ನ್ಯೂಸ್

ಕದನ ವಿರಾಮ ಉಲ್ಲಂಘನೆ; ಇದಕ್ಕೆ ಪಾಕಿಸ್ತಾನವೇ ಉತ್ತರಿಸಬೇಕು: ವಿದೇಶಾಂಗ ಕಾರ್ಯದರ್ಶಿ ವಿಕ್ರಮ್​ ಮಿಸ್ರಿ | Ceasefire

Ceasefire: ಕದನ ವಿರಾಮ ಒಪ್ಪಂದದ ಕೇಲವೆ ಗಂಟೆಗಳಲ್ಲಿ ಪಾಕಿಸ್ತಾನ ಗಡಿಯಲ್ಲಿ ಡ್ರೋನ್​ ದಾಳಿ ನಡೆಸಿದ್ದು, ಇದು ಕದನ ವಿರಾಮ ಉಲ್ಲಂಘನೆಯಾಗಿದೆ. ಇದಕ್ಕೆ ಪಾಕಿಸ್ತಾವೇ ಉತ್ತರಿಸಬೇಕು ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್​ ಮಿಸ್ರಿ ಹೇಳಿದ್ದಾರೆ.

ಈ ಕುರಿತು ದೆಹಲಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಇಂದು ಸಂಜೆ ಆರಂಭದಲ್ಲಿ ತಲುಪಿದ ದ್ವಿಪಕ್ಷೀಯ ಒಪ್ಪಂದವನ್ನು ಪಾಕಿಸ್ತಾನ ಸೇನೆ ಉಲ್ಲಂಘಿಸಿದರೆ ಕಠಿಣ ರೀತಿಯಲ್ಲಿ ಪ್ರತಿಕ್ರಿಯಿಸಲು ಭಾರತೀಯ ಸೇನೆಗೆ ಸೂಚನೆ ನೀಡಲಾಗಿದೆ ಎಂದರು.

ಪಾಕಿಸ್ತಾನವು ಕದನ ವಿರಾಮ ಉಲ್ಲಂಘನೆಯ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಿಶ್ರಿ ಕೇಳಿಕೊಂಡಿದ್ದಾರೆ. ಘಟನೆಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಜವಾಬ್ದಾರಿಯುತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

"ಈ ಅತಿಕ್ರಮಣ ಅತ್ಯಂತ ಖಂಡನೀಯ ಮತ್ತು ಪಾಕಿಸ್ತಾನ ಇದಕ್ಕೆ ಕಾರಣವಾಗಿದೆ. ಪಾಕಿಸ್ತಾನ ಈ ಪರಿಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ಈ ಅತಿಕ್ರಮಣವನ್ನು ತಡೆಯಲು ತಕ್ಷಣವೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ನಾವು ನಂಬುತ್ತೇವೆ" ಎಂದು ಮಿಶ್ರಿ ಹೇಳಿದರು.(ಏಜೆನ್ಸೀಸ್​)