ ರಾಜ್ಯದಲ್ಲಿನ ರೈಲ್ವೆ ಹಳಿಗಳ ವ್ಯವಸ್ಥೆ, ಸಿಗ್ನಲ್ ಡಿಪಾರ್ಟ್ಮೆಂಟ್ ಕಾರ್ಯದ ಬಗ್ಗೆ ಎಚ್ಚರವಿರಲು ಸಂದೇಶವನ್ನು ನೀಡಲಾಗಿದೆ.
ರಾಜ್ಯ ರೈಲ್ವೆ ಅಧಿಕಾರಿಗಳಿಗೆ ಕೊಟ್ಟ ಸಂದೇಶಗಳು:
ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ಸದಾ ಫೀಲ್ಡ್ನಲ್ಲಿರಬೇಕು. ಯಾವುದೇ ಸಣ್ಣ ಪುಟ್ಟ ಘಟನೆ ನಡೆದರೂ ಗ್ರೌಂಡ್ ಮಟ್ಟದ ತನಿಖೆಯಾಗಬೇಕು. ವಾರಕ್ಕೊಮ್ಮೆ ಎರಡು ಬಾರಿ ರೈಲ್ವೆ ಜೋನ್ನಲ್ಲಿ ಅನಿರೀಕ್ಷಿತವಾಗಿ ಭೇಟಿ ನೀಡಿ ಕಡ್ಡಾಯವಾಗಿ ಪರಿಶೀಲನೆ ಮಾಡಬೇಕು. ಅಧಿಕಾರಿಗಳು ರಾತ್ರಿ ವೇಳೆಯಲ್ಲಿ ಧಿಡೀರ್ ಪರಿಶೀಲನೆ ಮಾಡುವುದರ ಜತೆಗೆ ಟ್ರೈನ್ನಲ್ಲೇ ಸಂಚರಿಸಿ ರೈಲ್ವೆ ಮಾಸ್ಟರ್, ಗೇಟ್ಗಳ ಸಿಬ್ಬಂದಿ ಕೆಲಸದ ಬಗ್ಗೆ ನಿಗಾವಹಿಸಲು ಸೂಚನೆ ನೀಡಲಾಗಿದೆ.
ಎರಡು ಸಿಗ್ನಲ್ಗಳಲ್ಲಿ ರೈಲು ಚಲಿಸುವಾಗ ಹಸಿರು ಲೈಟ್ನ್ನು ಕಡ್ಡಾಯವಾಗಿ ಚಾಲೂ ಮಾಡಿರಬೇಕು. ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಕೂಡಲೇ ಬಗೆಹರಿಸಬೇಕು. ಸಿಗ್ನಲಿಂಗ್ ಡಿಪಾರ್ಟ್ಮೆಂಟ್ ಪೂರ್ತಿ ಎಚ್ಚರದಿಂದ ಇದ್ದು ಕೆಲಸ ಮಾಡಬೇಕು. ಇಂಜಿನಿಯರಿಂಗ್ ಮತ್ತು ಟ್ರೈನ್ಲೈಟ್ ಅಧಿಕಾರಿಯು ಸಿಬ್ಬಂದಿಗೆ ಅವರ ಕಾರ್ಯ ಪ್ರಾಮುಖ್ಯತೆಯ ಬಗ್ಗೆ ತಿಳಿಸಬೇಕು ಎಂದು ಸೂಚಿಸಲಾಗಿದೆ.(ಏಜೆನ್ಸೀಸ್)