ನ್ಯೂಸ್

ಐಂದ್ರಿತಾ ರೇ-ದಿಗಂತ್​ಗೆ ಸಿಸಿಬಿ ನೋಟಿಸ್

arunakunigal

ಬೆಂಗಳೂರು: 'ಮಾದಕ' ನಟಿ ರಾಗಿಣಿ ದ್ವಿವೇದಿ ಜೈಲಿಗೆ ಹೋಗುತ್ತಿದ್ದಂತೆ ಸ್ಯಾಂಡಲ್​ವುಡ್​ನ ಮತ್ತೊಂದು ಜೋಡಿಗೆ ಸಿಸಿಬಿ ನೋಟಿಸ್​ ಜಾರಿ ಮಾಡಿದೆ.

ನಟಿ ಐಂದ್ರಿತಾ ರೇ ಮತ್ತು ನಟ ದಿಗಂತ್​ಗೆ ನೋಟಿಸ್​ ಜಾರಿ ಮಾಡಿರುವ ಸಿಬಿಬಿ, ನಾಳೆ(ಬುಧವಾರ) ಬೆಳಗ್ಗೆ 11 ಗಂಟೆಗೆ ಕಚೇರಿಗೆ ಹಾಜರಾಗಲು ತಿಳಿಸಿದೆ.

ಶ್ರೀಲಂಕಾದಲ್ಲಿ ಕ್ಯಾಸಿನೋ ವ್ಯವಹಾರ ನಡೆಸುತ್ತಿದ್ದ ಶೇಖ್​ ಫಾಝಿಲ್​ ಶಾಸಕ ಜಮೀರ್​ ಅಹ್ಮದ್​ರ ಆಪ್ತ, ಡ್ರಗ್ಸ್

ಕೇಸ್​ನ ಪ್ರಮುಖ ಆರೋಪಿ ಕೂಡ. ಫಾಝಿಲ್​ ಆಯೋಜಿಸುತ್ತಿದ್ದ ಕ್ಯಾಸಿನೋ ಪಾರ್ಟಿಯಲ್ಲಿ ಪಾಲ್ಗೊಳ್ಳುವಂತೆ ಚಿತ್ರನಟಿಯರಿಂದ ಮಾತನಾಡಿಸಿ ರಾಜಕಾರಣಿಗಳು ಮತ್ತು ಗಣ್ಯರ ಮಕ್ಕಳಿಗೆ ಆಹ್ವಾನ ನೀಡುತ್ತಿದ್ದ. ಇದೇ ರೀತಿ ಕನ್ನಡದ ‘ಮನಸಾರೆ’ ಬೆಡಗಿ ಐಂದ್ರಿತಾ ರೇ ಮೂಲಕವೂ ‘ಕೊಲೊಂಬೋಗೆ ನೀವೂ ಬನ್ನಿ, ನಾನು ಬರ್ತೀನಿ’ ಎಂದು ವಿಡಿಯೋ ಸಂದೇಶ ಮಾಡಿಸಿದ್ದ. ಈ ಬಗ್ಗೆ ಸೋಮವಾರ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು.

ಇದಕ್ಕೆ ಸ್ಪಷ್ಟನೆ ನೀಡಿದ್ದ ಐಂದ್ರಿತಾ ರೇ, ‘ಅದು ಮೂರು ವರ್ಷಗಳ ಹಿಂದಿನ ವಿಡಿಯೋ. ಸಿನಿಮಾ ಪ್ರಮೋಷನ್​ಗಾಗಿ ಶ್ರೀಲಂಕಾಗೆ ಹೋಗಿದ್ದೆ. ಸುಮಾರು-ನಟ-ನಟಿಯರು ಹೋಗಿದ್ದಾರೆ. ಸೆಲೆಬ್ರಿಟಿ ಆಗಿರೋದರಿಂದ ಪಾರ್ಟಿ ಬಗ್ಗೆ ಮಾತನಾಡಿಸಿದ್ದರು. ಆಗ ಫಾಝಿಲ್​ ಬಗ್ಗೆ ನನಗೇನೂ ಗೊತ್ತಿರಲಿಲ್ಲ. ನನಗೂ ಅವರಿಗೂ ಸಂಬಂಧವಿಲ್ಲ. ಡ್ರಗ್ಸ್​ ದಂಧೆ ಬಗ್ಗೆ ನನಗೇನೂ ಗೊತ್ತಿಲ್ಲ’ ಎಂದಿದ್ದರು.