ನ್ಯೂಸ್

ಸಿಬಿಎಸ್​ಇ ಪರಿಷ್ಕೃತ ಪಠ್ಯಕ್ರಮ: ವಿದ್ಯಾರ್ಥಿಗಳಿಗೆ ಶೇ.30 ಹೊರೆ ಕಡಿಮೆ

sspmiracle1982

ನವದೆಹಲಿ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಕೊನೆಗೂ 2020-21ರ ಶೈಕ್ಷಣಿಕ ವರ್ಷದ 9 ರಿಂದ 12 ನೇ ತರಗತಿಗಳ ಪರಿಷ್ಕೃತ ಪಠ್ಯಕ್ರಮವನ್ನು ಬಿಡುಗಡೆ ಮಾಡಿದೆ.
ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಪರಿಷ್ಕೃತ ಪಠ್ಯಕ್ರಮವನ್ನು ಪ್ರಕಟಿಸಿದರು. ಈ ವರ್ಷದ 9 ರಿಂದ 12 ನೇ ತರಗತಿಗಳಿಗೆ ಶೇ. 30 ರಷ್ಟು ಸಿಬಿಎಸ್‌ಇ ಪಠ್ಯಕ್ರಮವನ್ನು ಕಡಿಮೆ ಮಾಡಲಾಗಿದೆ. ಪ್ರಮುಖ ವಿಷಯಗಳಿಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.


ಪಠ್ಯಕ್ರಮವನ್ನು ತರ್ಕಬದ್ಧಗೊಳಿಸುವ ಮತ್ತು ಪ್ರಮುಖ ವಿಷಯಗಳನ್ನು ಉಳಿಸಿಕೊಳ್ಳುವ ಕುರಿತು ಹೆಚ್ಚು ಗಮನವಹಿಸಲಾಗಿದೆ ಎಂದು ಸಚಿವರು ಟ್ವೀಟರ್​ಖಾತೆಯಲ್ಲಿ ತಿಳಿಸಿದ್ದಾರೆ. “ದೇಶ ಮತ್ತು ಜಗತ್ತಿನಲ್ಲಿ ಚಾಲ್ತಿಯಲ್ಲಿರುವ ಅಸಾಧಾರಣ ಪರಿಸ್ಥಿತಿಯನ್ನು ಅವಲೋಕಿಸಿ, ಪಠ್ಯಕ್ರಮವನ್ನು ಪರಿಷ್ಕರಿಸಲು ಮತ್ತು 9-12 ನೇ ತರಗತಿಯ ವಿದ್ಯಾರ್ಥಿಗಳಿಗೆ ಹೊರೆ ಕಡಿಮೆ ಮಾಡಲು ಸಿಬಿಎಸ್‌ಇಗೆ ಸೂಚಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಸಂಪೂರ್ಣ ಪಠ್ಯಕ್ರಮಕ್ಕೆ ಸಿಬಿಎಸ್​​ಇ ವೆಬ್​​ಸೈಟ್ cbseacademic.nic.in ನೋಡಬಹುದು.