Basangouda Patil Yatnal 
ನ್ಯೂಸ್

ಅಪ್ಪ-ಮಕ್ಕಳದ್ದೂ ಸೇರಿ ಇನ್ನೂ 23 ಸಿಡಿ ಇವೆ ಎಂದ ಯತ್ನಾಳ್

arunakunigal

ಬೆಂಗಳೂರು: ರಾಜ್ಯದಲ್ಲಿ ಈಗ ಏನಿದ್ದರೂ ಸಿಡಿಯದೇ ಸದ್ದು. ಒಂದಲ್ಲ, ಎರಡಲ್ಲ ಇನ್ನೂ 23 ಸಿಡಿಗಳಿವೆ ಎಂದ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಮತ್ತೊಂದು ಜೋರು ಸದ್ದು ಮಾಡಿದ್ದಾರೆ.

ವಿಧಾನಸೌಧ ಮೊಗಸಾಲೆಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್​, ಸದ್ಯಕ್ಕೆ ಸಿಡಿ ರಾಜಕಾರಣ, ಕಲೆಕ್ಷನ್‌ದೇ ಭರಾಟೆ. ಇಷ್ಟಕ್ಕೂ ಈಗ ಹೊರ ಬಂದಿರುವ ಸಿಡಿಗೂ ನಾನು ಹೇಳಿದ ಸಿಡಿಗೂ ಸಂಬಂಧವಿಲ್ಲ. ಎರಡೂ ಬೇರೆ ಬೇರೆಯಾಗಿವೆ ಎಂಬ ಮಾತು ಸೇರಿಸಿದರು.

ಬಯಲಾದ ಅಶ್ಲೀಲ ಸಿಡಿ ಪ್ರಕರಣದಲ್ಲಿ ಎರಡೂ ಕಡೆಯವರ ಷಡ್ಯಂತ್ರವಿದೆ. ಬಾಧಿತ ಪ್ರಭಾವಿಗಳು ಈ ಷಡ್ಯಂತ್ರ ಭೇದಿಸುವುದು ನಿಶ್ಚಿತ. ಅಪ್ಪ-ಮಕ್ಕಳ ಸಿಡಿಯೂ ಕೆಲವರ ಬಳಿಯಿದೆ. ಇಷ್ಟರಲ್ಲೇ ಬಹಿರಂಗಪಡಿಸಿದರೂ ಅಚ್ಚರಿಯಿಲ್ಲ ಎಂದು ಯತ್ನಾಳ್ ಮತ್ತೊಂದು ಸ್ಫೋಟಕ ಹೇಳಿಕೆಯಿತ್ತರು.