ನ್ಯೂಸ್

ಟ್ರೆಂಡ್ ಆಯ್ತು 'ಎಕ್ಸ್​ಪ್ಲೋರ್​ ಇಂಡಿಯನ್ ಐಲೆಂಡ್ಸ್'​! ಲಕ್ಷದ್ವೀಪ ಪರ ಖ್ಯಾತ​ ಸೆಲೆಬ್ರಿಟಿಗಳ ಹೇಳಿಕೆ ಹೀಗಿವೆ

ಮೋಹನ್​ ಶೆಟ್ಟಿ

ಮುಂಬೈ: ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರ ಕುರಿತು ಮಾಲ್ಡೀವ್ಸ್ ಸಚಿವರೊಬ್ಬರು ಮಾಡಿದ ಅವಹೇಳನಕಾರಿ ಟ್ವೀಟ್​ ಸದ್ಯ ಭಾರೀ ವಿವಾದಕ್ಕೆ ತಿರುಗಿದ್ದು, ಇದೀಗ ಭಾರತೀಯ ಖ್ಯಾತ ಸೆಲೆಬ್ರಿಟಿಗಳು ಲಕ್ಷದ್ವೀಪದ ಪರ ಧ್ವನಿ ಎತ್ತಿದ್ದಾರೆ. ಅವರೆಲ್ಲಾ ಹೇಳಿದ ಸಂಗತಿಗಳು ಹೀಗಿವೆ.

ಪ್ರಧಾನಿ ಮೋದಿ ಅವರ ಭೇಟಿಯ ಹಿನ್ನೆಲೆ ಮಾಲ್ಡೀವ್ಸ್​ ಸಚಿವರು ನೀಡಿದ ವಿವಾದಾತ್ಮಕ ಹೇಳಿಕೆಗೆ ಇದೀಗ ಭಾರತೀಯ ಚಿತ್ರರಂಗದ ನಟ-ನಟಿಯರು ಸೇರಿದಂತೆ ಕ್ರಿಕೆಟ್​ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡುವ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿಚಾರ ತೀವ್ರವಾಗುತ್ತಿದ್ದಂತೆ ಎಕ್ಸ್​ಪ್ಲೋರ್​ ಇಂಡಿಯನ್ ಐಲೆಂಡ್ಸ್ ಎಂಬ ಹ್ಯಾಶ್​ ಟ್ಯಾಗ್ ಬಳಸಿ ಸರಣಿ ಟ್ವೀಟ್​ ಮಾಡುತ್ತಿದ್ದಾರೆ.

ಸೆಲೆಬ್ರಿಟಿಗಳಾದ ಅಕ್ಷಯ್ ಕುಮಾರ್, ಸಚಿನ್ ತೆಂಡೂಲ್ಕರ್, ಸಲ್ಮಾನ್ ಖಾನ್, ಕಂಗನಾ ರಣಾವತ್, ಜಾನ್ ಅಬ್ರಹಾಂ, ಶ್ರದ್ಧಾ ಕಪೂರ್ ಮತ್ತು ಇತರರು ಸೇರಿದಂತೆ ಹಲವರು ತಮ್ಮ ಅಭಿಮಾನಿಗಳಿಗೆ 'ಎಕ್ಸ್​ಪ್ಲೋರ್​ ಇಂಡಿಯನ್ ಐಲೆಂಡ್ಸ್' ಎಂಬುದನ್ನು ಒತ್ತಿ ಹೇಳುವ ಮುಖೇನ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಮಾಡುತ್ತಿದ್ದಾರೆ.

ಮಾಲ್ಡೀವ್ಸ್​ ನಾಯಕರು ಮಾಡಿದ ಟೀಕೆಗಳ ಸ್ಕ್ರೀನ್‌ಶಾಟ್‌ ಹಂಚಿಕೊಂಡ ನಟ ಅಕ್ಷಯ್ ಕುಮಾರ್, "ಇದು ಪ್ರಚೋದಿತ ದ್ವೇಷ. ಘನತೆಗೆ ಮೊದಲ ಸ್ಥಾನವಿದೆ. ತಮ್ಮ ದೇಶಕ್ಕೆ ಅಪಾರ ಸಂಖ್ಯೆಯ ಜನರನ್ನು ಕಳಿಸುವ ರಾಷ್ಟ್ರಕ್ಕೆ ಈ ರೀತಿ ಹೇಳ್ತಾರೆ ಎಂಬುದು ನಿಜಕ್ಕೂ ಆಶ್ಚರ್ಯ. ನಾವು ನಮ್ಮದೇ ಪ್ರವಾಸೋದ್ಯಮವನ್ನು ಬೆಂಬಲಿಸೋಣ" ಎಂದು ಹೇಳಿದ್ದಾರೆ.

ಇದೇ ರೀತಿ ಶ್ರಧ್ದಾ ಕಪೂರ್​, ಸಚಿನ್ ತೆಂಡೂಲ್ಕರ್ ಸೇರಿದಂತೆ ಇನ್ನಿತರರು ಮಾಡಿದ ಟ್ವೀಟ್​ಗಳು ಈ ಕೆಳಕಂಡಂತಿವೆ,(ಏಜೆನ್ಸೀಸ್).