More

    ಕೋವಿಡ್ ಭಯದಿಂದ ನೀರಿಗೆ ಜಿಗಿದು ಯುವಕ ಆತ್ಮಹತ್ಯೆ

    ಹೈದರಾಬಾದ್: ತನಗೆ ಕರೊನಾವೈರಸ್ ಸೋಂಕು ತಗಲಿದೆ ಎಂಬ ಭಯದಿಂದಲೇ ಪಶ್ವಿಮ ಬಂಗಾಳ ಮೂಲದ 34 ವರ್ಷದ ವ್ಯಕ್ತಿಯೊಬ್ಬ ಹುಸೇನ್ ಸಾಗರ್ ಸರೋವರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
    ಒಂದು ವಾರದಿಂದ, ಆತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ನಂತರ ಆತನಿಗೆ COVID ರೋಗಲಕ್ಷಣಗಳು ಹೆಚ್ಚಾಗಿ ಕಂಡುಬಂದವು. ಕಾರಣ ವೈದ್ಯರು ಖಾಸಗಿ ಆಸ್ಪತ್ರೆಗೆ ಸೇರುವಂತೆ ಆತನಿಗೆ ಸಲಹೆ ನೀಡಿದರು.

    ಇದನ್ನೂ ಓದಿ: ಕೋವಿಡ್​​-19 ನೆಗೆಟಿವ್ ವರದಿ ತರದಿದ್ದರೆ ಮನೆಗೆ ನೋ ಎಂಟ್ರಿ ಎಂದ ಪತಿ.. ಮುಂದೇನಾಯ್ತು?


    ಆತ ಖಾಸಗಿ ಆಸ್ಪತ್ರೆಗೆ ಹೋಗಿದ್ದನಾದರೂ ಹಾಸಿಗೆಗಳು ಲಭ್ಯವಿಲ್ಲದ ಕಾರಣ ಅಲ್ಲಿ ಆತ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ. ಜುಲೈ 3 ರ ಶುಕ್ರವಾರ ಸಂಜೆ ಆತನಿಗೆ ಉಸಿರಾಟದ ತೊಂದರೆಯುಂಟಾಯಿತು. ತನ್ನ ಸ್ನೇಹಿತನನ್ನು ಕರೆದು ಟ್ಯಾಂಕ್ ಬಂಡ್‌ಗೆ ಕರೆದೊಯ್ಯಲು ಕೇಳಿಕೊಂಡ. ಆದರೆ ಮುಂದೆ ಆತ ಆಟೋದಲ್ಲಿ ಬಂದಿಳಿದು, ಸ್ವಲ್ಪ ದೂರ ನಡೆದು ಸರೋವರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭಾನುವಾರ ಮಧ್ಯಾಹ್ನ ಆತನ ಶವವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಮ್‌ಗೋಪಾಲ್‌ಪೇಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಬಾಬು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. 

    ಆನ್​ಲೈನ್ ಶಿಕ್ಷಣ ಪಡೆಯುವ ವಿದೇಶಿ ವಿದ್ಯಾರ್ಥಿಗಳ ವೀಸಾ ಹಿಂಪಡೆಯಲು ಮುಂದಾದ ಅಮೆರಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts