More

    ವರ್ಗೀಕೃತ ದಾಖಲೆಗಳ ಪ್ರಕರಣ: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಬಿಗ್​ ಶಾಕ್​

    ವಾಷಿಂಗ್ಟನ್​: ಅಮರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರು​ ವರ್ಗೀಕೃತ ದಾಖಲೆಗಳ ಪ್ರಕರಣದಲ್ಲಿ ಸಿಲುಕಿದ್ದು, ಅವರ ವಿರುದ್ಧ ದೋಷಾರೋಪಣೆ ಹೊರಿಸಲಾಗಿದೆ. ವರ್ಗೀಕೃತ ಸರ್ಕಾರಿ ದಾಖಲೆಗಳನ್ನು ಮರಳಿಸದ ಮತ್ತು ವೈಟ್​ಹೌಸ್​ ತೊರೆದ ಬಳಿಕ ತಮ್ಮ ಫ್ಲೊರಿಡಾ ನಿವಾಸದಲ್ಲೇ ದಾಖಲೆಗಳನ್ನು ಉಳಿಸಿಕೊಳ್ಳುವ ಮೂಲಕ ಕಾನೂನಿನ ಪ್ರಕ್ರಿಯೆಗೆ ಅಡಚಣೆ ಉಂಟು ಮಾಡಿದ ಆರೋಪದ ಮೇಲೆ ಫೆಡರಲ್​ ಗ್ರ್ಯಾಂಡ್​ ಜ್ಯೂರಿ ಟ್ರಂಪ್​ ವಿರುದ್ಧ ದೋಷಾರೋಪಣೆ ಹೊರಿಸಿದೆ.

    76 ವರ್ಷದ ಟ್ರಂಪ್, ವರ್ಗೀಕೃತ ದಾಖಲೆಗಳನ್ನು ಅನಧಿಕೃತವೃಗಿ ತಮ್ಮ ಬಳಿಯೇ ಇಟ್ಟುಕೊಂಡಿರುವುದು, ತಪ್ಪು ಹೇಳಿಕೆಗಳನ್ನು ನೀಡಿರುವುದು ಮತ್ತು ಕಾನೂನಿಗೆ ಅಡಚಣೆ ಸೇರಿದಂತೆ 7 ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇದು ಟ್ರಂಪ್ ವಿರುದ್ಧದ ಎರಡನೇ ದೋಷಾರೋಪಣೆಯಾಗಿದೆ ಮತ್ತು ಮಾಜಿ ಅಧ್ಯಕ್ಷರ ಮೊದಲ ಫೆಡರಲ್ ದೋಷಾರೋಪಣೆಯಾಗಿದೆ. ಈ ಕ್ರಿಮಿನಲ್​ ಪ್ರಕರಣವನ್ನು ಅಮೆರಿಕದ ಕಾನೂನು ವಿಭಾಗವೇ ಹೊರತಂದಿರುವುದರಿಂದ ಟ್ರಂಪ್​ ಅವರಿಗೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮುಂದಿನ ವರ್ಷ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್​ ಪಕ್ಷದ ಅಭ್ಯರ್ಥಿಯಾಗಿರುವ ಟ್ರಂಪ್​​ಗೆ ವರ್ಗೀಕೃತ ಕಡತಗಳ ಪ್ರಕರಣ ಮುಳುವಾಗುವ ಸಾಧ್ಯತೆ ಇದೆ ಎಂಬ ಚರ್ಚೆ ನಡೆಯುತ್ತಿದೆ.

    ಇದನ್ನೂ ಓದಿ: ಬೆಂಗಳೂರು ಹಬ್ಬದಲ್ಲಿ ಕೊಳ್ಳೆ ಹೊಡೆದ ಕಿ’ಲೇಡಿ’; ಪ್ರತಿ ಪ್ಲಾಸ್ಟಿಕ್ ಖುರ್ಚಿಗೆ 50 ರೂ. ಬಾಡಿಗೆ | ಲೂಟಿ ಅನುಮಾನ

    ಟ್ರಂಪ್​ ಈಗಾಗಲೇ ನ್ಯೂಯಾರ್ಕ್​ನಲ್ಲಿ ಮತ್ತೊಂದು ಕ್ರಿಮಿನಲ್​ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಇದೀಗ ಮತ್ತೊಂದು ಕ್ರಿಮಿನಲ್​ ಪ್ರಕರಣ ಟ್ರಂಪ್​ ಅವರನ್ನು ಸುತ್ತಿಕೊಂಡಿದೆ. ಈಗಾಗಲೇ 7 ಪ್ರಕರಣಗಳ ಸಂಬಂಧ ಮಂಗಳವಾರದ ಮೈಮಿ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಟ್ರಂಪ್​ಗೆ ಸಮನ್ಸ್​ ಜಾರಿ ಮಾಡಿರುವ ಸಂಗತಿಯನ್ನು ಅವರ ಕಾನೂನು ತಂಡ ಗಮನಿಸಿದೆ.

    ನಾನು ಅಮಾಯಕ ಎಂದ ಟ್ರಂಪ್​

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟ್ರಂಪ್​, ಮೈಮಿಯಲ್ಲಿರುವ ಫೆಡರಲ್​ ಕೋರ್ಟ್​ ಹೌಸ್​ ಮುಂದೆ ಮಂಗಳವಾರ ಹಾಜರಾಗುವಂತೆ ನನಗೆ ಸಮನ್ಸ್​ ನೀಡಲಾಗಿದೆ. ನಾನೊಬ್ಬ ಅಮಾಯಕ ಎಂದು ಟ್ರೂಥ್​ ಹೆಸರಿನ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷರಿಗೆ ಇಂತಹದ್ದೊಂದು ಸಂಗತಿ ಸಂಭವಿಸಬಹುದು ಎಂದು ನಾನು ಎಂದಿಗೂ ಊಹಿಸಲಿಲ್ಲ ಎಂದಿದ್ದಾರೆ. ಇದು ನಿಜಕ್ಕೂ ಯುನೈಟೆಡ್​ ಸ್ಟೇಟ್ಸ್​ ಆಫ್​ ಅಮೆರಿಕದ ಕರಾಳ ದಿನವಾಗಿದೆ. ದೇಶವು ಕುಸಿತದೆಡೆಗೆ ಸಾಗುತ್ತಿದೆ. ಆದರೆ, ಆದರೆ ನಾವು ಅಮೆರಿಕವನ್ನು ಮತ್ತೆ ಶೇಷ್ಠವನ್ನಾಗಿಸುತ್ತೇವೆ ಎಂದು ಹಾಲಿ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಟ್ರಂಪ್​​ ಟಾಂಗ್​ ನೀಡಿದ್ದಾರೆ.

    ಟ್ರಂಪ್​ ವಿರುದ್ಧದ 7 ಪ್ರಕರಣಗಳು ಯಾವುವು?

    ಎನ್‌ಡಿಐ (ಬೇಹುಗಾರಿಕೆ ಕಾಯಿದೆ) ಉದ್ದೇಶಪೂರ್ವಕ ತಡೆಹಿಡಿಯುವುದು, ನ್ಯಾಯಕ್ಕೆ ಅಡ್ಡಿಪಡಿಸುವ ಪಿತೂರಿ, ಕಡತಗಳು ಅಥವಾ ದಾಖಲೆಯನ್ನು ತಡೆಹಿಡಿಯುವುದು, ದಾಖಲೆಗಳನ್ನು ಮರೆಮಾಚುವುದು, ಫೆಡರಲ್ ತನಿಖೆಯಿಂದ ದಾಖಲೆಯನ್ನು ಮುಚ್ಚಿಡುವುದು, ಮರೆಮಾಚುವ ಸಂಚು ಮತ್ತು ಸುಳ್ಳು ಹೇಳಿಕೆಗಳು. ಈ ಪ್ರಕರಣಗಳಲ್ಲಿ ಟ್ರಂಪ್​ ಅವರು ತಪ್ಪಿತಸ್ಥರೆಂದು ಸಾಬೀತಾದರೆ, ಗರಿಷ್ಠ 100 ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

    ಇದನ್ನೂ ಓದಿ: ಬೈದರು ಎಂಬ ಕಾರಣಕ್ಕೆ ಅಜ್ಜಿಯನ್ನು ಹತ್ಯೆ ಮಾಡಿದ ಮೊಮ್ಮಗ : ವೆಬ್‌ಸೀರೀಸ್ ಈತನಿಗೆ ಪ್ರೇರಣೆ..!

    ಏನಿದು ವರ್ಗೀಕೃತ​ ದಾಖಲೆಗಳ ತನಿಖೆ?

    ಟ್ರಂಪ್​ ಅವರು ವೈಟ್​ಹೌಸ್​ ಅನ್ನು ತೊರೆಯುವಾಗ ಕೆಲವು ವರ್ಗೀಕೃತ ದಾಖಲೆಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪವಿದೆ. ಈ ದಾಖಲೆಗಳನ್ನು ಟ್ರಂಪ್​ ಅವರು ತಪ್ಪಾಗಿ ನಿರ್ವಹಿಸಿದ್ದಾರೆಯೇ ಎಂಬ ಬಗ್ಗೆ 2021 ರಲ್ಲಿ ಅಮೆರಿಕದ ನ್ಯಾಯಾಂಗ ಇಲಾಖೆ ತನಿಖೆಯನ್ನು ಪ್ರಾರಂಭಿಸಿತು. ಬಳಿಕ ತನಿಖಾಧಿಕಾರಿಗಳು ಫ್ಲೊರಿಡಾದ ಪಾಮ್​ ಬೀಚ್​ನಲ್ಲಿರುವ ಟ್ರಂಪ್​ ಅವರ ಮಾರ್​ ಎ ಲಾಗೋ ಎಸ್ಟೇಟ್​ನಲ್ಲಿ ಸುಮಾರು 13 ಸಾವಿರ ದಾಖಲೆಗಳನ್ನು ವಶಪಡಿಸಿಕೊಂಡಿತು. ಎಲ್ಲ ವರ್ಗೀಕೃತ ದಾಖಲೆಗಳನ್ನು ಹಿಂದಿರುಗಿಸಿದ್ದೇವೆ ಎಂದು ಟ್ರಂಪ್​ ಅವರ ವಕೀಲ ತಂಡ ಈ ಹಿಂದೆಯೇ ಹೇಳಿಕೆ ನೀಡಿದರೂ ವಶಪಡಿಸಿಕೊಂಡ ದಾಖಲೆಗಳಲ್ಲಿ ಸುಮಾರು 100 ದಾಖಲೆಗಳನ್ನು ವರ್ಗೀಕೃತ ಎಂದು ಗುರುತಿಸಲಾಯಿತು. (ಏಜೆನ್ಸೀಸ್​)

    1 ಲಕ್ಷ ರೂ. ಬೇಕಂತೆ! ವಿಡಿಯೋ ರೆಕಾರ್ಡ್​ ಮಾಡಿದ್ದಕ್ಕೆ ಮಹಿಳಾ ಅಧಿಕಾರಿಯಿಂದ ಅನುಚಿತ ವರ್ತನೆ

    ಡ್ರಗ್ಸ್ ದಂಧೆಗೆ ಖಾಕಿ ಖೆಡ್ಡಾ; ಗಡಿ ಚೆಕ್​ಪೋಸ್ಟ್​ಗಳಲ್ಲಿ ನಿಗಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts